ಖಾಸಗಿ ಸಮಾರಂಭದಲ್ಲಿ ಊಟ ಮಾಡಿದ ಉಮದಿ ವಸತಿ ನಿಲಯ ಶಾಲೆ 175 ವಿದ್ಯಾರ್ಥಿಗಳಿಗೆ ವಾಂತಿಭೇದಿ
ಲೋಕದರ್ಶನ ವರದಿ
ಸಂಬರಗಿ 29: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಜತ್ತ ತಾಲೂಕಿನ ಉಮದಿ ಗ್ರಾಮದ ವಸ್ತಿ ನಿಲಯ ಶಾಲೆಯಲ್ಲಿ ವಿದ್ಯಾರ್ಥಿಗಳು ಖಾಸಗಿ ಸಮಾರಂಭದಲ್ಲಿ ಊಟ ಮಾಡಿದ ನಂತರ ಶಾಲೆಯಲ್ಲಿಯ 175 ವಿದ್ಯಾರ್ಥಿಗಳಿಗೆ ವಾಂತಿಬೇಧಿ ಶುರುವಾಗಿದ್ದು ಈ ಘಟನೆ ಸೋಮವಾರ ನಡೆದಿದೆ. ಇದರಿಂದ ಪಾಲಕರಲ್ಲಿ ಭಯ ಉಂಟಾಗಿದೆ.
ಕಳೆದ 65 ವರ್ಷಗಳಿಂದ ಉಮದಿ ಗ್ರಾಮದ ಹೊರ ವಲಯದ 1 ರಿಂದ 10 ನೇ ತರಗತಿ ವಸತಿ ನಿಲಯ ಶಾಲೆ ಇದ್ದು ಆ ಶಾಲೆಯ ವಿದ್ಯಾರ್ಥಿಗಳು ವಸತಿ ನಿಲಯ ಹತ್ತಿರ ಖಾಸಗಿ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ್ದು ಅದರ ಪರಿಣಾಮವಾಗಿ ವಾಂತಿಬೇಧಿ ಪ್ರಾರಂಭವಾಗಿ ನಂತರ ವಿದ್ಯಾಥರ್ಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿಗ್ಯಾಳ, ಜತ್ತ ಸರಕಾರಿ ಆಸ್ಪತ್ರೆ, ಮೀರಜ ಸರಕಾರಿ ಆಸ್ಪತ್ರೆ, ಕವಟೆ ಮಹಾಂಕಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದ್ದು ಮಕ್ಕಳ ಆರೋಗ್ಯ ಸುಧಾರಿಸಿದೆ. ಈ ಘಟನೆ ತಿಳಿದ ನಂತರ ಮಕ್ಕಳ ಪಾಲಕರು ಶಾಲೆಯ ಹಾಗೂ ಆಸ್ಪತ್ರೆಯ ಸುತ್ತ ಮುತ್ತಲು ಜಮಾಯಿಸಿರುತ್ತಾರೆ.
ಘಟನೆ ತಿಳಿದ ನಂತರ ವಸತಿ ಮತ್ತು ಇತರ ಹಿಂದೂಳಿದ ಬಹುಜನ ಕಲ್ಯಾಣ ಸಚಿವರಾದ ಅತುಲ ಸಾವೆ ಜತ್ತ ಸರಕಾರಿ ಆಸ್ಪತ್ರೆಯಲ್ಲಿ ಬೇಟ್ಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಕೊಳ್ಳುವ ಕುರಿತು ಜಿಲ್ಲಾಧಿಕಾರಿ ಡಾ. ರಾಜಾ ದಯಾನಿದಿ ಹಾಗೂ ಸಮಾಜ ಕಲ್ಯಾಣ ಆಯುಕ್ತರಿಗೆ ಆದೇಶ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಡಾ.ರಾಜಾ ದಯಾನಿಧಿ ಇವರು ಮೀರಜ ಸರಕಾರಿ ಆಸ್ಪತ್ರೆಗೆ ಸೋಮವಾರ ಭೇಟ್ಟಿ ನೀಡಿ ಮಕ್ಕಳ ಆರೋಗ್ಯ ಕುರಿತು ಪರಿಶೀಲನೆ ಮಾಡಿ ಈಗಾಗಲೆ ತನಿಖೆ ನಡೆಸಲಾಗಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿರುವ ಸರಕಾರಿ ಹಾಗೂ ಖಾಸಗಿ ವಸತಿ ನಿಲಯ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ನೀಡುವಕ್ಕಿಂತ ಮುಂಚೆ ಪರಿಶೀಲನೆ ಮಾಡಿ ನೀಡಬೇಕು. ವಸತಿ ನಿಲಯ ಮುಖ್ಯಸ್ಥರು ಜಾಗೃತ ವಹಿಸಬೇಕೆಂದು ತಿಳಿಸಿದರು. ಈ ವೇಳೆ ಸಾಂಗಲಿ ಜಿಲ್ಲಾ ಪಂಚಾಯತ ಸಿ.ಇ.ಓ. ತೃಪ್ತಿ ದೊಡ್ಡಮೀಸೆ ಇವರ ಉಪಸ್ಥಿತರಿದ್ದರು