ಬಸವೇಶ್ವರ ಸಹಕಾರ ಸೊಸಾಯಿಟಿಗೆ 1.68 ಕೋಟಿ ರೂ ಲಾಭ

ಯರಗಟ್ಟಿ 06: ಸ್ಥಳೀಯ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು 2023-24 ನೇ ಸಾಲಿನಲ್ಲಿ ನಿವ್ವಳ 1.68ಕೋಟಿ ರೂ ನಿವ್ವಳ ಲಾಭವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಬಳೇಶ್ವ ಹಾದಿಮನಿಯವರು ತಿಳಿಸಿದ್ದಾರೆ. 

ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ ಅವರು ಸಂಘವು ಮೂರು ಶಾಖೆಗಳನ್ನು ಹೊಂದಿದ್ದು, 2,17,08,425-00 , 56,97,07,819-00 5 2, 2,09,67,741-00 ರೂ ಕಾಯ್ದಿಟ ನಿಧಿ ಹಾಗೂ 3,95,92,656=00 ರೂ ಇತರ ನಿಧಿಗಳನ್ನು ಹೊಂದಿದೆ. ಅಲ್ಲದೆ 41,50,13,708=00 ರೂ ಸಾಲ ವಿತರಣೆ ಮಾಡಿದ್ದು, 46,65,25,320=00 ರೂ ಠೇವುಗಳನ್ನು ಹೊಂದಿದೆ.  

ಸಂಘ ವ್ಯವಹಾರದ ಜೊತೆಗೆ ಸದಸ್ಯರಿಗೆ ಸೇಫ್ ಲಾಕರ್ ಸೇವೆ ಒದಗಿಸುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹಾಗೂ ಸಂಘವು 2022-23 ನೇ ಸಾಲಿನಲ್ಲಿ ಸದಸ್ಯರಿಗೆ 25ಅ ಡಿವಿಡೆಂಡ್ ವಿತರಣೆ ಮಾಡಿದ್ದು ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದಕ್ಕೆ ಸದಸ್ಯರ, ನಿರ್ದೇಶಕ ಮಂಡಳಿ, ಶಾಖಾ ಸಲಹಾ ಸಮಿತಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಅತಿ ಅಮೂಲ್ಯವಾದದ್ದು ಎಂದು ಸಭೆಯಲ್ಲಿ ತಿಳಿಸಿದರು.