ಶಿಗ್ಗಾವ್

ನಿಸರ್ಗದಿಂದ ಹೆಣ್ಣಿಗೆ ಅಶಕ್ತತೆ: ದೇವರಮನಿ

ನಿಸರ್ಗದಿಂದ ಹೆಣ್ಣಿಗೆ ಅಶಕ್ತತೆ: ದೇವರಮನಿ

ಶಿಗ್ಗಾವಿ 09: ನಿಸರ್ಗದಿಂದ ಹೆಣ್ಣಿಗೆ ಅಶಕ್ತತೆ ಬಂದಿದೆಯೋ ಹೊರತು ಯಾವುದೇ ಪುರುಷ, ಮಹಿಳೆಯನ್ನು ದುರ್ಬಲಳನ್ನಾಗಿ ಮಾಡಿಲ್ಲ ಎಂದು ಶಿಗ್ಗಾವಿ ಅಂಕಲಕೋಟಿ ಕಾಲೇಜಿನ ಪ್ರೋ. ಸುಜಾತಾ ದೇವರಮನಿ ಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಶಿಗ್ಗಾವಿಯ 2020-21 ನೇ ಸಾಲಿನ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮಾ) ಯೋಜನೆಯ ಜಿಲ್ಲೆಯೋಳಗಿನ ತರಬೇತಿ ಕಾರ್ಯಕ್ರಮದಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿ, ಹೆಣ್ಣು ಬೌಧ್ದಿಕವಾಗಿ ಬಹಳ ಸಬಲಳಾಗಿದ್ದಾಳೆ ಅದಕ್ಕೆ ಇತ್ತೀಚಿನ ಶೈಕ್ಷಣಿಕ ಫಲಿತಾಂಶಗಳೇ ಕಾರಣವಾಗಿವೆ, ಹೆಣ್ಣು ಎಂದಿಗೂ ದುರ್ಬಲಳಲ್ಲ ಬದಲಾಗಿ ಗಂಡು ಮಕ್ಕಳು ದುರ್ಬಲರಾಗಿದ್ದಾರೆ ಏಕೆಂದರೆ ಒಂದಿಲ್ಲೋಂದು ಒತ್ತಡದ ಜೀವನದಲ್ಲಿಯೇ ಬದುಕು ಸಾಗಿಸುವ ಗಂಡು ದುರ್ಬಲ ಎನ್ನುವುದಕ್ಕಿಂತ ಸೂಕ್ಷ್ಮ ಮನೋಭಾವದವರು ಎಂದು ಹೇಳಬಹುದಾಗಿದೆ ಅದಕ್ಕಾಗಿಯೇ ಹೃದಯಾಘಾತಗಳು ಹೆಣ್ಣಿಗಿಂತ ಗಂಡಸರಿಗೆ ಹೆಚ್ಚು ಸಂಭವಿಸುತ್ತದೆ ಜೊತೆಗೆ ಒತ್ತಡದಲ್ಲಿ ವಿವಿಧ ಚಟಗಳಿಗೆ ದಾಸರಾಗುತ್ತಿದ್ದಾರೆ ಅದು ಆಗಬಾರದೆಂದರೆ ಮಹಿಳೆಯು ಹೊಂದಾಣಿಕೆಯ ಜೊತೆಗೆ ನಾ ಮೇಲು, ನಾ ಮೇಲು ಎಂಬುದನ್ನು ಮೈಗೂಡಿಸಿಕೊಳ್ಳದೆ ಬದುಕು ಸಾಗಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಮತ್ತು ಇಂತಹ ಮಹಿಳಾ ದಿನಾಚರಣೆಗಳನ್ನು ಆಚರಣೆಗೂ ಅರ್ಥ ಬರುತ್ತದೆ ಎಂದು ವಿವರಿಸಿದರು.

ತಾಲೂಕಾ ಸಹಾಯಕ ಕೃಷಿ ಅಧಿಕಾರಿ ಸುರೇಶ ದೀಕ್ಷಿತ ಪ್ರಸ್ತಾವಿಕ ನುಡಿಗಳನ್ನಾಡಿದರು, ರೈತ ಸಂಘದ ಅದ್ಯಕ್ಷ ಬಸಲಿಂಗಪ್ಪ ನರಗುಂದ, ಮಹಿಳಾ ಸಾಮಾಕ್ಯದ ರಾಜೇಶ್ವರಿ ಹಿರೇಮಠ, ಅಧಿಕಾರಿ ವಿ ವಿ ಗುಡ್ಡದ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಯುವ ಮಹಿಳಾ ಪ್ರಶಸ್ತಿ ಪುರಸ್ಕೃತ ಮಹಿಳೆ ರೂಪಾ ಸಿದ್ದನಗೌಡ ಪಾಟೀಲ ಅವರನ್ನು ಕೃಷಿ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.

ಜಿ ಪಂ ಸದಸ್ಯ ಶೋಭಾ ಗಂಜೀಗಟ್ಟಿ, ತಾ,ಪಂ ಅದ್ಯಕ್ಷೆ ಪಾರವ್ವ ಆರೇರ, ಉಪಾದ್ಯಕ್ಷೆ ವಿಜಯಲಕ್ಷ್ಮಿ ಮುಂದಿನಮನಿ, ಶಿವಾನಂದ ಡಾವಣಗೇರಿ ಸೇರಿದಂತೆ ತಾಲೂಕಿನ ಮಹಿಳೆಯರು, ಮಹಿಳಾ ಸಂಘದ ಸದಸ್ಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.

ಸುದ್ದಿ ಓದಿ