ಗೋಕಾಕ್

ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಘಟಪ್ರಭಾ: ಪೇಜಾವರ ಮಠದ 108 ವಿಶ್ವೇಶತೀರ್ಥ ಪಾದಂಗಳವರ ಅಮೃತ ಹಸ್ತದಿಂದ  ಪ್ರತಿಷ್ಠಾಪಿಸಲ್ಪಟ್ಟ  ಗುರು ಸಾರ್ವಭೌಮ ರಾಘವೇಂದ್ರ  ಸ್ವಾಮಿಗಳ ಮಠದ 352ನೇ ಆರಾಧನಾ ಮಹೋತ್ಸವವು ಅ.31ರಿಂದ ಸೆ.2ರ ವರೆಗೆ ಜರುಗಲಿದೆ.

ಅ.31 ರಂದು ಅಷ್ಟೋತರ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ, ನೈವೆದ್ಯ, ಸಂಜೆ ಪಲ್ಲಕ್ಕಿ ಸೇವೆ, ಸಂಗೀತ ಸೇವೆ, ಭಜನೆ, ದೀಪಾಂಕಾರ ಅಷ್ಟಾವದಾನ ಸೇವೆ ಜರುಗಲಿದೆ.

ಸೆ. 1 ರಂದು ಅಷ್ಟೋತರ, ಪಂಚಾಮೃತ ಅಭಿಷೇಕ ಅಲಂಕಾರ, ಮಹಾಪೂಜೆ, ರಥೋತ್ಸವ ನಂತರ ಮಹಾನೈವೇದ್ಯ, ಮಂಗಳಾರತಿ, ಶ್ರೀಫಲ ಮಹಾಪ್ರಸಾದ, ಸಂಜೆ ದೀಪೋತ್ಸವ, ಭಜನೆ, ಆಷ್ಟಾವಧಾನ ಸೇವೆ ನಡೆಯಲಿದೆ.

ದಿ. ಸೆ. 2ರಂದು ಅಷ್ಟೋತರ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ, ಸತ್ಯ ನಾರಾಯಣ ಪೂಜೆ, ನೈವೆದ್ಯ, ಮಂಗಳಾರತಿ, ಪಲ್ಲಕ್ಕಿ ಉತ್ಸವ, ದೀಪೋತ್ಸವ ಭಜನೆ, ಅಷ್ಟಾವದಾನ ಸೇವೆ ನಂತರ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ರಾಘವೇಂದ್ರ ಸ್ವಾಮೀಜಿ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



ಸುದ್ದಿ ಓದಿ