ಯರಗಟ್ಟಿ

ಪಿಡಿಒಗೆ 10 ಲಕ್ಷ ರೂ. ಬೇಡಿಕೆ: 9 ಆರೋಪಿಗಳ ಬಂಧನ

ಪಿಡಿಒಗೆ 10 ಲಕ್ಷ ರೂ. ಬೇಡಿಕೆ: 9 ಆರೋಪಿಗಳ ಬಂಧನ

ಯರಗಟ್ಟಿ 23: ಸಮೀಪದ ಗೊಡಚಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೆಆರ್‌ಎಸ್ ಪಕ್ಷದವರು ಎಂದು ಹೇಳಿಕೊಂಡು 10 ಲಕ್ಷ ರೂ.ಗೆ ಬೇಡಿಕೆ ಇಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿದ 9 ಜನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.  

ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಎಂದು ಹೇಳಿಕೊಂಡ ಕುನ್ನಾಳ ಗ್ರಾಮದ ಶಿವಾನಂದ ಹಾಲಪ್ಪಗೋಳ ಹಾಗೂ ಸದಸ್ಯರೆಂದು ಹೇಳಿಕೊಂಡಿರುವ ತಲ್ಲೂರ ಗ್ರಾಮದ ಹನುಮಂತ ಮಡಿವಾಳರ, ತೋಟಗಟ್ಟಿ ಗ್ರಾಮದ ಬಾಳೇಶ ಇಳಿಗೇರ, ಈರ​‍್ಪ ನಿಂಗಪ್ಪ ಕೊಡ್ಲಿವಾಡ, ಶೇಖರ ಕಲ್ಲೇದ, ಚರಂತಯ್ಯ ಈರಪಯ್ಯ ಪೂಜೇರ, ಬಸಯ್ಯ ಗಂಗಯ್ಯ ಪೂಜೇರ, ಭೀಮಣ್ಣ ಸಿದ್ದಪ್ಪ ರೊಕ್ಕದಕಟ್ಟಿ ಹಾಗೂ ಜಮಖಂಡಿ ತಾಲೂಕಿನ ಸಾವಳಗಿಯ ಸಾಗರ ಬಸಪ್ಪ ಕುಂಬಾರ ಎಂಬುವರು ಗೊಡಚಿ ಪಿಡಿಒಗೆ 'ಲಂಚ ತಿಂದಿದ್ದೀಯಾ, ನಿನ್ನನ್ನು ಅಮಾನತು ಮಾಡಿಸುತ್ತೇವೆ ಎಂದು ಹೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ