10 ಜನ ಅಂತರ್ ರಾಜ್ಯ ದರೋಡೆಕೋರರ ಬಂಧನ
ವೆಂಕಟೇಶ ದೇಶಪಾಂಡೆ -ಅಥಣಿ
ಅಥಣಿ 11: ಬಾಗಲಕೋಟ್ ಜಿಲ್ಲೆಯ ಜಮಖಂಡಿ, ಬೆಳಗಾವಿ ಜಿಲ್ಲೆಯ ಕುಡಚಿ, ಅಥಣಿ, ಹಾರೂಗೇರಿ ಪೊಲೀಸ್ ಠಾಣೆಗಳ 7 ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರ್ ರಾಜ್ಯ ದರೋಡೆ ಖೋರರ 10 ಜನರಿರುವ ತಂಡವನ್ನು ಬಂಧಿಸಿ ದರೋಡೆ ಮಾಡಿದ ಮತ್ತು ದರೋಡೆಗೆ ಬಳಸುತ್ತಿದ್ದ ವಸ್ತುಗಳನ್ನು ಡಿವೈಎಸ್ಪಿ ಗಿರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ಅಥಣಿ ಪೊಲೀಸ್ ತಂಡ ಬಂಧಿಸಿದೆ.
ಬಂಧಿತ ಆರೋಪಿಗಳು ಎಟಿಎಮ್ ಒಡೆಯುವುದು, ಮೋಟಾರ್ ಬೈಕ್ಗಳನ್ನು ಕದಿಯುವುದು, ಮಧ್ಯದ ಅಂಗಡಿ ಸೇರಿದಂತೆ ಇತರೆ ಅಂಗಡಿಗಳನ್ನು ಲೂಟಿ ಮಾಡುವ ಧಂದೆಯಲ್ಲಿ ತೊಡಗಿದ್ದ ದರೋಡೆಖೋರರ ತಂಡ ಕಳೆದ ಅನೇಕ ತಿಂಗಳಿನಿಂದ ಪೊಲೀಸ್ ರಿಂದ ಕಣ್ಣು ತಪ್ಪಿಸಿ ತಿರಗುತ್ತಿದ್ದವು, ಇತ್ತೀಚಿಗೆ ಅಥಣಿಯ ಹೊರವಲಯದ ಶಿವಕುಮಾರ ಅಪರಾಜ ಮಾಲಿಕತ್ವದ ವೆಂಕಟೇಶ್ವರ ವೈನ್ ಶಾಪನ ಸೆಕ್ಯೂರಿಟಿ ಗಾರ್ಡನ ಕೈ ಕಾಲು ಕಟ್ಟಿ ಹಾಕಿ ಹಾಗೂ ಕುಡಚಿಯ ಬ್ಯಾಂಕೋಂದರ ಎಟಿಎಮ್ ಮಶೀನ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ ಹಾಗೂ ಅಪರಾಧ ವಿಭಾಗದ ಪಿಎಸ್ಐ ಶಿವರಾಜ ನಾಯಕವಾಡಿ ಇವರ ನೇತೃತ್ವದ ವ್ಹಿ.ಜಿ.ಆರೇರ, ಎ.ಎಸ್.ಐ ಎಚ್.ಸಿ.ಗಡಾದ, ಎ.ಎ.ಈರಕರ, ಪಿ.ಬಿ.ನಾಯಿಕ, ಎಮ್.ಬಿ.ದೊಡಮನಿ ಪೊಲೀಸ್ ತಂಡ 10 ಜನರಿರುವ ದರೋಡೆ ತಂಡವನ್ನು ಪತ್ತೆ ಹಚ್ಚಿ ಬಂಧಿಸಿದೆ. ದರೋಡೆ ತಂಡದಿಂದ ಅಂದಾಜು 2 ಲಕ್ಷ ರೂ.ಗಳ ಕಾರು, 1 ಲಕ್ಷ 45 ಸಾವಿರ ರೂಗಳ ಮಧ್ಯದ ಬಾಕ್ಸ, 1ಲಕ್ಷ 20 ಸಾವಿರ ರೂ.ಗಳ ಮೋಟಾರ್ ಬೈಕ್ ಜೊತೆಗೆ ಎಟಿಎಮ್ ಕಳ್ಳತನಕ್ಕೆ ಬಳಸುತ್ತಿದ್ದ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ರಡ್ಡೇರಹಟ್ಟಿಯ ರಾಜು ಬಸಪ್ಪ ಗಳತಗಿ, ಸಂಜು ಬಸಪ್ಪ ಗಳತಗಿ, ಶಿವಾನಂದ ರುದ್ರಪ್ಪ ಶಿರಹಣ್ಣವರ, ಮಹಾಂತೇಶ ವಸಂತ ಗಳತಗಿ ಹಾಗೂ ಅಲಕನೂರ ಗ್ರಾಮದ ರಾಮಚಂದ್ರ ಬಸಪ್ಪ ಬಿಸನಾಳ, ಸಿದ್ಧರಾಮ ಶ್ರೀಮಂತ ಪಾಟೀಲ, ಜಯಂತ ಬಸಪ್ಪ ಲಗಳಿ, ಆಕಾಶ ಬಸಪ್ಪ ಲಗಳಿ, ಸುನೀಲ ಶಿವಶಂಕರ ಗಡ್ಡಿ ಇವರನ್ನು ಬಂಧಿಸಲಾಗಿದೆ. ಈ ದರೋಡೆಖೋರರ ತಂಡ ಬಂಧಿಸಿದ ಪೊಲೀಸ್ ತಂಡಕ್ಕೆ ಬೆಳಗಾವಿ ಆರಕ್ಷಕ ಅಧಿಕ್ಷಕರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಅಂತರ್ ಜಿಲ್ಲಾ ದರೋಡೆಖೋರರ ತಂಡವನ್ನು ಅಥಣಿ ಪೊಲೀಸ್ ತಂಡ ಬಂಧಿಸಿದೆ.