ಡಿ.ಕೆ.ಶಿವಕುಮಾರ ಅವರ ಬಗ್ಗೆ ಹಾಲಿ ಶಾಸಕ ಬಳ್ಳಾರಿ ಅವರು ಲಘುವಾಗಿ ಮಾತನಾಡಿರುವುದು ತೀವ್ರ ಖಂಡನೀಯ
ಬ್ಯಾಡಗಿ: ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಬಗ್ಗೆ ಹಾಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಲಘುವಾಗಿ ಮಾತನಾಡಿರುವುದನ್ನು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ತೀವ್ರವಾಗಿ ಖಂಡಿಸಿದ್ದಾರೆ.ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಹಾಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಜವಾಬ್ದಾರಿಯುತ ಶಾಸಕರಾಗಿ ಪರಿಜ್ಞಾನ ಇಲ್ಲದವರಂತೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದವರು ಟಿಕೇಟ್ ಕೊಡುತ್ತೆವೆಂದು ನನ್ನ ಮನೆಗೆ ಬಂದಿದ್ದರು ಎಂದು ಹೇಳುತ್ತಿದ್ದಾರೆ. ಅದು ಯಾವ ಕಾಲದಲ್ಲಿ ಹೇಳಿದ್ದಾರೋ..?ಅಥವಾ ಹಗಲುಗನಸು ಕಂಡಿದ್ದರೋ...ಮೊದಲು ಇದನ್ನು ಬಹಿರಂಗ ಪಡಿಸಲಿ. ಇದೆಲ್ಲ ಜನರನ್ನು ಹಾದಿ ತಪ್ಪಿಸುವಂತಹ ಹುನ್ನಾರವಾಗಿದೆ ಎಂದರಲ್ಲದೇ, ಈಗಾಗಲೇ ಯು.ಬಿ.ಬಣಕಾರ ಹಾಗೂ ಸೋಮಣ್ಣ ಬೇವಿನಮರದ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದಲ್ಲಿದ್ದವರಿಗೆಯೇ ಟಿಕೇಟ್ ಸಿಗ್ತಿಲ್ಲ:ಪಕ್ಷದಲ್ಲಿದ್ದವರಿಗೆ ಟಿಕೆಟ್ ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೇರೆಯವರಿಗೆ ಟಿಕೇಟ್ ಕೊಡಲು ಸಾಧ್ಯವೇ ಇಲ್ಲ. ಆದರೂ ಕೂಡ ಬಿಜೆಪಿಯ ಕೆಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಆದರೆ ಯಾರ ಹೆಸರನ್ನು ಹೇಳಿಲ್ಲ ಎಂದರಲ್ಲದೇ ಸ್ಥಳೀಯ ಮುಖಂಡರನ್ನು ಕೇಳದೇ ನಮ್ಮ ಹೈಕಮಾಂಡ್ ನವರು ನಿಧರ್ಾರ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ನಮ್ಮಲ್ಲಿ ಸೀಟ್ ಖಾಲಿನೇ ಇಲ್ಲ ಎಂದರು. ಆಮಿಷ ತೋರಿಸಿ ಸಮಾವೇಶ ಮಾಡಿಲ್ಲ:ಹಾವೇರಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶಕ್ಕೆ ಜನರು ಸ್ವಯಂಪ್ರೇರಿತರಾಗಿ ಆಗಮಿಸಿದ್ದರು. ಆದರೆ, ಬಿಜೆಪಿಯವರು ಬ್ಯಾಡಗಿಯಲ್ಲಿ ನಡೆದ ಜನಸಂಕಲ್ಪ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಂದ ಸಂದರ್ಭದಲ್ಲಿ ಸೀರೆ ಹಾಗೂ ಹಣದ ಅಮಿಷ ತೋರಿಸಿ ಜನರನ್ನು ಸೇರಿಸಿದ್ದರು ಎಂದು ಆರೋಪಿಸಿದರಲ್ಲದೇ, ಈಗ ಏನನ್ನು ಕೊಟ್ಟು ಜನರನ್ನು ಸೇರಿಸುತ್ತಾರೋ.. ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.ಈ ಸಂದರ್ಭದಲ್ಲಿ ಪದವಿ ಮತ್ತು ಶಿಕ್ಷಕರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ, ಪುರಸಭೆ ಮಾಜಿ ಸದಸ್ಯ ಮಂಜುನಾಥ ಬೋವಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ನಾಯಕ ಉಪಸ್ಥಿತರಿದ್ದರು