ಇಂದು ಮತದಾನ; ಅಭ್ಯಥರ್ಿಗಳ ಹಣೆಬರಹ ಬರೆಯುವ ಗ್ರಾಮಸ್ಥರು
ಕಾರವಾರ 21: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ತಾಲೂಕುಗಳ ಮೊದಲ ಹಂತದಲ್ಲಿ ಚುನಾವಣೆಗೆ ಮತದಾನ ಇಂದು (ಡಿ.22) ನಡೆಯಲಿದ್ದು, 3735 ಅಭ್ಯಥರ್ಿಗಳ ರಾಜಕೀಯ ಭವಿಷ್ಯವನ್ನು ಗ್ರಾಮಸ್ಥರು ಬರೆಯಲಿದ್ದಾರೆ. 101 ಗ್ರಾಮ ಪಂಚಾಯತ್ಗಳ 1360 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮತದಾನಕ್ಕೆ ಸಕಲ ಸಿದ್ಧತೆಗಳು ಆಯಾ ತಾಲೂಕಿನ ಗ್ರಾಮಗಳ ಮತಗಟ್ಟೆಗಳಲ್ಲಿ ಪೂರ್ಣವಾಗಿದೆ.
ಸೋಮವಾರ ಸಂಜೆ ಚುನಾವಣಾ ಸಿಬ್ಬಂದಿ ಆಯಾ ಮತಗಟ್ಟೆಗಳನ್ನು ತಲುಪಿದ್ದಾರೆ. ಮೊದಲ ಹಂತದ ಮತದಾನಕ್ಕೆ 3795 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ,ಹೊನ್ನಾವರ, ಭಟ್ಕಳ ತಾಲೂಕಿನ ಗ್ರಾಮ ಪಂಚಾಯತ್ ಗಳಿಗೆ ಮತದಾನ ಡಿ.22 ರಂದು ಬೆಳಿಗ್ಗೆ ಯಿಂದಲೇ ಪ್ರಾರಂಭವಾಗಲಿದೆ. ಮತಗಟ್ಟೆ ಅಧಿಕಾರಿ (ಪಿಆರ್ಓ) 768, ಎಪಿಆರ್ಓ 768 ಗಳನ್ನು ನಿಯೋಜಿಸಲಾಗಿದೆ. 1536 ಪಿ.ಓ.ಗಳನ್ನು, 723 ಗ್ರೂಪ್ ಡಿ ನೌಕರನ್ನು ಮತದಾನ ಕರ್ತವ್ಯಕ್ಕೆ ಹಾಕಲಾಗಿದೆ. ಕಾರವಾರ ತಾಲೂಕಿಗೆ 635, ಅಂಕೋಲಾ ತಾಲೂಕಿಗೆ 609, ಕುಮಟಾ ತಾಲೂಕಿಗೆ 884, ಹೊನ್ನಾವರಕ್ಕೆ 912, ಭಟ್ಕಳಕ್ಕೆ 755 ಸಿಬ್ಬಂದಿ ಸೇರಿ ಒಟ್ಟು 3795 ಜನ ಸಿಬ್ಬಂದಿ ಮತದಾಣ ಕರ್ತವ್ಯದಲ್ಲಿ ಭಾಗವಹಿಸಲಿದ್ದಾರೆ.
ಕಾರವಾರದಲ್ಲಿ ಸೇಂಟ್ ಮೈಕಲ್ ಕಾನ್ವೆಂಟ್ ಮಸ್ಟರಿಂಗ್ ಕೇಂದ್ರವಾಗಿದೆ. ಅಂಕೋಲಾದಲ್ಲಿ ಗೋಖಲೆ ಸೆಂಟನರಿ ಕಾಲೇಜು, ಕುಮಟಾದಲ್ಲಿ ಎ.ವಿ.ಬಾಳಿಗಾ ಕಾಲೇಜು, ಹೊನ್ನಾವರದಲ್ಲಿ ಹೋಲಿ ರೋಜರಿ ಕಾನ್ವೆಂಟ್ ಪಿಯು ಕಾಲೇಜು, ಭಟ್ಕಳದಲ್ಲಿ ಗುರು ಸುಧೀಂದ್ರ ಕಾಲೇಜು ಮಸ್ಟರಿಂಗ್ ಕಾಲೇಜುಗಳಿಂದ ಚುನಾವಣಾ ಕರ್ತವ್ಯ ಅಧಿಕಾರಿ ಸಿಬ್ಬಂದಿ ಹೊರಟು ಆಯಾ ಗ್ರಾಮಗಳನ್ನು ತಲುಪಿದ್ದಾರೆ. ಕಾರವಾರ ತಾಲೂಕಿನಲ್ಲಿ 12 ಬಸ್, 17 ಜೀಪ್, 6 ಟೆಂಪೋಗಳನ್ನು ಚುನಾವಣಾ ಕರ್ತವ್ಯ ಸಿಬ್ಬಂದಿ ಸಾಗಿಸಲು ಬಳಸಲಾಗಿದೆ.* ಅಂಕೋಲಾ ತಾಲೂಕಿನಲ್ಲಿ 12 ಬಸ್, 11 ಜೀಪ್, 16 ಟೆಂಪೋ ಬಳಕೆ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಕಾರವಾರ ತಾಲೂಕಿನಲ್ಲಿ 635 ಸಿಬ್ಬಂದಿಗಳನ್ನು, ಅಂಕೋಲಾ ತಾಲೂಕಿನಲ್ಲಿ 609 ಸಿಬ್ಬಂದಿಗಳನ್ನು ಬಳಸಲಾಗಿದೆ. ಕರಾವಳಿಯ 5 ತಾಲೂಕಿನ ಚುನಾವಣಾ ಕೆಲಸಕ್ಕೆ 3795 ಸಿಬ್ಬಂದಿ ಹಾಜರಾಗಿದ್ದಾರೆ.
698 ಮತಗಟ್ಟೆಗಳಿಗೆ :
ಕರಾವಳಿ ತಾಲೂಕಿನ ಗ್ರಾ.ಪಂ.ಗಳ ಮತದಾನಕ್ಕೆ ಒಟ್ಟು 698 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 152 ಸೂಕ್ಷ್ಮ ಮತಗಟ್ಟೆಗಳಿವೆ. 57 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. ಕಾರವಾರ ತಾಲೂಕಿನಲ್ಲಿ 115 ಮತಗಟ್ಟೆಗಳಿವೆ. ಇವುಗಳಲ್ಲಿ 22 ಸೂಕ್ಷ್ಮ ಹಾಗೂ 6 ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅಂಕೋಲಾದಲ್ಲಿ 113 ಮತಗಟ್ಟೆಗಳಿವೆ. 29 ಸೂಕ್ಷ್ಮ, 10 ಅತೀ ಸೂಕ್ಷ್ಮ. ಕುಮಟಾದಲ್ಲಿ 164 ಮತಗಟ್ಟೆಗಳಿವೆ. 48 ಸೂಕ್ಷ್ಮ, 4 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. ಹೊನ್ನಾವರದಲ್ಲಿ 169 ಮತಗಟ್ಟೆಗಳಿವೆ. 15 ಸೂಕ್ಷ್ಮ, 20 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ. ಭಟ್ಕಳ ತಾಲೂಕಿನಲ್ಲಿ 137 ಮತಗಟ್ಟೆಗಳಿವೆ. 38 ಸೂಕ್ಷ್ಮ, 17 ಅತೀ ಸೂಕ್ಷ್ಮ ಮತಗಟ್ಟೆಗಳಾವೆ. ಇಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ. ಶಾಂತಿಯುತ ಮತದಾದನಕ್ಕೆ ವೇದಿಕೆ ಸಜ್ಜಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂತರ್ಿ, ಎಸ್ಪಿ ಶಿವಪ್ರಕಾಶ್ ದೇವರಾಜು ಶ್ರಮಿಸಿದ್ದು, ಮಂಗಳವಾರ ಬೆಳಗಿನಿಂದ ಮತದಾನ ಪ್ರಾರಂಭವಾಗಲಿದೆ.
ಭಟ್ಕಳ ಮತ್ತು ಹೊನ್ನಾವರ ತಾಲೂಕಿನಲ್ಲಿ 30 ವರ್ಷದೊಳಗಿನ ಯುವಕರು ಹೆಚ್ಚಾಗಿ ಸ್ಪಧರ್ಿಸಿದ್ದಾರೆ. ಕುಮಟಾ ತಾಲೂಕಿನ ಅಳಕೋಡ ಗ್ರಾ.ಪಂ.ನ ಕ್ಷೇತ್ರ ಒಂದರಲ್ಲಿ ಹಾಲಕ್ಕಿ ಸಮಾಜದ ಸ್ನಾತಕೋತ್ತರ ಪದವೀಧರೆ ಪ್ರೇಮಾ ಸುರೇಶ್ ಗೌಡ ಚುನಾವಣಾ ಕಣದಲ್ಲಿದ್ದಾರೆ.