ಕಂಪ್ಲಿ

ಕಂಪ್ಲಿ ತಾಲ್ಲೂಕಿನಲ್ಲಿ ಗ್ರಾಮಾಡಳಿತ ಸಂಪೂರ್ಣ ಬಂದ್ : ಮುಷ್ಕರ ಮುಂದುವರಿಕೆ : ಎಚ್‌.ವಿ.ಮಂಜುನಾಥ್

ಕಂಪ್ಲಿ ತಾಲ್ಲೂಕಿನಲ್ಲಿ ಗ್ರಾಮಾಡಳಿತ ಸಂಪೂರ್ಣ ಬಂದ್ : ಮುಷ್ಕರ ಮುಂದುವರಿಕೆ : ಎಚ್‌.ವಿ.ಮಂಜುನಾಥ್

ಕಂಪ್ಲಿ ತಾಲ್ಲೂಕಿನಲ್ಲಿ ಗ್ರಾಮಾಡಳಿತ ಸಂಪೂರ್ಣ ಬಂದ್ : ಮುಷ್ಕರ ಮುಂದುವರಿಕೆ : ಎಚ್‌.ವಿ.ಮಂಜುನಾಥ್ 

ಕಂಪ್ಲಿ 13: ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಫೆ.10ರಿಂದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾಗಿ ಗ್ರಾಮಾಡಳಿತಾಧಿಕಾರಿಗಳ ಮುಷ್ಕರ ನಾಲ್ಕನೇ ದಿನವನ್ನು ಪೂರೈಸಿದ್ದು, ಗ್ರಾಮಾಡಳಿತ ಸಂಪೂರ್ಣವಾಗಿ ಬಂದ್ ಆಗಿದ್ದು, ರೈತರು, ವಿದ್ಯಾರ್ಥಿಗಳು, ವಿವಿಧ ವೇತನಗಳಿಗಾಗಿ ಅರ್ಜಿ ಹಾಕುವವರು, ವಿವಿಧ ಪ್ರಮಾಣ ಪತ್ರಗಳು ಬೇಕಾದವರು ಸೇರಿದಂತೆ ಸಾರ್ವಜನಿಕರಿಗೆ ತೀವ್ರವಾದ ತೊಂದರೆಯಾಗಿದೆ ಆದರೆ, ಸರ್ಕಾರ ಮಾತ್ರ ನಾಲ್ಕು ದಿನಗಳು ಕಳೆದರೂ ಗ್ರಾಮಾಡಳಿತಾಧಿಕಾರಿಗಳ ಸಮಸ್ಯೆ, ಮುಷ್ಕರದ ಬಗ್ಗೆ ಗಮನ ಹರಿಸದಿರುವುದು ಸಾರ್ವಜನಿಕರಲ್ಲಿ ಅಸಮಧಾನವನ್ನು ತಂದಿದೆ. ಗ್ರಾಮಾಡಳಿತಾಧಿಕಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಜಾತಿ, ಆದಾಯ, ಜನನ-ಮರಣ ಪ್ರಮಾಣ ಪತ್ರಗಳ ಸೇವೆ ಸೇರಿದಂತೆ ಇತರೆ ಸೇವೆಗಳಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು, ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ಗ್ರಾಮಗಳಲ್ಲಿನ ಅವರ ಕಚೇರಿಗೆ ತೆರಳಿ ಅಲ್ಲಿ ಬೀಗ ಹಾಕಿರುವುದನ್ನು ನೋಡಿ ತಹಸಿಲ್ದಾರ್ ಹಾಗೂ ನಾಡ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಆದರೆ, ಅಲ್ಲಿ ಗ್ರಾಮಾಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿರುವುದನ್ನು ನೋಡಿ ತಮ್ಮ ಊರುಗಳಿಗೆ ಬಂದ ದಾರಿ ಸುಂಕವಿಲ್ಲವೆಂದು ಹಿಂತಿರುಗುತ್ತಿದ್ದು, ಇನ್ನು ಎಷ್ಟು ದಿನ ಇವರ ಮುಷ್ಕರ ಎಂದು ಪ್ರಶ್ನಿಸುತ್ತಿದ್ದಾರೆ. 

ಕಂಪ್ಲಿ ತಾಲ್ಲೂಕು ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಮಾತನಾಡಿ, ಆ್ಯಪ್‌ಆಧಾರಿತ ಕೆಲಸಗಳನ್ನು ಮಾಡಿಸಬಾರದು ಎನ್ನುವುದು ಸೇರಿದಂತೆ ಗ್ರಾಮಾಡಳಿತಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಸಹಿತ ಇತರೆ ಮೂಲಭುತ ಸೌಲಭ್ಯಗಳನ್ನು ಒದಗಿಸಬೇಕು. ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಗೆ ನಿಗದಿಪಡಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ಇತರೆ ಎಲ್ಲಾ ಇಲಾಖೆಗಳಲ್ಲಿ ಇರುವಂತೆ ವರ್ಗಾವಣೆಗೆ ವಿಶೇಷ ಮಾರ್ಗಸೂಚಿ ರಚಿಸಬೇಕು. ಪ್ರಯಾಣ ಭತ್ಯೆಯನ್ನು 500 ರೂಗಳಿಂದ 5000 ಸಾವಿರ ರೂಗಳಿಗೆ ಹೆಚ್ಚಿಸಬೇಕು. ಪೊಲೀಸ್ ಇಲಾಖೆಯಲ್ಲಿರುವಂತೆ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡಬೇಕು. ಗ್ರಾಮಾಡಳಿತಾಧಿಕಾರಿಗಳನ್ನು ಜಿಲ್ಲಾ ಮಟ್ಟದಲ್ಲಿ ಜೇಷ್ಠತೆ ಗುರುತಿಸದೇ ಕಂದಾಯ ಆಯುಕ್ತಾಲಯದ ವ್ಯಾಪ್ತಿಯಲ್ಲಿ ರಾಜ್ಯಮಟ್ಟದಲ್ಲಿ ಜೇಷ್ಠತೆಯನ್ನು ಗುರುತಿಸಬೇಕು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದ ಅವರು ನಾಲ್ಕು ದಿನಗಳಿಂದ ನಡೆಸುತ್ತಿರುವ ನಮ್ಮ ಮುಷ್ಕರದ ಬಗ್ಗೆ ಸರ್ಕಾರವಾಗಲಿ, ಕಂದಾಯ ಸಚಿವರಾಗಲಿ ಗಮನ ಹರಿಸದಿರುವುದು ನೋವಿನ ಸಂಗತಿಯಾಗಿದ್ದು, ನಮ್ಮ ಮುಷ್ಕರವನ್ನು ಫೆ.15ರವರೆಗೂ ತಾಲ್ಲೂಕು ಕೇಂದ್ರದಲ್ಲಿ ಮುಂದುವರೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಾಡಳಿತಾಧಿಕಾರಿಗಳಾದ ಕೆ.ಎಂ.ಶಿವರುದ್ರಯ್ಯ, ವಿ.ವೆಂಕಟೇಶ್, ನಾರನಗೌಡ್ರು ಕಾಂತರಾಜ್, ಕೆ.ರಾಘವೇಂದ್ರ, ಯು.ವನಿತಾಕುಮಾರಿ, ಕುರುಬರ ಮಂಜುನಾಥ್, ಕರೇಗೌಡ್ರು ಸುರೇಶ್, ವಮ್ಮಾರಿ ರಮೇಶ್, ಕಂಕ್ರಿ ಚನ್ನಕೇಶವ, ಗೀರೀಶ್ ಬಾಬು ಟಿ, ಲಕ್ಷ್ಮಣ ನಾಯಕ್ ಜೆ.ಎಂ,ಅಬ್ದುಲ್ ಖಾದರ್ ನಿಯಾಜಿ, ರೂಪಿಣಿ ಕೆ.ಎಂ, ಕೆ.ಜಿಲಾನಿ, ಮನೋಜ್‌ಕುಮಾರ್‌.ಎಸ್, ಬಿ.ಜ್ಯೋತೆಪ್ಪ, ಮಹಮ್ಮದ್‌ರಬ್, ಕುಸುಮಾ ಎನ್‌. ಸೇರಿದಂತೆ ಇತರರು ಭಾಗವಹಿಸಿದ್ದರು. ಫೆ.004: ಕಂಪ್ಲಿ ಪಟ್ಟಣದ ತಹಸಿಲ್ದಾರ್ ಕಚೇರಿ ಮುಂಭಾಗದಲ್ಲಿ ತಾಲ್ಲೂಕಿನ ಗ್ರಾಮಾಡಳಿತಾಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ ನಾಲ್ಕನೇ ದಿನವೂ ಮುಂದುವರೆಯಿತು. 


ಸುದ್ದಿ ಓದಿ