ಕಂಪ್ಲಿ

ಮತದಾನ ಸಂವಿಧಾನ ಬದ್ಧ ಸಾಮಾಜಿಕ ಕರ್ತವ್ಯ : ಡಾ.ಶ್ರೀನಿವಾಸರೆಡ್ಡಿ

ಮತದಾನ ಸಂವಿಧಾನ ಬದ್ಧ ಸಾಮಾಜಿಕ ಕರ್ತವ್ಯ : ಡಾ.ಶ್ರೀನಿವಾಸರೆಡ್ಡಿ


ಕಂಪ್ಲಿ  23:  ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಅಡಿಯಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಚುನಾವಣಾ ಸಾಕ್ಷರತಾ ಸಮಿತಿವತಿಯಿಂದ  ಹಮ್ಮಿಕೊಂಡಿದ್ದ 16ನೇ “ರಾಷ್ಟ್ರೀಯ ಮತದಾರ  ದಿನ” ಶುಕ್ರವಾರ ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ.ಶ್ರೀನಿವಾಸರೆಡ್ಡಿ ಬಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮತದಾನ ಅತ್ಯಂತ ಪವಿತ್ರವಾಗಿದೆ. ದೊರೆತ ಮತದಾನವನ್ನು ಚಲಾಯಿಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾನ ಸಂವಿಧಾನ ಬದ್ಧ ಸಾಮಾಜಿಕ ಕರ್ತವ್ಯವಾಗಿದೆ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಜ್ಮಾ ಟಿ.ಎಮ್‌.ಆರ್  ಮತದಾರರ ಪ್ರತಿಜ್ಞಾವಿಧಿ  ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅನ್ನಪೂರ್ಣ ಗುಡುದೂರು, ಅಧೀಕ್ಷಕರಾದ ನಾಗಮ್ಮ ಬಿ, ಪ್ರಥಮ ದರ್ಜೆ ಸಹಾಯಕರಾದ ಶ್ರೀ ಸಿದ್ದಾರೂಢ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ