ಬೆಡಸಗಾಂವದಲ್ಲಿ ವೀರಭದ್ರ ಗುಗ್ಗಳ ಮಹೋತ್ಸವ
Veerabhadra Guggala festival in Bedasgaon
ಮುಂಡಗೋಡ 28 : ತಾಲೂಕಿನ ಬೆಡಸಗಾಂವ ಗ್ರಾಮದಲ್ಲಿ ವೀರಭದ್ರ ದೇವರ ಗುಗ್ಗಳ ಮಹೋತ್ಸವ ಇಂದು ಭಕ್ತಿಭಾವದಿಂದ ಜರುಗಿತು. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಮಹೋತ್ಸವವು ಬೆಳಿಗ್ಗೆ 8 ಗಂಟೆಗೆ ರಾಮಲೀಂಗೇಶ್ವರ ದೇವಸ್ಥಾನದಿಂದ ಆರಂಭವಾಗಿ, ಮುತ್ತೈದೆಯರು ಕಳಸ ಹೊತ್ತು ಊರಿನ ಮನೆಬಾಗಿಲಲ್ಲಿ ಪೂಜೆ ಸಲ್ಲಿಸಿದರು. ನಂತರ ಗುಡ್ಡದ ಮೇಲಿರುವ ಪುರಾತನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ, ವಡಪು ಹಾಗೂ ಕುಣಿತ ನಡೆಯಿತು. ಬಳಿಕ ಗುಗ್ಗಳ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಭಕ್ತರು ಕೊಂಡವನ್ನು ದಾಟಿ ಹರಕೆ ಸಲ್ಲಿಸಿದರು. ಅಂತಿಮವಾಗಿ ಗುಗ್ಗಳ ಕೊಡವನ್ನು ನೀರಿಗೆ ಸಮರ್ಿಸಿ, ಭಕ್ತರು ದೇವಸ್ಥಾನದ ಆವರಣದಲ್ಲಿ ಅನ್ನಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 