ನವಕನರ್ಾಟಕ ಯುವಶಕ್ತಿ ಮಹಾರಾತ್ರಿ ಮನೋರಂಜನೆ ಭಾರತೀಯ ಸಂಸ್ಕೃತಿಯಲ್ಲಿ ಶಿವರಾತ್ರಿ ಆಚರಣೆ ಮಹತ್ವದ್ದು: ಸಿದ್ದರಾಮ
ಲೋಕದರ್ಶನ ವರದಿ
ಬಳ್ಳಾರಿ 05: ಭಾರತೀಯ ಸಂಸ್ಕೃತಿಯು ಪ್ರಾಚೀನವಾದುದು. ಇಲ್ಲಿನ ಅನೇಕ ಧರ್ಮಗಳು ಹುಟ್ಟಿ ಬಂದಿವೆ. ಇದರಲ್ಲಿ ಶೈವ ಸಂಪ್ರದಾಯದಲ್ಲಿ ಶಿವನನ್ನು ಆರಾಧಿಸುವ ಕ್ರಮವಿದೆ. ಶಿವನನ್ನು ಕುರಿತ ಅನೇಕ ಪೌರಾಣಿಕ ಕಥೆಗಳಿವೆ. ಈ ಹಿನ್ನೆಲೆಯಲ್ಲಿ ಶಿವರಾತ್ರಿಯು ಒಂದಾಗಿದ್ದು, ಧಾಮರ್ಿಕ ದೃಷ್ಟಿಯಿಂದ ಇದು ಮಹತ್ವವನ್ನು ಪಡೆದುಕೊಂಡಿದೆ. ಶಿವರಾತ್ರಿಯು ಆತ್ಮ ಪರಿಶುದ್ಧಿಯ ಒಂದು ಭಾಗವಾಗಿದೆ. ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಎಂಬುದನ್ನು ಬಿಂಬಿಸುತ್ತದೆ. ಶಿವನಾಮ ಸ್ಮರಣೆಯಿಂದ ಆಧ್ಮಾತ್ಕದ ಕಡೆಗೆ ಕೊಂಡೊಯ್ಯುತ್ತದೆ ಎಂದು ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ತಿಳಿಸಿದರು. ``ಮಹಾಶಿವರಾತ್ರಿ ಮನೋರಂಜನೆ'' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವನ ಆರಾಧನೆಯಿಂದ ಸದ್ಗತಿಯನ್ನು ಪಡೆದ ಅನೇಕ ಶರಣರನ್ನು, ಶಿವಭಕ್ತರನ್ನು ಸ್ಮರಿಸುವ ಸಂದರ್ಭವೂ ಹೌದು. ಮನಸ್ಸಿನ ಕೊಳೆಯನ್ನು ತೊಳೆದು ಜ್ಞಾನದ ಮೂಲಕ ಅಂತರಾವಲೋಕನ ಮಾಡಿಕೊಳ್ಳುವ ವ್ಯಕ್ತಿ ವರ್ಷದುದ್ದಕ್ಕೂ ತನ್ನ ವ್ಯವಹಾರಿಕ ಬದುಕಿನ ನಿರತನಾಗಿರುತ್ತಾನೆ. ಶಿವರಾತ್ರಿಯಂದು ದೈವ ಸಾಮಿಪ್ಯವನ್ನು ಪಡೆಯುವ ಮೂಲಕ ತನ್ನ ಉಪವಾಸ ಮತ್ತು ಭಕ್ತಿ ಆಚರಣೆಯಿಂದ ಕೃತಾರ್ಥನಾಗುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾನಗರ ಪಾಲಿಕೆಯ ಉಪ ಆಯುಕ್ತ ಸಿ.ಭೀಮಣ್ಣ ವಹಿಸಿ ಮಾತನಾಡಿ, ಜನಪರ ಸಂಘಟನೆಗಳು ಜನರನ್ನು ಸುಸಂಸ್ಕೃತರನ್ನಾಗಿಸಲು ಧಾಮರ್ಿಕ ಸಂದರ್ಭಗಳಲ್ಲಿ ಮನರಂಜನೆಯೊಂದಿಗೆ ಜೀವನ ಮೌಲ್ಯಗಳನ್ನು ಪಸರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ ಬಿಡಿಸಿಸಿ ಬ್ಯಾಂಕ್ ನಿದರ್ೇಶಕ ಕೋಳೂರು ಮಲ್ಲಿಕಾಜರ್ುನಗೌಡ, ಕನ್ನಡಪರ ಹೋರಾಟಗಾರ ಜಿ.ಬಸವರಾಜ, ಕನರ್ಾಟಕ ಯುವಕ ಸಂಘದ ಅಧ್ಯಕ್ಷ ವಿ.ಎಸ್.ಬಸವರಾಜ, ನವಕನರ್ಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಜಿಲ್ಲಾಧ್ಯಕ್ಷ ಕೆ.ರಮೇಶ್, ಡಿ.ಮಹೇಶ್ಕುಮಾರ್, ಕೇದಾರ್ನಾಥ್, ರವಿಕುಮಾರ್, ಚಾಂದ್ಬಾಷಾ, ಪಂಪಾಪತಿ, ಕೆ.ಮಂಜುನಾಥ, ಮುಂಡಾಸದ ಮಲ್ಲಿಕಾಜರ್ುನ, ಗಿರಿಬಾಬು, ಮಾದುಗೊಂಡೆ ಮಂಜುನಾಥ, ವೀರನಗೌಡ, ಯಮುನಪ್ಪ ಮುಂತಾದವರು ಹಾಜರಿದ್ದರು. ಕೇಣಿ ಬಸವರಾಜ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಗಾಯನ ಕಾರ್ಯಕ್ರಮ:
ಹೊಸಪೇಟೆಯ ಸೇವಿಯರ್ ಮೆಲೋಡೀಸ್ನ ಸೇವಿಯರ್ ಅಂಗವಿಕಲರ ಸೇವಾ ಸಮಿತಿ ತಂಡದಿಂದ ಹಾಸ್ಯ ಮತ್ತು ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಇಡೀ ನಡೆದವು. ನೂರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೋರಂಜನೆಯನ್ನು ಆಸ್ವಾದಿಸಿದರು.