ಯರಗಟ್ಟಿ

ಸಂಯುಕ್ತ ಆಶ್ರಯದಲ್ಲಿ ಗ್ರಾಮ ಆರೋಗ್ಯ ತರಬೇತಿ ಯನ್ನು ಏರಿ​‍್ಡಸಲಾಗಿದೆ

ಸಂಯುಕ್ತ ಆಶ್ರಯದಲ್ಲಿ ಗ್ರಾಮ ಆರೋಗ್ಯ ತರಬೇತಿ ಯನ್ನು ಏರಿ​‍್ಡಸಲಾಗಿದೆ

ಸಂಯುಕ್ತ ಆಶ್ರಯದಲ್ಲಿ ಗ್ರಾಮ ಆರೋಗ್ಯ ತರಬೇತಿ ಯನ್ನು ಏರಿ​‍್ಡಸಲಾಗಿದೆ 

ಯರಗಟ್ಟಿ 10 : ಸಮೀಪದ ಮಾಡಮಗೇರಿ ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ ತಾಲೂಕ ಪಂಚಾಯತ ಸವದತ್ತಿ ತಾಲೂಕ ಆರೋಗ್ಯಾಧಿಕಾರಿಗಳು ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಆರೋಗ್ಯ ತರಬೇತಿ ಯನ್ನು ಏರಿ​‍್ಡಸಲಾಗಿತ್ತು.ಇವತ್ತಿನ ಆಧುನಿಕ ಜೀವನಶೈಲಿ ಆಹಾರ ಪದ್ಧತಿ, ಚಟಗಳು ಆನುವಂಶೀಯತೆ ಇವುಗಳಿಂದ ಅಸಾಂಕ್ರಾಮಿಕ ರೋಗಗಳಾದ ಬಿಪಿ ಶುಗರ್ ಕ್ಯಾನ್ಸರ್ ಹೃದಯಕ್ಕೆ ಸಂಬಂಧಪಟ್ಟಂತ ಕಾಯಿಲೆಗಳು ಬರುತ್ತಿವೆ. ಇವುಗಳನ್ನು ಪರೀಕ್ಷೆ ಮಾಡುವುದರ ಮೂಲಕ ಆಹಾರದಲ್ಲಿ ಇತಿಮಿತಿಯನ್ನ ಕಾಯ್ದುಕೊಳ್ಳುವುದು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಚಟಗಳಿಂದ ದೂರ ಇರುವುದರಿಂದ ನಿಯಂತ್ರಿಸಬಹುದು ಎಂದು ಹೇಳಿದರು.ನಂತರ ಕ್ಷಯರೋಗ ಸಾಂಕ್ರಾಮಿಕ ರೋಗ ವಾಗಿದ್ದು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಕಫ ಎದೆನೋವು ಸಾಯಂಕಾಲ ಜ್ವರ ರಾತ್ರಿ ಬೆವರು ತೂಕ ಕಡಿಮೆ ಕಂಡುಬಂದಲ್ಲಿ ಕಫ ಪರೀಕ್ಷೆ ಎಕ್ಸರೆ ಇತರೆ ಪರೀಕ್ಷೆ ಗಳ ಮೂಲಕ ಕ್ಷಯರೋಗ ಕಂಡುಹಿಡಿಯಬಹುದು ಹಾಗೂ ಸೂಕ್ತ ಪಡೆದಲ್ಲಿ ಕ್ಷಯರೋಗ ಗುಣಮುಖ ವಾಗುವದುಮಾನಸಿಕ ಆರೋಗ್ಯ ಕ್ಕೆ ಮನೋಚೈತನ್ಯ ಕಾರ್ಯಕ್ರಮ ದಡಿಯಲ್ಲಿ ಚಿಕಿತ್ಸೆ ಪಡೆಯಬಹುದು ಹಾಗೂ 104 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್ ಆರ್ ಗಂಜಿ ಹೇಳಿದರು.ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳಿಗೆ ದೈಹಿಕ ಮಾನಸಿಕ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ ದೈಹಿಕವಾಗಿ ಅವಳ ಅಂಗಾಂಗಗಳ ಬೆಳವಣಿಗೆ ಆಗಿರುವುದಿಲ್ಲ ಮಾನಸಿಕವಾಗಿ ಅವಳ ಜೀವನದ ಬೇಕು ಬೇಡಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಹಾಗೂ ಸಾಮಾಜಿಕವಾಗಿ ಸಮಾಜಕ್ಕೆ ಹೊಂದಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲಬಾಲ್ಯ ವಿವಾಹದಿಂದ ಸತ್ತು ಹುಟ್ಟಿದ ಮಕ್ಕಳು ಕಡಿಮೆ ತೂಕದ ಮಕ್ಕಳು ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ಸಾಧ್ಯತೆ ಇರುವುದು ಆದ್ದರಿಂದ ಎಲ್ಲರೂ ಸೇರಿ ನಿಷೇಧಿಸಬೇಕು ಎಂದುನಂತರ ಅಂಗನವಾಡಿ ಮೇಲ್ವಿಚಾರಕಿಯಾದ ಲಕ್ಷ್ಮಿ ಪಾಟೀಲ ಹೇಳಿದರು.ಗ್ರಾಮದಲ್ಲಿ ಬರುವ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಆರೋಗ್ಯ ಸಮಸ್ಯೆಗಳನ್ನು ಗುರುತಿಸಬಹುದು. ಸಂಭಂದಿಸಿದ ಪರೀಕ್ಷೆ ಗಳ ಮೂಲಕ ಸೂಕ್ತ ಚಿಕಿತ್ಸೆ, ಮಾರ್ಗದರ್ಶನ ಪಡೆದಲ್ಲಿ ಸಾರ್ವಜನಿಕರು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎಂದು ಎಂ ಬಿ ಕುರಿ ಅಭಿಪ್ರಾಯ ಪಟ್ಟರು.ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಂ ಬಿ ಕುರಿ  ಇವರು ವಹಿಸಿದ್ದರು, ದುಂಡಪ್ಪಾ ಭಗನಾಳ, ಆಶಾಕಾರ್ಯಕರ್ತೆಯರು ಅಂಗನವಾಡಿ-ಆಶಾ ಕಾರ್ಯಕರ್ತಯರು ಹಾಜರಿದ್ದರು.ಅರ್ಜುನ ದೇವರಮನಿ ನಿರೂಪಣೆ ಮಾಡಿ ಸ್ವಾಗತಿಸಿ ವಂದಿಸಿದರು.11 ಯರಗಟ್ಟಿ 01 


ಸುದ್ದಿ ಓದಿ