ಮಹಿಳೆಯರು ಜೀವನದಲ್ಲಿ ಧೈರ್ಯ, ಸ್ಥೈರ್ಯ ಅಳವಡಿಸಿಕೊಳ್ಳಬೇಕು: ಸುಶೀಲಾ
ಲೋಕದರ್ಶನ ವರದಿ
ಬಳ್ಳಾರಿ22: ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾನಗರ ಪಾಲಿಕೆಯ ಮೇಯರ್ ಮಾತನಾಡಿ ರಂಗಸಂಸ್ಕೃತಿ ಅಂತಹ ಕಾರ್ಯಕ್ರಮದಲ್ಲಿ ಮಹಿಳೆಯರ ಜೀವನದಲ್ಲಿ ದೈರ್ಯ ಮತ್ತು ಸ್ಥೈರ್ಯ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಡಾ|| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ಕೇವಲ ಮನೆ ಕೆಲಸ ಮತ್ತು ತಮ್ಮ-ತಮ್ಮ ಉದ್ಯೋಗದ ಕೆಲಸಕ್ಕೆ ಸೀಮಿತರಾಗದೇ ಇಂತಹ ರಂಗ ಸಂಸ್ಸೃತಿಯಲ್ಲಿಯೂ ಸಹ ಭಾಗವಹಿಸುವುದನ್ನು ಅಳವಡಿಸಿಕೊಳ್ಳಬೇಕಂದರು.
ಮಹಿಳೆಯರಿಗಾಗಿ ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ಮಹಿಳಾ ಉತ್ಸವ ಹಮ್ಮಿಕೊಂಡಿದ್ದು ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಂತಹ ಕೆಲಸ ಮಾಡುತ್ತಿರುವ ಇಲಾಖೆ ನಿಜಕ್ಕೂ ಸ್ಲಾಗನೀಯ ಎಂದರು. ಪಾಲಿಕೆ ಉಪ ಮೇಯರ್ ದಿವ್ಯಕುಮಾರಿ, ಪಾಲಿಕೆ ಸದಸ್ಯೆ ನಾಗಮ್ಮ, ರಂಗಭೂಮಿ ಕಲಾವಿದರಾದ ನಾಡೋಜ ಸುಭದ್ರಮ್ಮ ಮನ್ಸೂರು, ಸುಜಾತಮ್ಮ, ಕಪ್ಪಗಲ್ಲು ಪದ್ಮಮ್ಮ, ಕೂಡ್ಲಿಗೆ ಪದ್ಮಾ, ಕನರ್ಾಟಕ ನಾಟಕ ಆಕಾಡಮಿ ಸದಸ್ಯೆ ಶಿವಕುಮಾರಿ, ಬಿ.ವೀಣಾಕುಮಾರಿ, ಎ.ವರಲಕ್ಷ್ಮಿ, ಎಸ್.ಅಂಜೀನಮ್ಮ, ಡಾ|| ನಾಗರತ್ನಮ್ಮ, ವಾತರ್ಾ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆರಾಮಲಿಂಗಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಿ.ನಾಗರಾಜ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು. ಇದಕ್ಕು ಮುಂಚೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಹಿರಿಯ ಬಯಲಾಟ ಕಲಾವಿದರಾದ ನಾಡೋಜ ಕಪ್ಪಗಲ್ಲು ಪದ್ಮಮ್ಮ ಅವರು ಶೋಭಯಾತ್ರೆಗೆ ಚಾಲನೆ ನೀಡಿದರು.
ಈ ಯಾತ್ರೆಯೂ ಡಾ|| ರಾಜಕುಮಾರ ರಸ್ತೆ ಮುಖಾಂತರ ಗಡಗಿ ಚನ್ನಪ್ಪ ವೃತ್ತ, ಜಿಲ್ಲಾಧಿಕಾರಿಗಳ ಕಛೇರಿಯ ಮುಖಾಂತರ ಹೆಚ್.ಆರ್ ಗವಿಯಪ್ಪ ವೃತ್ತದಿಂದ ರಂಗಮಂದಿರಕ್ಕೆ ಆಗಮಿಸಿತು. ಕಾರ್ಯಕ್ರಮದಲ್ಲಿ ಕೂಡ್ಲೆಗೆಯ ಕೆ.ದುರ್ಗಮ್ಮ ಮತ್ತು ಸಂಗಡಿಗರಿಂದ ಮಹಿಳಾ ಡೊಳ್ಳು ಕುಣಿತ, ಆರ್.ಲಕ್ಷ್ಮಿ ಮತ್ತು ಸಂಗಡಿಗರಿಂದ ಮಹಿಳಾ ಉಮರ್ೆವಾದ್ಯ, ಸವಿತಾ ಚಿರುಕುನ್ನಯ್ಯ ಮತ್ತು ಸಂಗಡಿಗರಿಂದ ಮಹಿಳಾ ಪೂಜಾಕುಣಿತ, ಜಾನಕಿ ಮತ್ತು ಸಂಗಡಿಗರಿಂದ ಮಹಿಳಾ ತಾಷಾರಮ್ಡೊಳ್ ಮತ್ತು ಶೃತಿವಿಜಯ ಸಂಗಡಿಗರಿಂದ ಮಹಿಳಾ ವೀರಗಾಸೆ, ನೃತ್ಯಗಳು ನಡೆದವು. ಮಹಿಳಾ ಚಿತ್ರ ಕಲಾ ಶಿಬಿರದಿಂದ ರಂಗೋಲಿ ಸ್ಪಧರ್ೆ ನಡೆಯಿತು.
ರಂಗಮಂದಿರದಲ್ಲಿ ಮಂಡ್ಯದ ಸವಿತಾ ಚಿರುಕುನ್ನಯ್ಯ ಮತ್ತು ಸಂಗಡಿಗರಿಂದ ನಡೆದ ಶಿವಪೂಜೆ ಕುಣಿತ ನೆರೆದ ಜನರನ್ನು ರಂಜಿಸಿತು. ಸಾವಿರಾರೂ ಕಲಾವಿದರು ಈ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.