ತಾಳಿಕೋಟಿ

ಸಮಸ್ಯೆಗಳಿಗೆ ಮುಕ್ತಿ ನೀಡಲು ಗ್ರಾಮ ವಾಸ್ತವ್ಯ

ಸಮಸ್ಯೆಗಳಿಗೆ ಮುಕ್ತಿ ನೀಡಲು ಗ್ರಾಮ ವಾಸ್ತವ್ಯ

ತಾಳಿಕೋಟೆ17: ಗ್ರಾಮಗಳ ಸಮಸ್ಯೆಗಳನ್ನು ವಾಸ್ತವ್ಯವಾಗಿ ಅರಿತುಕೊಂಡು ಸ್ಥಳದಲ್ಲಿಯೆ ಪರಿಹಾರವನ್ನು ನೀಡಲು ಸರಕಾರ ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಂಡಿದೆ. ಗ್ರಾಮ ವಾಸ್ತವ್ಯ ಸಮಸ್ಯೆಗಳಿಗೆ ಮುಕ್ತಿ ನೀಡುವ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ಗ್ರಾಮ ವಾಸ್ತವ್ಯದ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಹೇಳಿದರು.

ಅವರು ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯವನ್ನು ಉದ್ಘಾಟಿಸಿ ಮಾತನಾಡಿದರು.

ತಹಶೀಲ್ದಾರ ಶ್ರೀಧರ ಗೋಟೋರ ಮಾತನಾಡಿ, ಗ್ರಾಮಗಳ  ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ. ಗ್ರಾಮದಲ್ಲಿ ಮಹಿಳೆಯರ ಶೈಕ್ಷಣಿಕ ಮಟ್ಟ ಅತಿ ಕಡಿಮೆಯಾಗಿದೆ. ಶೈಕ್ಷಣಿಕ ಮಟ್ಟ ಹೆಚ್ಚಿಸಲು ಕ್ರಮ ಕೈಕೊಳ್ಳಬೇಕು. ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವದು. ತಾಲೂಕು ಕಚೇರಿಗಳಿಗೆ ಅಲೆಯುವದನ್ನ ತಪ್ಪುಸಲು ಗ್ರಾಮ ಒನ್ ಕೇಂದ್ರಗಳನ್ನ ಆರಂಭಿಸಲಾಗಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮ ನಮ್ಮದು ಎಂದರೇ ಮಾತ್ರ ಅಭಿವೃದ್ಧಿ ಸ್ವಚ್ಚತೆ ಕಾಣುತ್ತದೆ ಎಂದರು.

ಗ್ರಾಮಕ್ಕೆ ಪ್ರೌಢ ಶಾಲೆ ಮಂಜೂರಿಸುವದು, ಹೆಚ್ಚುವರಿ ಬಸ್ ಸಂಚಾರ , ಪಹಣಿಯಲ್ಲಿನ ತಿದ್ದುಪಡಿಗಳು, ಆರೋಗ್ಯ ಕೇಂದ್ರ ಆರಂಭಿಸುವದು, ರಸ್ತೆ ನಿರ್ಮಾಣ ಗ್ರಂಥಾಲಯ ಆರಂಭಿಸುವದು, ಆಟದ ಮೈದಾನ ದುರಸ್ತಿ, ಕೆರೆ ಅಭಿವೃದ್ದಿಪಡಿಸಿ ಸಸಿಗಳನ್ನು ಹಚ್ಚಿ ಸುಂದರಗೊಳಿಸುವದು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೆರೆಗೆ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವದು, ಹೊಸ ಕಂಬಗಳ ಹಾಕುವದು, ರೈತರಿಗೆ ಪ್ರತ್ಯೇಕ ಟಿಸಿ ಅಳವಡಿಸುವದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಆದೇಶ ಪತ್ರಗಳನ್ನು ವಿತರಿಸಲಾಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ, ಪಿಎಸ್ಆಯ್ ವಿನೋದ ದೊಡಮನಿ, ಕುಡಿಯುವ ನೀರು ವಿಭಾಗದ ಎಇಇ ಜೆ.ಪಿ.ಶೆಟ್ಟಿ, ಪಿಡಬ್ಲುಡಿ ಎಇ ಡಿ.ಬಿ.ಕಲಬುಗರ್ಿ, ಸಿಡಿಪಿಓ ಬಿ.ಜಿ.ಹೊಸಮನಿ, ಹೆಸ್ಕಾಂ ಎಇ ಶಿವನಗೌಡ ಪಾಟೀಲ, ವಲಯ ಅರಣ್ಯಾಧಿಕಾರಿ ರಾಜು ಬಿರಾದಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಉಮೇಶ ಲಮಾಣಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಡಾ.ಸುನೀಲ ಹಿರೇಗೌಡರ, ಬೂದಾಖಲೆಗಳ ಸಹಾಯಕ ನಿರ್ದೇಶಕ ಶಿವಾನಂದ ಸಜ್ಜನ, ಎಮ್.ಬಿ.ಜಯವಾಡಗಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಎನ್.ಎಸ್.ದೊಡಮನಿ, ಅಭಕಾರಿ ಇನ್ಸ್ಪೇಕ್ಟರ್ ಜ್ಯೋತಿ ಮೈತ್ರಿ ಸೇರಿದಂತೆ ಇತರರು ಇದ್ದರು.

ಶಾಲೆಗೆ ಎಸಿ ಭೇಟಿ ;- ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಪ್ರತಿ ತರಗತಿಗೂ ಭೇಟಿ ನೀಡಿ ವಿದ್ಯಾರ್ಥಿಗಳ ಅಭ್ಯಾಸದ ಕುರಿತು ಮಾಹಿತಿ ಪಡೆದರು. 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ನಲ್ಲಿ ಓದಲು ಬರೆಯಲು ಬರದಿರುವ ಕುರಿತು ಮುಖ್ಯಗುರುಗಳನ್ನ  ತರಾಟೆಗೆ ತೆಗೆದುಕೊಂಡರು. ಬಿಸಿಯೂಟ, ಶೌಚಾಲಯವನ್ನು ಪರಿಶೀಲಿಸಿದರು.



ಸುದ್ದಿ ಓದಿ