ಬ್ಯಾಡ್ಗಿ

ಶಾಂತಿಯುತವಾಗಿ ಜರುಗಿದ ಗ್ರಾಪಂ ಚುನಾವಣೆ

ಶಾಂತಿಯುತವಾಗಿ  ಜರುಗಿದ  ಗ್ರಾಪಂ ಚುನಾವಣೆ

ಬ್ಯಾಡಗಿ: ತಾಲೂಕಿನ ಅವದಿ ಮುಗಿದ 17 ಸದಸ್ಯರನ್ನೊಳಗೊಂಡ ಕೆರವಡಿ ಗ್ರಾಮ ಪಂಚಾಯತಿಗೆ ಶುಕ್ರವಾರ ಶಾಂತಿಯುತವಾಗಿ ಚುನಾವಣೆ ಜರುಗಿತು.

ಕೆರವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರವಡಿ, ಚಿನ್ನಿಕಟ್ಟಿ, ತಿಪಲಾಪುರ, ಕಳಗೊಂಡ ಗ್ರಾಮಗಳಲ್ಲಿ ಓಟ್ಟು ಏಳು ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಬೆಳಗ್ಗೆ 7.ಗಂಟೆಯಿಂದ ಸಂಜೆ 5.ಗಂಟೆಯವರೆಗೆ ಶೇ.88.92 ರಷ್ಟು ಮತದಾನ ಜರುಗಿತು. ಓಟ್ಟು 5263 ಮತದಾರರಲ್ಲಿ 2400 ಪುರುಷರು 2280 ಸಿೊಥಯರು ತಮ್ಮ ಮತವನ್ನು ಚಲಾಯಿಸಿದರು. ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತಿನಲ್ಲಿ ಶಾಂತಿಯುತವಾಗಿ ಮತದಾನ ಜರುಗಿತು. ಮತ ಪೆಟ್ಟಿಗೆಗಳು ಬ್ಯಾಡಗಿ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಭದ್ರವಾಗಿ ಇಡಲಾಗಿದೆ 

ಸುದ್ದಿ ಓದಿ