200 ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ವಿದ್ಯಾಸಾರಥಿ ಉಡಾನ್ ವಿದ್ಯಾರ್ಥಿ ವೇತನ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 08: ಜೆಎಸ್ಡಬ್ಲ್ಯೂ ಫೌಂಡೇಷನ್ ಎನ್ಎಸ್ಡಿಎಲ್ ಇ-ಗವರ್ನೆನ್ಸ್ ಇನ್ಫ್ರಾಕ್ಚರ್ ಲಿಮಿಟೆಡ್ ಸಹಯೋಗದಲ್ಲಿಕರ್ನಾಟಕದ ಬಳ್ಳಾರಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ತನ್ನ ಜೆಎಸ್ಡಬ್ಲ್ಯೂ ವಿದ್ಯಾಸಾರಥಿ ಉಡಾನ್ ಸ್ಕಾಲರ್ಶಿಪ್ ಯೋಜನೆಯಡಿ ವಿದ್ಯಾಥರ್ಿ ವೇತನ ನೀಡಿ ಸನ್ಮಾನಿಸಿತು. ತಂತ್ರಜ್ಞಾನ ಆಧಾರಿತ ಉಪಕ್ರಮ ಇದಾಗಿದ್ದು, ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನದ ಮೂಲಕ ಹಣಕಾಸು ನೆರವು ನೀಡುವ ಕಾರ್ಯಕ್ರಮ ಇದಾಗಿದೆ. ಜೆಎಸ್ಡಬ್ಲ್ಯೂ ಫೌಂಡೇಷನ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿಸ್ವದೀಪ್ ಗುಪ್ತಾ, ಎನ್ಎಸ್ಡಿಎಲ್ನ ಹಿರಿಯ ಉಪಾಧ್ಯಕ್ಷ ವಿನೀತ್ ನಾಯರ್ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ವಿಜಯನಗರ ವಕ್ಸರ್್ನ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ ಸಮ್ಮುಖದಲ್ಲಿ ವಿದ್ಯಾಥರ್ಿಗಳಿಗೆ ಈ ವಿದ್ಯಾಥರ್ಿವೇತನ ನೀಡಿ ಸನ್ಮಾನಿಸಲಾಯಿತು.
2018 ರ ಆಗಸ್ಟ್ನಲ್ಲಿ ವಿದ್ಯಾಸಾರಥಿ ಶೈಕ್ಷಣಿಕ ವಿದ್ಯಾಥರ್ಿ ವೇತನ ಪೋರ್ಟಲ್ ಅನ್ನು ಆರಂಭಿಸಲಾಯಿತು. ವಿದ್ಯಾಥರ್ಿ ವೇತನಕ್ಕಾಗಿ ಜೆಎಸ್ಡಬ್ಲ್ಯೂ ಫೌಂಡೇಷನ್ಗೆ ಬಳ್ಳಾರಿ ಜಿಲ್ಲೆಯ 10,000 ಕ್ಕೂ ಹೆಚ್ಚು ಅಜರ್ಿಗಳು ಬಂದಿದ್ದವು. ಈ ಅಜರ್ಿಗಳನ್ನು ವಿದ್ಯಾಥರ್ಿಗಳ ಮನೆಯ ಪರಿಸ್ಥಿತಿ, ಕುಟುಂಬದ ವಾಷರ್ಿಕ ಆದಾಯ ಮತ್ತು ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಶಾಟರ್್ಲೀಸ್ಟ್ ಮಾಡಲಾಯಿತು. ಇದರ ವಿಶೇಷತೆಯೆಂದರೆ, ಹೆಣ್ಣು ಮಕ್ಕಳು, ಅನಾಥ ಮಕ್ಕಳು, ಒಬ್ಬರೇ ಪೋಷಕರು ಮತ್ತು ವಿಕಲಚೇತನ ವಿದ್ಯಾಥರ್ಿಗಳಿಗೆ ಆದ್ಯತೆ ನೀಡಲಾಗಿದೆ.
ಶಾಟರ್್ಲೀಸ್ಟ್ ಮಾಡಿದ ವಿದ್ಯಾಥರ್ಿಗಳನ್ನು ವೈಯಕ್ತಿಕ ಸಂದರ್ಶನ ಮತ್ತು ದಾಖಲೆಗಳ ದೈಹಿಕ ಪರಿಶೀಲನೆಗೆ ಆಹ್ವಾನಿಸಲಾಗಿತ್ತು. ಅಂತಿಮವಾಗಿ 246 ವಿದ್ಯಾಥರ್ಿಗಳನ್ನು ಈ ವಿದ್ಯಾಥರ್ಿ ವೇತನಕ್ಕೆ ಆಯ್ಕೆ ಮಾಡಲಾಯಿತು. ಈ ಪೈಕಿ ಶೇ.33 ರಷ್ಟು ಹೆಣ್ಣು ಮಕ್ಕಳು ಮತ್ತು ಶೇ.67 ರಷ್ಟು ಬಾಲಕರಾಗಿದ್ದಾರೆ. ಬಿ.ಇ/ಬಿ.ಟೆಕ್. ಐಟಿಐ, ಡಿಪ್ಲೊಮಾ, ಬಿ.ಇಡಿ, ಕೃಷಿಯಲ್ಲಿ ಬಿ.ಎಸ್ಸಿ, ಬಿಸಿಎ, ಬಿಎಫ್ಎ, ಮಾಸ್ಟರ್ಸ್ ಇನ್ ಆಕರ್ಿಯಾಲಜಿ ಮತ್ತು ನಸರ್ಿಂಗ್ನಲ್ಲಿ ಬಿ.ಎಸ್ಸಿ ಪದವಿಯವರಿಗೆ ಈ ವಿದ್ಯಾಥರ್ಿ ವೇತನವನ್ನು ನೀಡಲಾಗುತ್ತಿದೆ.
ಈ ಉಪಕ್ರಮದ ಬಗ್ಗೆ ಮಾತನಾಡಿದ ಜೆಎಸ್ಡಬ್ಲ್ಯೂ ಫೌಂಡೇಷನ್ನ ಮುಖ್ಯಕಾರ್ಯನಿರ್ವಹಣ ಅಧಿಕಾರಿ ಬಿಸ್ವದೀಪ್ ಗುಪ್ತಾ, ``ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶಿಕ್ಷಣ ಒಂದು ದೊಡ್ಡ ಶಕ್ತಿಯಾಗಿದೆ ಮತ್ತು ಆಥರ್ಿಕತೆ ಬೆಳವಣಿಗೆಗೆ ಪೂರಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜೆಎಸ್ಡಬ್ಲ್ಯೂ ಘಟಕಗಳಿರುವ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾಥರ್ಿಗಳ ಸಬಲೀಕರಣ ಬೆಂಬಲಕ್ಕೆ ಜೆಎಸ್ಡಬ್ಲ್ಯೂ ಫೌಂಡೇಷನ್ ಒಂದು ಜಾಗೃತವಾದ ಹೆಜ್ಜೆ ಇಟ್ಟಿದೆ. ಈ ಕಾರ್ಯಕ್ರಮದಿಂದಾಗಿ ಪ್ರತಿಭಾನ್ವಿತ ಉನ್ನತ ಶಿಕ್ಷಣವನ್ನು ಎದುರು ನೋಡುತ್ತಿರುವ ವಿದ್ಯಾಥರ್ಿಗಳನ್ನು ಗುರುತಿಸಲು ಸಾಧ್ಯವಾಗಿದೆ. ನಾವು ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯವನ್ನು ಮುಂದುವರಿಸಲಿದ್ದೇವೆ ಮತ್ತು ಎನ್ಎಸ್ಡಿಎಲ್ ಸಂಸ್ಥೆಯ ಬೆಂಬಲದೊಂದಿಗೆ ಇನ್ನೂ ಹೆಚ್ಚು ವಿದ್ಯಾಥರ್ಿಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುತ್ತೇವೆ'' ಎಂದು ತಿಳಿಸಿದರು.
ಎನ್ಎಸ್ಡಿಎಲ್ನ ಹಿರಿಯ ಉಪಾಧ್ಯಕ್ಷ ವಿನೀತ್ ನಾಯರ್ ಮಾತನಾಡಿ, ``ಸಮರ್ಪಕವಾದ ಸಂಪನ್ಮೂಲಗಳ ಕೊರತೆಯಿಂದಾಗಿ ಭಾರತದಲ್ಲಿ ಅನೇಕ ವಿದ್ಯಾಥರ್ಿಗಳು ಉನ್ನತ ಶಿಕ್ಷಣ ಪಡೆಯುವ ಅಥವಾ ಶಿಕ್ಷಣವನ್ನು ಮುಂದುವರಿಸುವ ಆಯ್ಕೆಯನ್ನು ಮಧ್ಯದಲ್ಲೇ ಕೈಬಿಡುತ್ತಿದ್ದಾರೆ. ಈ ವಿದ್ಯಾಥರ್ಿ ವೇತನಗಳನ್ನು ಪಡೆಯುವ ವಿಧಾನವನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶವನ್ನು ನಾವು ಹೊಂದಿದ್ದು, ಈ ಮೂಲಕ ಸೂಕ್ತ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಇದರ ಪ್ರಯೋಜನ ತಲುಪಿಸುವುದು ನಮ್ಮ ಗುರಿಯಾಗಿದೆ. ಬಳ್ಳಾರಿಯಲ್ಲಿ ವಿದ್ಯಾಥರ್ಿ ವೇತನಕ್ಕಾಗಿ ವಿದ್ಯಾಥರ್ಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆಗಳು ಬಂದಿವೆ. ಈ ವಿದ್ಯಾಥರ್ಿ ವೇತನವು ಯಶಸ್ವಿ ವ್ಯಕ್ತಿಗಳನ್ನಾಗಿ ರೂಪಿಸಲು ನೆರವಾಗುತ್ತದೆ ಎಂಬ ಭರವಸೆ ನಮ್ಮದಾಗಿದೆ. ಈ ದಿಸೆಯಲ್ಲಿ ಜೆಎಸ್ಡಬ್ಲ್ಯೂ ಫೌಂಡೇಷನ್ ನಮ್ಮ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲುತ್ತಿರುವುದನ್ನು ಸ್ವಾಗತಿಸುತ್ತೇವೆ. ಈ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣದ ಹಕ್ಕು ಎಂಬ ನಿಯಮವನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ'' ಎಂದರು.
`ಎಕ್ಸೆಲ್ ಥ್ರೂ ಎಜುಕೇಶನ್ ಎಂಬ ಗುರಿಯೊಂದಿಗೆ ಜೆಎಸ್ಡಬ್ಲ್ಯೂ ಫೌಂಡೇಷನ್ ದೇಶಾದ್ಯಂತ ಇರುವ ಶಾಲೆಗಳಲ್ಲಿ ಕಲಿಕಾ ಸೌಲಭ್ಯಗಳು ಮತ್ತು ದೈಹಿಕ ಮೂಲಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಶಿಕ್ಷಣ, ಶಾಲೆಗಳಿಗೆ ಮೂಲಸೌಕರ್ಯಗಳ ಅಭಿವೃದ್ಧಿ, ವಿದ್ಯಾಥರ್ಿಗಳಿಗೆ ಧನ ಸಹಾಯ ಮತ್ತು ಶಿಕ್ಷಕರಲ್ಲಿ ಕಲಿಸುವ ಸಾಮಥ್ರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿವರ್ಷ 45,000 ಕ್ಕೂ ಹೆಚ್ಚು ಮಕ್ಕಳು ಜೆಎಸ್ಡಬ್ಲ್ಯೂ ಫೌಂಡೇಷನ್ನ ಈ ಉಪಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
ಮುಂದಿನ ಜೆಎಸ್ಡಬ್ಲ್ಯೂ ವಿದ್ಯಾಸಾರಥಿ ಉಡಾನ್ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು 2019 ರ ಜೂನ್ನಲ್ಲಿ ಪ್ರಕಟಿಸಲಾಗುತ್ತದೆ. ಈ ವಿದ್ಯಾಥರ್ಿ ವೇತನದ ಅಜರ್ಿಯನ್ನುwww.vidyasaarathi.com.in/vidyasaarthi/registration ಲಿಂಕ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.