ವಿಮಾನ ನಿಲ್ದಾಣ ನಿಮರ್ಾಣಕ್ಕೆ ವಿರೋಧಿಸಿ ಪ್ರತಿಭಟನೆ
ಬಳ್ಳಾರಿ 01:ತಾಲೂಕಿನ ಸಿರವಾರ ಮತ್ತು ಚಾಗನೂರು ನೀರಾವರಿ ಜಮೀನಿನಲ್ಲಿ ವಿಮಾನ ನಿಲ್ದಾಣ ನಿಮರ್ಿಸಲು ಬೇಡ ಎಂದು ಆ ಗ್ರಾಮದ ರೈತರು ನಡೆಸಿದ ಹೋರಾಟ ದಶಕದ ನೆನೆಪಿಗಾಗಿ ಶುಕ್ರವಾರ ನಗರದಲ್ಲಿ ಎತ್ತಿನಬಂಡಿಗಳ ಮೆರವಣಿಗೆಯನ್ನು ರೈತರು ನಡೆಸಿದರು. ಸಿರವಾರ ಮತ್ತು ಚಾಗನೂರು ಮತ್ತಿತರರ ಗ್ರಾಮಗಳಿಂದ ನೂರಾರು ರೈತರು ಎತ್ತಿನಬಂಡಿಗಳ ಮೂಲಕ ಬಂದು ರಾಗವಕಲಾಮಂದಿರದ ಬಳಿಯಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದರು. ಈ ಹೋರಾಟದಲ್ಲಿ ಭಾಗವಹಿಸಿದ್ದ ಮುಖಂಡರುಗಳಾದ ಜಿ.ಎಸ್.ನಾಗರಾಜ, ಮಾರುತಿ ಮನ್ನಾಡೆ, ಚಾಗನೂರು ಮಲ್ಲಿಕಾಜರ್ುನರೆಡ್ಡಿ, ಕೆ.ಮಾದವರೆಡ್ಡಿ, ಟಿ.ಜಿ.ವಿಠ್ಠಲ್ ಇನ್ನೂ ಮೊದಲಾದ ಹೋರಾಟಗಾರರು ಈ ಮೆರವಣಿಗೆ ಮತ್ತು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಚಾಗನೂರು ಹೋರಾಟದ ನೆನಪಿನಿಂದ ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯಗಳ ಬಗ್ಗೆ ಮುಂದಿನ ಹೋರಾಟಗಳನ್ನು ರೂಪಿಸಲು ಸ್ಪೂತರ್ಿಗಾಗಿ ಇದನ್ನು ಹಮ್ಮಿಕೊಂಡಿದೆ. ಜನತೆಗೆ ವಿಮ್ಸ್ನಲ್ಲಿ ಸಮರ್ಪಕ ಚಿಕಿತ್ಸಾ ಸೌಲಭ್ಯ, ಕೃಷಿ ಕಾಲೇಜಿಗಾಗಿ ಹೋರಾಟ, ಚಳ್ಳಗುಕರ್ಿ ಸುತ್ತ ಮುತ್ತಲಿನ 12ಕ್ಕೂ ಹೆಚ್ಚು ಹಳ್ಳಿಗಳ ಒಣಭೂಮಿ ನೀರಾವರಿ ಸೌಲಭ್ಯಕ್ಕಾಗಿ ಹೋರಾಟ ರೂಪಿಸುವ ಚಿಂತನೆ ಇದೆ ಎಂದಿದ್ದಾರೆ. ಮದ್ಯಾಹ್ನ 2 ಗಂ ಡಾ||ರಾಜಕುಮಾರ ರಸ್ತೆಯಲ್ಲಿರುವ ರಾಗವಕಲಾಮಂದಿರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು ಸಿರವಾರ ರೈತ ಮಹಿಳೆ ಖಾಜಾಬಾನಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಜೆ 6ಕ್ಕೆ ಜೋಳದರಾಶಿ ಗುತ್ತಿ ಚಂದ್ರಶೇಖರ ಅಧ್ಯಕ್ಷತೆಯಲ್ಲಿ ಚಾಗನೂರು. ಸಿರುವಾರ ಜಮೀನು ಸ್ವಾದೀನ ವಿರೋದಿಸಿ ದಶಕದ ಹಿಂದಿನ ಇತಿಹಾಸ ಉಲ್ಲೇಖಿಸಿ ಸಿ.ರಘುನಾಥ ಅವರು ಕನ್ನಡ ಮತ್ತು ತೆಲುಗಿನಲ್ಲಿ ರಚಿಸಿರುವ ನಮ್ಮ ಭೂಮಿ, ನಮ್ಮ ಹೋರಾಟ ಕೃತಿ ಬಿಡುಗಡೆ ನಡೆಯಲಿದೆ. ಲೇಖಕ, ಪ್ರೊ|| ರಹಮತ್ ತರಿಕೇರೆ, ವಿಮರ್ಶಕ ಸೂರ್ಯ ಸಾಗರ್ ಬರಹಗಾರ ಸಿಂಗಮವೇನಿ, ನಾರಾಯಣ ಕಲ್ಲೂರು, ಕೃಷಿ ವಿಜ್ಞಾನಿ ಜಿ.ಎನ್.ನಾಗರಾಜ, ಚಿದಂಬರರೆಡ್ಡಿ, ಗುಡುದೂರು ಸುಲೋಚನಮ್ಮ ಭಾಗವಹಿಸಲಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯ ರೈತಸಂಘದ ವಿ.ನಾರಾಯಣಸ್ವಾಮಿ ಲಕ್ಷ್ಮಮ್ಮ ಚಾಗನೂರು ಅವರ ಅಧ್ಯಕ್ಷತೆಯಲ್ಲಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಜನ ಸಂಗ್ರಾಮ ಪರಿಷತ್ ನ ರಾಘವೇಂದ್ರ ಕುಷ್ಟಗಿ, ರೈತ ಮುಖಂಡ ಚಳ್ಳಗುಕರ್ಿ ಹನುಮನಗೌಡ, ಹೆಚ್.ಆದಿ ನಾರಾಯಣರೆಡ್ಡಿ ಇನ್ನೂ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.