ಹೂವಿನ ಹಡಗಲಿ

ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ವೈವಿಧ್ಯಮಯ ನೃತ್ಯ ಸ್ಪರ್ಧಾಕೂಟ

ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ವೈವಿಧ್ಯಮಯ ನೃತ್ಯ ಸ್ಪರ್ಧಾಕೂಟ

ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ವೈವಿಧ್ಯಮಯ ನೃತ್ಯ ಸ್ಪರ್ಧಾಕೂಟ 

ಹೂವಿನ ಹಡಗಲಿ 29 :- ವಿಜಯನಗರ ಜಿಲ್ಲೆಯ ಪ್ರತಿಷ್ಠಿತ ಸಾಂಸ್ಕೃತಿಕ ಶೈಕ್ಷಣಿಕ, ಮತ್ತು ಸಾಮಾಜಿಕಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಇದೇ ದಿನಾಂಕ 24/08/2025 ಭಾನುವಾರ ದಂದು  ರಾಜ್ಯ ಮಟ್ಟದ  ವೈವಿಧ್ಯಮಯ ನೃತ್ಯ ಸ್ಪರ್ಧೆ ಜರುಗಿತು ಈ ಒಂದು ಅವಿಸ್ಮರಣೀಯ ವಿಶಿಷ್ಟ ನೈಪುಣ್ಯತೆಯನ್ನು ಹೊಂದಿರುವ ನೃತ್ಯ ಕಲಾವಿದರನ್ನು ಗುರುತಿಸುವ ಸ್ಪರ್ಧೆಯಲ್ಲಿ ಸಮಸ್ತ ರಾಜ್ಯಾದ್ಯಂತ ಅಷ್ಟೇ ಅಲ್ಲದೇ ಅಂತರಾಜ್ಯ ಕಲಾವಿದರು ಭಾಗವಹಿಸಿದ್ದರು. 

ಇಂದು ಜರುಗಿದ ರಾಜ್ಯ ನೃತ್ಯ ಕಲಾವಿದರ ವೇದಿಕೆ  -7 ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿಸ್ಫೂರ್ತಿ ಕಲಮೆ, ದ್ವಿತೀಯ ಸ್ಥಾನದಲ್ಲಿರಕ್ಷತ್ ಆಚಾರ್, ತೃತೀಯ ಸ್ಥಾನದಲ್ಲಿ ಶಮ್ಯ. ಎಸ್‌. ರಾವ್,ವಿಶೇಷ ಸ್ಥಾನದಲ್ಲಿಚಿನ್ಮಯ್, ವಿಭಶ್ರೀ, ತನುಮಯಕ್ರಮವಾಗಿ ಸಿನಿಮಾ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದರು. 

ವಿಜೇತರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) . ಹೂವಿನ ಹಡಗಲಿ. ಇದರ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಯವರು ಪ್ರತಿವಾರವು ನೃತ್ಯ, ಗಾಯನ ಸ್ಪರ್ಧೆ, ಕಾವ್ಯ ಸ್ಪರ್ದೆ ಸಂಘದ ವತಿಯಿಂದ ನಡೆಯುತ್ತದೆ. ಎಂದು ತಿಳಿಸಿದರು. ವಿಜೇತರಾಗಿ ಪ್ರಶಸ್ತಿ ಪ್ರಧಾನ ಪ್ರಮಾಣ ಪತ್ರ ಪಡೆದ ಸಮಸ್ತ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು. ಶ್ರೀಮತಿ ಗಿರಿಜಾ ನಿರ್ವಾಣಿ ಯವರು ಇಂದಿನ ಚಿತ್ರಕಲಾ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. 


ಸುದ್ದಿ ಓದಿ