ಸಕಾರಾತ್ಮಕ ಭಾವನೆ ಬೆಳೆಯಲು ಯೋಗ ಸಹಕಾರಿ: ಮುರುಘೇಂದ್ರ ಸ್ವಾಮೀಜಿ
ಯರಗಟ್ಟಿ : ಸಮೀಪದ ಮುನವಳ್ಳಿ ಯೋಗದಿಂದ ವಾಸಿಯಾಗದ ಹಲವಾರು ರೋಗಗಳು ವಾಸಿಯಾದ ಉದಾಹರಣೆ ಇದೆ. ಯೋಗ ರೋಗಕ್ಕೆ ಪರಿಹಾರ ಜೊತೆ ಜೊತೆಗೆ ನಿತ್ಯ ಜೀವನ ಸದೃಢ ಹಾಗೂ ಕ್ರಿಯಾಶೀಲತೆಯಿಂದ ಕೂಡಿರಲು ಯೋಗ ಅವಶ್ಯವಾಗಿದೆ ಒಳ್ಳೆಯ ಚಿಂತನೆಗಳು, ಸಕಾರಾತ್ಮಕ ಭಾವನೆಗಳು ಬೆಳೆಯಲು ಯೋಗ ಸಹಕಾರಿಯಾಗಿದೆ ಎಂದು ಸೋಮಶೇಖರ ಮಠದ ಪೂಜ್ಯಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಪ.ಪೂ. ಮಹಾವಿದ್ಯಾಲಯ ಹಾಗೂ ಚನ್ನಬಸವ ಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅರುಣಗೌಡ ಪಾಟೀಲ, ಅಶೋಕ ಸಂಕಣ್ಣವರ, ಪ್ರಾ. ಎಂ.ಎಚ್.ಪಾಟೀಲ, ಪ್ರಾ. ಕೆ.ಬಿ.ನಲವಡೆ, ಯೋಗ ತರಬೇತುದಾರ ಅಶೋಕ ಸಂಕಣ್ಣವರ, ದಾನು ಗದಗಿನ, ಎಂ. ಗಿರೀಶ, ಐ.ಕೆ.ಮಠಪತಿ, ಎಂ.ಸಿ.ಭಾಂಡೇಕರ ಸೇರಿದಂತೆ ಇತರರ ಇದ್ದರು. ಉತ್ತಮವಾಗಿ ಯೋಗ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.