ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೊಡುಗೆ ಏನು: ಉಗ್ರಪ್ಪ
ಬಳ್ಳಾರಿ21: ನಾನು ಸಂಸದನಾಗಿ ಇನ್ನೂ ಮೂರುತಿಂಗಳು ಕಳೆದಿಲ್ಲ. ಆದರೆ ಬಿಜೆಪಿ ಪಕ್ಷದಿಂದ ಕಳೆದ 14ವರ್ಷದಿಂದ ಈ ಬಳ್ಳಾರಿ ಕ್ಷೇತ್ರದಿಂದ ಸಂಸದರಾಗಿದ್ದವರು ಮೊದಲು ಅವರ ಕೊಡುಗೆ ಏನು ಎಂಬುವುದು ಏನು ಎಂದು ಕಾಂಗ್ರೆಸ್ ಪಕ್ಷದ ಸಂಸದ ಬಿ.ಎಸ್.ಉಗ್ರಪ್ಪ ಬಿಜೆಪಿಯವರ ಪ್ರಶ್ನೆಗೆ ತಿರಿಗೇಟು ನೀಡಿದ್ದಾರೆ. ಈ ಕುರಿತು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸಂಸದವರಾಗಿ ಈ ಜಿಲ್ಲೆಗೆ ಉಗ್ರಪ್ಪ ಅವರ ಕೊಡುಗೆ ಏನು ಎಂದು ಬುಧವಾರ ಹೊಸಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೇಶ್ ಶಟ್ಟರ್ ಕೇಳಿದ್ದಾರೆ.
ನಾನು ಸಂಸದನಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಮಾಣವಚನ ಸ್ವಿಕರಿಸಿ ಮೊದಲಬಾರಿಗೆ ಸಂಸತ್ ನಲ್ಲಿ ಕ್ಷೇತ್ರದ ಸಮಸ್ಯಗಳ ಬಗ್ಗೆ ಗಮನ ಸೆಳೆದಿದ್ದೇನೆ. ಕೇಂದ್ರ ಸರಕಾರದ ಯೋಜೆನೆಗಳ ಅನುಷ್ಠಾನಕ್ಕೆ ಅಧಿಕಾರಿಗಳ ಸಭೆ ನಡೆಸಿ ಚುರುಕು ಮುಟ್ಟಿಸಿರುವೆ ಎಂದರು.
ಆದರೆ ನಿಮ್ಮ ಪಕ್ಷದಿಂದ ಕಳೆದ ಮೂರು ಚುನಾವಣೆಗಳಲ್ಲಿ ಆಯ್ಕೆಯಾದ ಸದಸ್ಯರು ಈ ಕ್ಷೇತ್ರದಲ್ಲಿನ ನಿರುದ್ಯೋಗ, ಬಡತನ, ಕೃಷಿಕರ, ಕಾಮರ್ಿಕರ ಸಮಸ್ಯಗಳನ್ನು ನಿವಾರಿಸುವಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಮತ್ತೇ ಮೋದಿ ಸರಕಾರ ಬರಬೇಕು ಎನ್ನುತ್ತಿದ್ದೀರಿ.
ಮೂರು ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ. ಕಪ್ಪು ಹಣ ಎಲ್ಲಿ. ಬೆಲೆ ನಿಯಂತ್ರಣ ಎಲ್ಲಿ ಇದನ್ನು ಮಾಡದ ಮೋದಿ ಅವರು ದೇಶದ ರಕ್ಷಣೆ ಎಂದು ಮತ ಕೇಳಿದರೆ ಸಾಲದು. ಮತದಾರ ಎಲ್ಲವನ್ನು ಗಮನಿಸಿದ್ದಾರೆ.
ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ನಮ್ಮ ಪಕ್ಷದ ಸದಸ್ಯರು ಹಾಜರಾಗದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಸಹ ಸಾಮಾನ್ಯಾ ಸಭೆಗೆ ಪದನಿಮಿತ್ಯ ಸದಸ್ಯರಾದರೂ ನನಗೆ ಸಭೆಯ ಬಗ್ಗೆ ಮಾಹಿತಿ ಇಲ್ಲ. ನಮ್ಮ ಸದಸ್ಸರಿಗೂ ಮಾಹಿತಿ ಇದೆಯೂ ಇಲ್ಲವೂ ಗೊತ್ತಿಲ್ಲ. ಮಾಹಿತಿ ಇದ್ದರೆ ಸಭೆಗೆ ಹಾಜರಾಗಿ ಜನರ ಸಮಸ್ಯಗಳ ಸಭೆಯಲ್ಲಿ ಚಚರ್ಿಸಬೇಕು ಎಂದರು.
ರಾಜ್ಯಸರಕಾರ ಪ್ರಾದೇಶಿಕ ಅಸಮತೋಲನ ನಿವಾರಿಸಲು ಬಡ್ಜಟ್ ನಲ್ಲಿ ಚೈನಾ ಮಾದರಿ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಮುಂದಿನ 5 ವರ್ಷ ಅವದಿಯಲ್ಲಿ 5 ಸಾವಿರ ಕೋಟಿ ಬಂಡವಾಳವನ್ನು ಹೂಡಿ ಜವಳಿಪಾರ್ಕ ಮಾಡಲು ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು. ಅಂತಯೇ ಕಂಪ್ಲಿ ಶಾಸಕ ಗಣೇಶ ಬಗ್ಗೆ ಯಾರು ಏನು ಹೇಳಿದ್ದಾರೆ ನನ್ನ ಗಮನಕ್ಕೆ ಬಂದಿಲ್ಲ. ಗಣೇಶ ಮಂತ್ರಿಯಾಗುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದರು.
ಗಣೇಶ ಹಾಗೂ ಆನಂದ್ಸಿಂಗ್ ಮದ್ಯ ಆಗಬಾರದ್ದು ಆಗಿದೆ.
ಪಕ್ಷಕ್ಕೆ ಮುಜುಗರ ಆಗಿದೆ. ಕಾನೂನಿನ ಚೌಕಟ್ಟಿನಲ್ಲಿ ಯಾವಕ್ರಮ ಆಗಬೇಕು ಅದು ಆಗಬೇಕು. ಈ ಬಗ್ಗೆ ನಾನು ಯಾರಿಗೆ ಏನು ಹೇಳಿದ್ದೇನೆ ಅದು ಸಾರ್ವಜನಿಕವಾಗಿ ಹೇಳಲು ಬರುವುದಿಲ್ಲವೆಂದು ಉತ್ತರಿಸಿದರು.