ಯರಗಟ್ಟಿ

ವಾಲ್ಮೀಕಿಯ ರಾಮಾಯಣ ಮಾನವ ಕುಲವನ್ನು ಉದ್ಧಾರ ಮಾಡಲಿಕ್ಕೆ ಹುಟ್ಟಿದೆ: ಗುರು ವಾಲಿ

ವಾಲ್ಮೀಕಿಯ ರಾಮಾಯಣ ಮಾನವ ಕುಲವನ್ನು ಉದ್ಧಾರ ಮಾಡಲಿಕ್ಕೆ ಹುಟ್ಟಿದೆ: ಗುರು ವಾಲಿ

ಯರಗಟ್ಟಿ : ಆದಿಕವಿ ವಾಲ್ಮೀಕಿ ಮಹರ್ಷಿಯ ರಾಮಾಯಣವು ಮಾನವ ಕುಲವನ್ನು ಉದ್ಧಾರ ಮಾಡಲಿಕ್ಕೆ ಹುಟ್ಟಿದ ಮಹಾಗ್ರಂಥ. ಇದರಲ್ಲಿ ಪ್ರತಿಪಾದಿತವಾಗಿರುವ ಮೌಲ್ಯಗಳು ಕಾಲಬದ್ಧವಲ್ಲ, ದೇಶಬದ್ದವಲ್ಲ, ಸಾರ್ವಕಾಲಿಕ ನಿತ್ಯ ಸತ್ಯ ಎಂದು ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ ಹೇಳಿದರು.

ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಮಹಷರ್ಿ ವಾಲ್ಮೀಕಿ ಯುವಕ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವ ಚಿತ್ರಕೆ ಪೂಜೆ ಸಲ್ಲಿಸಿ ಮಾತನಾಡಿದರು.

ರಾಮಾಯಣ ರಚಿತವಾದದ್ದೇ ಧರ್ಮದ ತಾತ್ವಿಕತೆಯನ್ನು, ಆದರ್ಶವನ್ನು, ಸಮನ್ವಯತೆಯನ್ನು ಜನಸಾಮಾನ್ಯರ ವ್ಯಾವಹಾರಿಕ ಜೀವನಕ್ಕೆ ಅಳವಡಿಸಿಕೊಡಲು. ಇಲ್ಲಿಯ ರಾಮತತ್ವ ಜಾತ್ಯತೀತ, ಧರ್ವತೀತ, ಕಾಲಾತೀತ, ದೇಶಾತೀತ. ಈ ಕಾವ್ಯದ ಮೂಲಕ ವಾಲ್ಮೀಕಿ ಹೇಳಬಯಸಿರುವುದು ಮಾನವನ ಮನೋವಿಕಾಸ ಮತ್ತು ಮಾನವರ ಬದುಕಿನ ಮಾರ್ಗಸೂಚಿಯನ್ನು. ಆದರ್ಶ ತಂದೆ-ತಾಯಿಗಳು, ಆದರ್ಶ ಸಹೋದರರು, ಆದರ್ಶ ಪತಿ-ಪತ್ನಿ, ಆದರ್ಶ ಪ್ರಜೆಗಳು, ಆದರ್ಶ ರಾಜ್ಯವನ್ನು ನಿರೂಪಿಸಲು ಬೇಕಾಗಿರುವ ನ್ಯಾಯ, ನೀತಿ, ಧರ್ಮ, ಸ್ನೇಹ, ಸತ್ಯ, ಶಾಂತಿ, ಸರಳತೆ, ಭಕ್ತಿ, ಇತ್ಯಾದಿ ಆದರ್ಶಗಳೇ ಈ ಕಾವ್ಯದ ಜೀವಾಳವಾಗಿ ಮೂಡಿಬಂದಿವೆ. 

ಈ ಕಾವ್ಯದ ಜೀವರಸ, ಕಾವ್ಯದ ಆತ್ಮರಸ, ಕಾವ್ಯದ ಧ್ವನಿರಸ, ಕರುಣಾರಸಂ ಏಕೋರಸಂ ಎನ್ನುವಂತೆ ಕಾವ್ಯ ಕರುಣಾ ರಸದಿಂದಲೆ ಆರಂಭವಾಗಿ, ಕರುಣಾ ರಸದಿಂದಲೇ ಮುಕ್ತಾಯವಾಗುತ್ತದೆ ಎಂದರು.

ಪೂಜ್ಯ ಬಸಯ್ಯ ಸಾಲಿಮಠ ಮಾತನಾಡಿ, ವಾಲ್ಮೀಕಿ ಒಬ್ಬ ಬೇಡ, ಬೇಟೆಗಾರ. ಗುಡ್ಡಗಾಡು ತಿರುಗುವ ಅಲೆಮಾರಿ. ಕಾಯಕದಿಂದಲೇ ಕೈಲಾಸ ಎನ್ನುವಂತೆ ಬೇಟೆಗಾರನಾದ ಬೇಡನಿಗೆ ಆ ಬೇಟೆಯೆ ಅವನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿ ತಿರುವನ್ನು ಕೊಡುತ್ತದೆ. ಬೇಟೆಯಿಂದಾಗುವ ಸೋವು, ಸಂಕಟ, ವಿಷಾದಗಳ ಶ್ಲೋಕವೇ ಶ್ಲೋಕವಾಗಿ ವಾಲ್ಮೀಕಿ ಪರಿವತರ್ಿತನಾಗುತ್ತಾನೆ ಹಾಗೆಯೇ ನಮ್ಮ ಬದುಕಿನಲ್ಲಿಯೂ ಬದಲಾವಣೆಗಳನ್ನು ತಂದುಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದರು.

ಚಂದ್ರು ಪಾಟೀಲ, ರಾಜು ಸೋಮನ್ನವರ, ಸುರೇಶ ನಂದಿ, ಶಿವಪ್ಪ ತುರಮಂದಿ, ಬಸವರಾಜ ಮಾದನ್ನವರ, ವಿಠ್ಠಲ ತುರಮಂದಿ, ನಾಗಪ್ಪ ತುರಮಂದಿ, ಚಂದ್ರಪ್ಪ ದೇಸಾಯಿ, ಸೇರಿದಂತೆ ಮಹರ್ಷಿ ವಾಲ್ಮೀಕಿ ಯುವಕ ಮಂಡಳಿ ಸದಸ್ಯರು ಗ್ರಾಮ ಪಂಪಚಾಯತ ಸದಸ್ಯರು ಉಪಸ್ಥಿತರಿದ್ದರು.


ಸುದ್ದಿ ಓದಿ