ಓದುವ ಬೆಳಕು ಗ್ರಂಥಾಲಯ ಯೋಜನೆ ಸಿಇಓ ಪ್ರಿಯಾಂಗ ಅನುಷ್ಠಾನ
11 ತಾಲೂಕುಗಳಿಂದ 33 ಗ್ರಂಥಾಲಯಗಳು ಬ್ರ್ಯಾಂಡಿಂಗ್
* ಜಿಲ್ಲೆಯಲ್ಲಿ 9692 ವಿದ್ಯಾರ್ಥಿಗಳಿಗೆ ಪ್ರಯೋಜನ
* ಗ್ರಂಥಾಲಯಗಳಿಗೆ ಸೌಲಭ್ಯಗಳ ಪೂರೈಕೆ
* ಜಿಲ್ಲೆಯ ಪ್ರತಿ ತಾಲೂಕಿನ 3 ಗ್ರಂಥಾಲಯಗಳ ಆಧುನಿಕರಣ.
* ಗ್ರಂಥಾಲಯಗಳಿಗೆ ಹೊಸ ಕಳೆ
ಕಾರವಾರ ೧೧ : ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳು ಈಗ ಮದುವಣಗಿತ್ತಿಯಂತೆ ಶೃಂಗಾರಗೊಂಡಿವೆ. ಅಲ್ಲಿನ ವೈವಿಧ್ಯಮಯ ಪುಸ್ತಕಗಳು ಗ್ರಂಥಾಲಯಗಳಲ್ಲಿ ಲಭ್ಯವಿರುವುದರಿಂದ ವಿದ್ಯಾರ್ಥಿಗಳು ಗ್ರಂಥಾಲಯಗಳತ್ತ ಮುಖಮಾಡಿದ್ದಾರೆ. ಗ್ರಂಥಾಯಲಗಳು ಹೊಸ ಕಳೆಯಿಂದ ಕಂಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳು ಗ್ರಂಥಾಲಯಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಗ್ರಂಥಾಲಯಗಳನ್ನು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಗೋಡೆಗಳಿಗೆ ಪರಿಸರದ ಚಿತ್ರ ಬಿಡಿಸಿದ್ದು,… ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ಗ್ರಂಥಾಲಯದಲ್ಲಿನ ಪುಸಕ್ತಗಳ ಹಿಡಿದು ಕೋಣೆಯದ ಓದಿನಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳು ಕಂಡು ಬರುತ್ತಿದ್ದಾರೆ. ಗ್ರಾಮ ಪಂಚಾಯತಿಗಳ ಗ್ರಂಥಾಲಯದಲ್ಲೀಗ ಹೊಸ ಉಸಿರು, ನೂತನ ಉಲ್ಲಾಸ ಕಾಣಿಸತೊಡಗಿದೆ. ಉತ್ತರಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ,ಪ್ರಿಯಾಂಗ ಅವರ ಕನಸಿನಿಂದ ಗ್ರಂಥಾಲಯಗಳನ್ನು ಉನ್ನತ ದರ್ಜೆಗೆ ಏರಿಸಲಾಗಿದೆ. ಸುಣ್ಣ ಬಣ್ಣ ಕಾಣದಿದ್ದ ಗ್ರಂಥಾಲಯಗಳು , ಇದೀಗ ಉನ್ನತೀಕರಣ ಮಾಡಿ ಬ್ರ್ಯಾಂಡಿಂಗ್ ಮಾಡಲಾಗಿದೆ. ಸರಕಾರ ಜಾರಿಗೆ ತಂದ ಓದುವ ಬೆಳಕು ಕಾರ್ಯಕ್ರಮದ ಮೂಲಕ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳು ಹೊಸತನ ಪಡೆದುಕೊಂಡಿವೆ.
ಓದುವ ಬೆಳಕು ಕಾರ್ಯಕ್ರಮದ ಪ್ರಯೋಜನ ಪಡೆದವರು -ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಮೂರು ಗ್ರಂಥಾಲಯವನ್ನು ಬ್ರ್ಯಾಂಡಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ 33 ಗ್ರಂಥಾಲಯವನ್ನು ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಅಂಕೋಲಾ 591, ಭಟ್ಕಳ 477, ಶಿರಸಿ 558, ಮುಂಡಗೋಡ 264, ದಾಂಡೇಲಿ 350, ಹಳಿಯಾಳ1123, ಸಿದ್ದಾಪುರ 567, ಹೊನ್ನಾವರ 293, ಕಾರವಾರ 115, ಯಲ್ಲಾಪುರ 493, ಜೊಯಿಡಾ 392, ಕುಮಟಾ 1130 ವಿದ್ಯಾರ್ಥಿಗಳು ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.
ಓದುವ ಬೆಳಕು ಎಂದರೇನು :
ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಮಕ್ಕಳು ಸಾಮಾಜಿಕವಾಗಿ, ಭಾವನಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಶಾಲೆಗಳು ಮುಚ್ಚಿರುವುದರಿಂದ ಕಲಿಕೆಯಲ್ಲಿ ಉಂಟಾಗಿರುವ ನಷ್ಟದ ಜೊತೆಗೆ ಶೈಕ್ಷಣಿಕ ಬೆಳವಣಿಗೆಗೂ ಹಿನ್ನಡೆಯಾಗಿತ್ತು. ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಮಕ್ಕಳು ಪ್ರಸ್ತುತ ಪರಿಸ್ಥಿತಿಯಿಂದಾಗಿ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗೆ ಸಿಲುಕುತ್ತಿದ್ದಾರೆ. ಮಕ್ಕಳಿಗೆ ಆಗುತ್ತಿರುವ ಮತ್ತಷ್ಟು ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಹಾಗೂ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಆಶಾಕಿರಣವಾದವು. ಈ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಓದುವ ಬೆಳಕು ಉಪಕ್ರಮಕ್ಕೆ ಮುಂದಾಗಿತ್ತು. ಸರಕಾರ ಜಾರಿಗೆ ತಂದಿರುವ ಈ ಯೋಜನೆಯಂತೂ ಉತ್ತರಕನ್ನಡ ಜಿಲ್ಲೆಯಲ್ಲಿ ಅಕ್ಷರಶಃ ಜಾರಿಗೆ ಬಂದಿದೆ.
ಓದುವ ಬೆಳಕು ಕಾರ್ಯಕ್ರಮ ;
ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ 6 ರಿಂದ 18 ವರ್ಷದ ವಯಸ್ಸಿನ ಮಕ್ಕಳಿಗಾಗಿಯೇ ಆಯ್ಕೆ ಮಾಡಲಾದ ಪುಸ್ತಕಗಳನ್ನು ಪ್ರತ್ಯೇಕ ವಿಭಾಗವನ್ನಾಗಿಸಲಾಗಿದೆ. ದಾನಿಗಳು, ಸ್ವಯಂ ಸೇವಾ ಸಂಸ್ಥೆಯವರು ಹಾಗೂ ಕಾರ್ಪೋರೇಟರ್ ಸಂಸ್ಥೆಗಳು ನೀಡುವ ಹೊಸ ಪುಸ್ತಕಗಳಿಂದ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ 6 ರಿಂದ 18 ವಯಸ್ಸಿನ ಮಕ್ಕಳನ್ನು ಗುರುತಿಸಿ, ಗುರುತಿಸಲಾದ ಮಕ್ಕಳ ಪಟ್ಟಿಯನ್ನು ವಾರ್ಡ, ಗ್ರಾಮವಾರು ವಿಂಗಡಿಸಿಕೊಂಡು ನಂತರ ವಾರ್ಡ, ಗ್ರಾಮವಾರು ಸಮಯವನ್ನು ನಿಗದಿಪಡಿಸಿ ಮಕ್ಕಳ ನೊಂದಣಿ ಅಭಿಯಾನ ನಡೆಸುವುದು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಓ ಮೂಲಕ ಗ್ರಾಮ ಪಂ. ಶಿಕ್ಷಣ ಕಾರ್ಯಪಡೆಯ ಸದಸ್ಯರ ನೆರವಿನೊಂದಿಗೆ ಗ್ರಾಮೀಣ ಪ್ರದೇಶದ 6 ರಿಂದ 18 ವಯಸ್ಸಿನ ಮಕ್ಕಳು ಉಚಿತವಾಗಿ ಗ್ರಂಥಾಲಯಗಳಲ್ಲಿ ನೊಂದಾಯಿಸಿಕೊಳ್ಳುವಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮಕ್ಕಳನ್ನು ಗ್ರಾಮ ಪಂ. ಗ್ರಂಥಾಲಯಗಳಿಗೆ ನೊಂದಾಯಿಸಲು ಮಕ್ಕಳ ದಿನಾಚರಣೆ ಪ್ರಯುಕ್ತ ಸಾಂಕೇತಿಕ ಕಾರ್ಯಕ್ರಮ ಆಯೋಜಿಸಿ ಪ್ರಾರಂಭಿಸುವ ಮೂಲಕ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಪ್ರತಿದಿನ ನೊಂದಾಯಿಸಲಾದ ಮಕ್ಕಳ ಸಂಖ್ಯೆಯನ್ನು ಪಂಚತಂತ್ರ ತಂತ್ರಾಂಶದಲ್ಲಿ ದಾಖಲಿಸುವುದು. ಈ ರೀತಿ ನೊದಾಯಿತಗೊಂಡ ಎಲ್ಲಾ ಮಕ್ಕಳಿಗೆ ಒಂದು ಪುಸ್ತಕವನ್ನು ನೀಡಲು, ಸದಸ್ಯತ್ವ ಭದ್ರತಾ ಠೇವಣಿಯನ್ನು ಗ್ರಾ. ಪಂ. ನಿಂದ ಸಂಗ್ರಹಿಸಲಾಗುವ ಗ್ರಂಥಾಲಯ ಸೆಸ್ ನಿಂದ ಭರಿಸಲು ಸೂಚಿಸಲಾಗಿದೆ. ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಮತ್ತು ಪರಿಣಿತ ನಿವೃತ್ತ ಶಿಕ್ಷಕರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಗ್ರಾ. ಪಂ. ಗ್ರಂಥಾಲಯಗಳಲ್ಲಿ ಚಟುವಟಿಕೆಗಳನ್ನು ಕೈಗೊಳಲು ಸಹ ಸೂಚಿಸಲಾಗಿದೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಓದುವ ಬೆಳಕು ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿ ರೂಪದಲ್ಲಿ ಜಾರಿಯಾಗಿದೆ. ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುವ ಬೆಳಕು ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ.
ಗ್ರಾಮ ಪಂಚಾಯತಿಯು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಹಾಗೂ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಆಶಾಕಿರಣವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಾರಿಗೆ ತಂದಿರುವ ಓದುವ ಬೆಳಕು ಕಾರ್ಯಕ್ರಮ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮೂರು ಗ್ರಂಥಾಲಯವನ್ನು ಬ್ರ್ಯಾಂಡಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ 33 ಗ್ರಂಥಾಲಯವನ್ನು ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ 9692 ವಿದ್ಯಾರ್ಥಿಗಳು ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.
- ಪ್ರಿಯಾಂಗ ಎಮ್
ಸಿಇಓ , ಜಿಲ್ಲಾ ಪಂಚಾಯತ್ ಉತ್ತರಕನ್ನಡ .