ಕನರ್ಾಟಕದ ನೀರಿನ ಜೊತೆಗೆ ಆಂಧ್ರದ ನೀರು ಹರಿಸಲು ತೀಮರ್ಾನ

ಕನರ್ಾಟಕದ ನೀರಿನ ಜೊತೆಗೆ ಆಂಧ್ರದ ನೀರು ಹರಿಸಲು ತೀಮರ್ಾನ

ಲೋಕದರ್ಶನ ವರದಿ

ಬಳ್ಳಾರಿ 24:ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ದಿ 26 ರಿಂದ 30 ಮಾರ್ಚ ತಿಂಗಳ ವರೆಗೆ ನೀರು ಬಿಡುವ ಬಗ್ಗೆ ನವೆಂಬರ್ 18 ನೀರಾವರಿ ಸಲಹಾ ಸಮಿತಿಯು ನೀರು ಬಿಡುವುದಾಗಿ ನಿರ್ಣಯಿಸಲಾಯಿತು ಎಂದು ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಜೆ.ಕಾತರ್ಿಕ್ ಮಾತನಾಡಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಾವುಗಳು ಭಾಗವಹಿಸಿದ್ದು ಕನರ್ಾಟಕದ ನೀರಿನ ಜೊತೆಗೆ ಆಂಧ್ರದ ನೀರನ್ನು ಹರಿಸಬೇಕೆಂದು ಸಭೆಯಲ್ಲಿ ತೀಮರ್ಾನ ಕೈಗೊಳ್ಳಲಾಯಿತು. ಎಲ್.ಎಲ್.ಸಿ. ಕಾಲುವೆಯ ತೂಬುಗಳು 3 ಅಡಿ ಎತ್ತರದಲ್ಲಿದ್ದ ಕಾರಣ ಆಂಧ್ರ ಮತ್ತು ಕನರ್ಾಟಕ ಎರಡೂ ರಾಜ್ಯಗಳ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದ್ದು ಕನರ್ಾಟದಕದ ತೂಬುಗಳು ಕಾಲುವೆ ತಳಮಟ್ಟದಿಂದ ಮೂರು ಅಡಿ ಎತ್ತದಲ್ಲಿರುವುದರಿಂದ ಎರಡೂ ರಾಜ್ಯಗಳ ನೀರು ಒಟ್ಟಿಗೆ ಹರಿಸಿದಲ್ಲಿ ಮಾತ್ರ ಕನರ್ಾಟಕ ತೂಬುಗಳಿಗೆ ನೀರು ತಲುಪುತ್ತದೆ. 

ಆದ್ದರಿಂದ ಎರಡೂ ರಾಜ್ಯಗಳ ನೀರನ್ನು ಒಟ್ಟಿಗೆ ಹರಿಸಬೇಕೆಂದು ಈ ಮೂಲಕ ಮನವಿ ಮಾಡಲಾಗುತ್ತದೆ. ನೀರು ಬಿಡುವುದರಲ್ಲಿ ತಾರತಮ್ಯವನ್ನು ಮಾಡಿದಲ್ಲಿ ಅದಕ್ಕೆ ತುಂಗಭದ್ರ ಮಂಡಳಿಯೇ ನೇರಹೊಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ರೈತರ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆಂದು ಈ ಮೂಲಕ ತಿಳಿಸುತ್ತಾ ರೈತರ ಬೆಳೆಗಳನ್ನು ಸಂರಕ್ಷಿಸುವ ಕೆಲಸ ತಮಗೂ ಇರುತ್ತದೆ ಆದುದರಿಂದ ರೈತರಿಗೆ ಅನ್ಯಾಯ ಮಾಡದೇ ಸರಿಯಾದ ಸಮಯಕ್ಕೆ ನೀರನ್ನು ಪೂರೈಕೆ ಮಾಡಬೇಕೆಂದು ತುಂಗಭದ್ರ ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ (ದಿನಾಂಕ: 26.12.2018 ರಿಂದ ಮಾರ್ಚ 30ರ ವರೆಗೆ) ನೀರನ್ನು ಬಿಡಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂಧಿಸಿದ ಸೂಪರಿಂಟೆಂಡ್ ಅಧಿಕಾರಿಗಳಾದ ರಮಣರವರು ಮಾತನಾಡಿ ನೀರಾವರಿ ಸಲಹಾ ಸಮಿತಿಯ ಪ್ರಕಾರ ನೀರು ಕನರ್ಾಟಕ ಮತ್ತು ಆಂಧ್ರದ ಪಾಲಿನ ನೀರು ಬಿಡುತ್ತೇವೆಂದು ಹೇಳಿ ರೈತರು ನೀರನ್ನು ಮೀತವಾಗಿ ಬಳಸಬೇಕೆಂದು ಮನವಿ ಮಾಡಿದರು. 

ಈ ಸಂಧರ್ಭದಲ್ಲಿ ಹೊಸಪೇಟೆ ತಾಲೂಕು ಅಧ್ಯಕ್ಷರಾದ ಸಣ್ಣಕ್ಕಿ ರುದ್ರಪ್ಪ, ಕಾರ್ಯಧಶರ್ಿಗಳಾದ ಎಲ್.ಎಸ್.ರುದ್ರಪ್ಪ, ರೇವಣ ಸಿದ್ದಪ್ಪ, ನಾಗೇಶ್, ಪ್ರಧಾನ ಕಾರ್ಯದಶರ್ಿಯಾದ ಜಾಕೀರ್, ಕಂಪ್ಲಿ ತಾಲ್ಲೂಕು ಕಾಯರ್ಾಧ್ಯಕ್ಷರಾದ ರಂಗಪ್ಪ ಉಪಾಧ್ಯಕ್ಷರಾದ ರಮೇಶ್,  ಹೊಸಪೇಟೆ ನಗರ ಘಟಕದ ಅಧ್ಯಕ್ಷರಾದ ಸುರೇಶ್, ಕಮಲಾಪುರ ಘಟಕದ ಅಧ್ಯಕ್ಷರಾದ ಮಲ್ಲಿಕಾಜರ್ುನ, ಉಪಾಧ್ಯಕ್ಷರಾದ ಸಂಗಪ್ಪ ಜೀರ್ ಇನ್ನೂ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ