ಗೋಕಾಕ್

ವಿರೂಪಾಕ್ಷ ದೇವರ ಚರಪಟ್ಟಾಧಿಕಾರ ಮಹೋತ್ಸವ

ವಿರೂಪಾಕ್ಷ ದೇವರ ಚರಪಟ್ಟಾಧಿಕಾರ ಮಹೋತ್ಸವ

ಘಟಪ್ರಭಾ: ಶ್ರೀಕುಮಾರೇಶ್ವರ ಹೊಸಮಠದ ವಿರುಪಾಕ್ಷ ದೇವರ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ದಿ.24ರಂದು ಉಭಯ ಗದ್ದುಗೆಗಳ ರುದ್ರಾಭಿಷೇಕ ನಂತರ ಘೋಡಗೇರಿ ಕಾಶಿನಾಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಷಟಸ್ಥಲ ದ್ವಜರೋಹಣ ನೇರವೇರಿತು.

ಸಂಜೆ 6 ಗಂಟೆಗೆ ಕುಮಾರೇಶ್ವರ ಜ್ಯೋತಿಯ ರಥಯಾತ್ರೆ ಘಟಪ್ರಭಾ ಮೃತ್ಯುಂಜಯ ವೃತ್ತದ ಸಮೀಪ ಇರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಗಮಿಸಿದಾಗ ಭವ್ಯ ಸ್ವಾಗತ ಕೋರಿ ಶ್ರೀಗಳಿಂದ ಪೂಜೆ ಸಲ್ಲಿಸಲಾಯಿತು. ನಂತರ ಸುಮಂಗಲಿಯರ ಆರತಿ ಹಾಗೂ ವಾದ್ಯಮೇಳದೊಂದೊಗೆ ಘಟಪ್ರಭಾದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರವಚನ ವೇದಿಕೆಗೆ ತಲುಪಿತು. ಬಾಲಶಿವಯೋಗಿ ಶಿವಪ್ರಸಾದ ದೇವರು ಇವರಿಂದ ಪ್ರವಚನ ನಡೆಯಿತು. 

6.30ಕ್ಕೆ ಪ್ರವಚನದ ಪ್ರಾರಂಭೋತ್ಸವವು ದೀಪ ಬೆಳಗಿಸುವದರೊಂದಿಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರ ಆಪ್ತ ಸಹಾಯಕರಾದ ಸುರೇಶ ಸನದಿ ಹಾಗೂ ಪೂಜ್ಯರಿಂದ ಜರುಗಿತು. 

ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜು ನ ಮಹಾಸ್ವಾಮಿಜಿ, ಚಿಕ್ಕೋಡಿಯ ಚರಮೂರ್ತಿಶ್ವರ ಮಹಾಸ್ವಾಮಿಜಿ, ಬೆಲ್ಲದ ಬಾಗೇವಾಡಿಯ ಶಿವಾನಂದ ಮಹಾಸ್ವಾಮಿಜಿ ಆಶಿರ್ವಚನ ನೀಡಿದರು, ವಿರೂಪಾಕ್ಷ ದೇವರು, ಶಿವಾನಂದ ದೇವರು ಹುಬ್ಬಳ್ಳಿ, ಅಂದಾನಿ ದೇವರು, ಗುರುಬಸಯ್ಯ ಕರ್ಪುರಮಠ, ಡಿ.ಎಂ.ದಳವಾಯಿ, ಹಣಮಂತ ದುರ್ಗನ್ನವರ, ಮಡಿವಾಳಪ್ಪ ಮುಚಳಂಬಿ, ಸುಧೀರ ಜೋಡಟ್ಟಿ, ಕುಮಾರ ಹುಕ್ಕೇರಿ ಹಾಗೂ ಭಕ್ತಾದಿಗಳು ಹಾಜರಿದ್ದರು. 


ಸುದ್ದಿ ಓದಿ