ತಾಳಿಕೋಟಿ

ಪಟ್ಟಣದ ಅಭಿವೃದ್ಧಿಗೆ 10ಕೋಟಿ ವಿಶೇಷ ಅನುದಾನ

ಪಟ್ಟಣದ ಅಭಿವೃದ್ಧಿಗೆ 10ಕೋಟಿ ವಿಶೇಷ ಅನುದಾನ
ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅಧಿಕಾರಿಗಳ ಸಭೆ ನಡೆಸಿದರು.

ಟೆಂಡರ್ ಪ್ರಕ್ರಿಯೇ ಶೀಘ್ರದಲ್ಲಿಯೇ ಮುಕ್ತಾಯಗೊಳಿಸಲು ಸೂಚನೆ 

ತಾಳಿಕೋಟೆ 08:ಪಟ್ಟಣದ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ ಮಂಜುರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗಳ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಮುದ್ದೇಬಿಹಾಳ ಶಾಸಕ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಸೂಚಿಸಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಹಿಂದುಳಿದ ಮುದ್ದೇಬಿಹಾಳ ಮತಕ್ಷೇತ್ರದ ಬಗ್ಗೆ ಮುಖ್ಯಮಂತ್ರಿಗಳಿಗೆ ವಿಶೇಷ ಕಾಳಜಿ ಇದೆ. ಹಿಗಾಗಿ ನಾನು ಕೇಳಿದಷ್ಟು ಅನುದಾನವನ್ನು ನೀಡುತ್ತಿದ್ದಾರೆ. ಈ ಹಿಂದೆ 15 ಕೋಟಿ ಅನುದಾನ ಮಂಜೂರಾಗಿದ್ದು ಪಟ್ಟಣದ ಮುಖ್ಯ ರಸ್ತೆಗಳ ಅಬಿವೃದ್ಧಿ ಮಾಡಲಾಗಿದೆ. ಸದ್ಯ 10 ಕೋಟಿ ಅನುದಾನ ಮಂಜೂರಾಗಿದೆ. ಇದರಲ್ಲಿ 3 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಅನುದಾನ, ಉಳಿದ ಮೊತ್ತದಲ್ಲಿ ಅವಶ್ಯವಿದ್ದ ಕಡೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿ ಕೈಕೊಳ್ಳಬೇಕು. ಪುರಸಭೆ ನೂತನ ಕಟ್ಟಡ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಬೇಕು. ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಒಂದು ವಾರದಲ್ಲಿ ಸರಕಾರಕ್ಕೆ 50 ಕೋಟಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳಿಗೆ ಅತಿ ಹೆಚ್ಚು ಅನುದಾನ ತಂದಿದ್ದೇನೆ. ನನ್ನ ವೇಗಕ್ಕೆ ತಕ್ಕನಾಗಿ ಅಧಿಕಾರಿಗಳು ಸಹ ಕಾರ್ಯನಿರ್ವಹಿಸುತ್ತಿರುವದರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಸ್ಲಂ ಬೋರ್ಡನಿಂದ 474 ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು ಸದ್ಯ ಫಲನುಭವಿಗಳು ಅರ್ಜಿ ಸಲ್ಲಿಸುತ್ತಿಲ್ಲ. ಮನೆಯ ಜಾಗ ಇದ್ದವರನ್ನು ಗುರುತಿಸಿ ಮನೆಗಳ ನಿರ್ಮಾಣ ಮಾಡಬೇಕು. ಜಿ ಫ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ಶಿಘ್ರದಲ್ಲಿಯೇ ಆರಂಭವಾಗಲಿದೆ. ಪಟ್ಟಣದಲ್ಲಿ ವಿದ್ಯುತ್ ತೊಂದರೆ ತಿರ್ವವಾಗಿದೆ. ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇನ್ನು ನೂತನ ಲೇಓಟಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ರಸ್ತೆ, ನೀರು, ವಿದ್ಯುತ್ ಕಾಮಗಾರಿಗಳು ಮುಕ್ತಯವಾದ ನಂತರವೇ ಲೇಓಟಗಳ ಉಳಿದ ಮನೆಗಳ ಬಿಟ್ಟುಕೊಡಬೇಕು. ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ಹಮಾಲರಿಗಾಗಿ ಮನೆಗಳ ನಿರ್ಮಾಣಕ್ಕೆ 2 ಎಕರೆ ಜಾಗ ಮಂಜೂರಾಗಿದ್ದು ಶೀಘ್ರದಲ್ಲಿಯೆ ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿಲು ತಿಳಿಸಿದರು. ರೈತರ ಪೋಡಿ ಪ್ರಕರಣಗಳಲ್ಲಿ ತಡವಾಗುತ್ತಿದ್ದು ಶೀಘ್ರವಾಗಿ ಪೋಡಿ ಪ್ರಕರಣಗಳ ಇತ್ಯರ್ಥವಾಗಬೇಕು. ಐತಿಹಾಸಿಕ ವಿಜಯನಗರ ಸಾಮ್ರಾಜ್ಯ ಪತನವಾಗಿದ್ದು ಮುದ್ದೇಬಿಹಾಳ ತಾಲೂಕಿನಲ್ಲಿ. ವಿಜಯ ನಗರ ಅರಸರು ಸೇರಿದಂತೆ ಐತಿಹಾಸಿಕ ತಾಣಗಳ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅವುಗಳ ಪರಿಚಯ ಮಾಡಿಸಬೇಕಿದೆ. ಅದಕ್ಕೆ ಮೊದಲು ಮೂಲಭೂತ ಸೌಲಭ್ಯಗಳ ಒದಗಿಸಿ ನಂತರ ಪಳವಳಿಕೆ ರಕ್ಷಣೆಗೆ ಮುಂದಾಗಲ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. 

ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಗೋಟೋರ, ಜಿಲ್ಲಾ ನಗರಾಭಿವೃದ್ದಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅನೀಲಕುಮಾರ ಮುದ್ದಾ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸ್ಲಂ ಬೋರ್ಡ ಸಹಾಯಕ ಇಂಜೀನಿಯರ ಆರ್‌.ಎಂ.ಚವ್ಹಾಣ, ಎಪಿಎಂಸಿ ಕಾರ್ಯದರ್ಶಿ ಬಿ.ಎಲ್‌.ಜುಮನಾಳ, ಹೆಸ್ಕಾಂನ ಎಇಇ ಟಿ.ಬಿ.ರಾಠೋಡ, ಸಹಾಯಕ ಇಂಜಿನಿಯರ ಶಿವನಗೌಡ ಪಾಟೀಲ, ಸರ್ವೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಎಮ್‌.ಸಜ್ಜನ, ಲೋಕಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ ಡಿ.ಬಿ.ಕಲಬುರ್ಗಿ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಮುತ್ತಪ್ಪ ಚಮಲಾಪೂರ, ಮುದಕಣ್ಣ ಬಡಿಗೇರ, ಜೈಸಿಂಗ ಮೂಲಿಮನಿ, ರಾಘವೇಂದ್ರ ವಿಜಾಪೂರ, ಶರಣಗೌಡ ಗೋಟಖಂಡ್ಕಿ, ಶಿವಶಂಕರ ಹಿರೇಮಠ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ