ಸೊಲಾಪೂರ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರೆಯ ವಿವಿಧ ಕಾರ್ಯಕ್ರಮ
ಸಂಕೇಶ್ವರ : ಮೇ 24 ರಿಂದ ಸೊಲಾಪೂರ ಗ್ರಾಮದ ಮಹಾಲಕ್ಷ್ಮೀ ದೇವಿ ಮತ್ತು ಮರಗಾಯಿದೇವಿ ಜಾತ್ರೆ ಮಹೋತ್ಸವದ ಅಂಗವಾಗಿ ಇಂದು ದೇವಿಯ ಸಲುವಾಗಿ ಬಿಟ್ಟ ಕೋಣಗಳ ಮೆರವಣಿಗೆ ಹಾಗೂ ಹಕ್ಕುದಾರರ ಮನೆಗಳಿಗೆ ಹೋಗುವುದು ಪ್ರಮುಖ ಬೀದಿಗಳಿಂದ ಹೋಗುವುದು ನಂತರ ರಂಗಪ್ರವೇಶ ಕಾರ್ಯಕ್ರಮವಗಳು ನಡೆಯುತ್ತವೆ. ಸಂಜೆ ಮಹಾಲಕ್ಷ್ಮೀಗೆ ಉಡಿ ತುಂಬುವ ಕಾರ್ಯಕ್ರಮವು ಜರುಗುವುವು. ಸೌ ಮತ್ತು ನಿಖಿಲ ಉಮೇಶ ಕತ್ತಿ ಶಾಸಕರು ಹುಕ್ಕೇರಿ ಸೌ ಮತ್ತು ಅಮರ ನಲವಡೆ, ಸೌ ಮತ್ತು ಸುನೀಲ ಪರ್ವತರಾವ. ಸೌ ಮತ್ತು ರಾಜು ಕೋರಿ, ಸೌ ಮತ್ತು ಶಿವಲಿಂಗ ಖವಣಿ, ಸೌ ಮತ್ತು ಅಭಿಜಿತ ಕುರಣಕರ ಸೌ ಮತ್ತು ಶ್ರೀಕಾಂತ ಹತನೂರಿ, ಸೌ ಮತ್ತು ಸದಾಶಿವ ನೇವಡಿ, ಸೌ ಮತ್ತು ನಾಗೇಶ ಕುಲಕಣರ್ಿ, ಇವರೆಲ್ಲರೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಿದರು.
ದಿ.25 ರಂದು ಮೋಟಾರ್ ಸೈಕಲ್ ಜೊತೆ ಎಮ್ಮೆ ಓಡಿಸುವ ಸ್ಪಧರ್ೆ, ದಿ. 26 ರಂದು ಮಹಾಲಕ್ಷ್ಮೀ ದೇವಿಯ ಉಡಿ ತುಂಬುವ ಸ್ಪರ್ಧೆ , ಮೊಟಾರ್ ಸೈಕಲ್ ಜೊತೆ ನಾಯಿ ಓಡಿಸುವ ಸ್ಪಧರ್ೆ ಹಾಗೂ ಮೇ. 27ರಂದು ಮಧ್ಯಾಹ್ನ 3 ಗಂಟೆಗೆ ದೇವಿಯ ಮಹಾಪೂಜೆ ಜಾತ್ರೆಯ ಮುಕ್ತಾಯ ಸಮಾರಂಭ ಮಾಜಿ ಸಚಿವ ಎ.ಬಿ.ಪಾಟೀಲ, ದತ್ತಾತ್ರೆಯ ಕುಲಕರ್ಣಿ , ಅಣ್ಣಪ್ಪಾ ಡೋಣವಾಡಿ, ಶಂಕರ ಕುಲಕರ್ಣಿ, ಅವಿನಾಶ ನಲವಡೆ, ಬಸವರಾಜ ಮಠದ, ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಹಾಲಕ್ಷ್ಮೀಯ ಭವ್ಯ ಮೆರವಣಿಗೆ ಆರಂಭವಾಗಿ ಗ್ರಾಮ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೀಮೆಗೆ ಕಳಿಸಿಕೊಡುವುದು. ಸದ್ಭಕ್ತರು ಶಾಂತ ರೀತಿಯಿಂದ ಭಾಗವಹಿಸಿ ದೇವಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸದ್ಭಕ್ತರಲ್ಲಿ ಗ್ರಾಮದ ಹಿರಿಯರಾಧ ಶಶಿರಾಜ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ಮಸ್ತಿ, ರಾಜು ಕೋರಿ, ಸದಾಶಿವ ನೇವಡೆ, ಊರಿನ ಎಲ್ಲ ಹಿರಿಯರು ಮನವಿ ಮಾಡಿಕೊಂಡಿದ್ದಾರೆ.