ರಾಣೆಬೆನ್ನೂರ

ಜಿಲ್ಲಾಧ್ಯಕ್ಷರಾಗಿ ವೆಂಕಟೇಶ್ ನೇಮಕ

ಜಿಲ್ಲಾಧ್ಯಕ್ಷರಾಗಿ ವೆಂಕಟೇಶ್ ನೇಮಕ

ರಾಣೆಬೆನ್ನೂರು 17:  ನಗರದ ರಂಗ ಕಲಾಕುಸುಮ ಕೇಂದ್ರದ ಸಂಸ್ಥಾಪಕ, ರಂಗಕಲಾವಿದ, ಶಿಕ್ಷಕ ವೆಂಕಟೇಶ್ ಈಡಿಗೇರ ಅವರನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ವೆಂಕಟೇಶ್ ಅವರ, ನಿರಂತರ ಸೃಜನಶೀಲ ಕ್ರಿಯಾತ್ಮಕ, ಸಾಂಸ್ಕೃತಿಕ  ಚಟುವಟಿಕೆಗಳನ್ನು ಗುರುತಿಸಿರುವ, ರಾಜಾಧ್ಯಕ್ಷ ಸಿ. ಎನ್. ಅಶೋಕ್ ಅವರು ಇವರನ್ನು ನೇಮಕಾತಿ ಗೋಳಿಸಿ ಆದೇಶ ಪತ್ರ ರವಾನಿಸಿದ್ದಾರೆ.ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದ ಸಂಘಟನೆಯಾಗಿದ್ದು,ಮಕ್ಕಳಲ್ಲಿ ಸು ಪ್ತವಾಗಿ ಅಡಗಿರುವ ಸಾಹಿತ್ಯ, ಸಂಗೀತ,ಸೃಜನಶೀಲ ಬರವಣಿಗೆ,ಪರಿಸರ ಸಂರಕ್ಷಣೆ,ಸಹಬಾಳ್ವೆ, ದೇಶಾಭಿಮಾನ ಬೆಳೆಸುವ,ಪ್ರಮುಖ ಉದ್ದೇಶ ಹೊಂದಿದೆ. ಉದ್ದೇಶಿತ ಯೋಜನೆ ಜಿಲ್ಲೆಯಲ್ಲಿ ಮತ್ತು ತಾಲೂಕ ಕೇಂದ್ರಗಳಲ್ಲಿ ಪಸರಿಸುವ ಆಶಯದೊಂದಿಗೆ ಇವರನ್ನು ನೇಮಕ ಗೊಳಿಸಲಾಗಿದೆ. ಎಂದು  ರವಾನಿಸಿರುವ ಆದೇಶ ಪತ್ರದಲ್ಲಿ ಅಧ್ಯಕ್ಷರಾದ ಅಶೋಕ್ ಅವರು ಆಶ ಯ ವ್ಯಕ್ತಪಡಿಸಿದ್ದಾರೆ ಮತ್ತು  ಇಂದಿನಿಂದಲೇ, ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕೋರಿದ್ದಾರೆ 

ಸುದ್ದಿ ಓದಿ