ವಿ.ವಿ.ಸಂಘದ ಸಾಂಸ್ಕೃತಿಕ ಉತ್ಸವ ಶಾಲಾ, ಕಾಲೇಜು ವಿದ್ಯಾಥರ್ಿಗಳ ಕಲಾತಂಡಗಳ ಆಕರ್ಷಕ ಮೆರವಣಿಗೆ

ವಿ.ವಿ.ಸಂಘದ ಸಾಂಸ್ಕೃತಿಕ ಉತ್ಸವ  ಶಾಲಾ, ಕಾಲೇಜು ವಿದ್ಯಾಥರ್ಿಗಳ ಕಲಾತಂಡಗಳ ಆಕರ್ಷಕ ಮೆರವಣಿಗೆ

ಬಳ್ಳಾರಿ 22: ನಗರದ ಪ್ರತಿಷ್ಟಿತ ವೀರಶೈವ ವಿದ್ಯಾವರ್ದಕ ಸಂಘದ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಸಂಘದ ಶಾಲಾ, ಕಾಲೇಜು ವಿದ್ಯಾಥರ್ಿಗಳಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಥರ್ಿಕಲಾತಂಡಗಳ ಆಕರ್ಷಣಾ ಮೆರವಣಿಗೆ ನಗರದ ನಾಗರಿಕರ ಗಮನ ಸೆಳೆಯಿತು. 

ಇಲ್ಲಿನ ಮುನ್ಸಿಪಲ್ ಹೈಸ್ಕೂಲಿನ ಮೈದಾನದಿಂದ ಸಂಘದ ಲಾಂಛನ ಮತ್ತು ಕಲಾತಂಡಗಳಿಂದ ಆರಂಭಗೊಂಡ ಮೆರವಣಿಗೆ ಸಂಘದ ಅಧ್ಯಕ್ಷ ಉಡೇದ ಬಸವರಾಜ ಚಾಲನೆ ನೀಡಿದರು. ಈ ಮೆರವಣಿಗೆಯು ಗಡಗಿ ಚನ್ನಪ್ಪ ವೃತ್ತದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಹೊಸ ಬಸ್ನಿಲ್ದಾಣದ ಬಳಿ ಇರುವ ಹೀರೆಸೂಗಮ್ಮ ಶಾಲಾ ಆವರಣಕ್ಕೆ ತೆರಳಿತು. 

ಮೆರವಣಿಗೆಯಲ್ಲಿ ಅಲ್ಲಂ ಸುಮಂಗಲಮ್ಮ ಕಾಲೇಜಿನ ವಿದ್ಯಾಥರ್ಿನೀಯರಿಂದ ಡೊಳ್ಳು ಕುಣಿತ, ಪೂಜಾಕುಣಿತ ಮೊದಲಾದವುಗಳು ಆಕರ್ಷಣಿಯವಾಗಿತ್ತು. ದೇಶನೂರ, ಹೊಸಪೇಟೆ, ವಿಜಯನಗರ ಕಾಲೇಜು ಸೇರಿದಂತೆ ವಿವಿದ ಕಾಲೇಜುಗಳಿಂದ ನಂದಿಕೋಲು, ಸಮಾಳ, ಗೊರವರ ಕುಣಿತ, ಕೋಲುಕುಣಿತ, ಸೇರಿದಂತೆ ಹಲವು ಜನಪದ ಪ್ರಕಾರಗಳ ಕಲಾತಂಡಗಳ ಜೊತೆಗೆ ಸಂಘದ ಶಾಲಾ, ಕಾಲೇಜು ವಿದ್ಯಾಥರ್ಿಗಳು ಮತ್ತು ಬೋದಕ ಸಿಬ್ಬಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಮುನ್ನ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಯೋದರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಕಾರ್ಯದಶರ್ಿ ಚೋರನೂರು ಕೊಟ್ರಪ್ಪ, ಹೆಚ್.ಎಂ ವೀರಭದ್ರಶರ್ಮ, ಕೆ.ವಿರೇಶಗೌಡ, ಕೋಳುರು ಮಲ್ಲಿಕಾಜರ್ುನ ಗೌಡ, ಜಾನೆಕುಂಟೆ ಬಸವರಾಜ, ಡಾ|| ಸೋಮೇಶ್ವರಗಡ್ಡಿ, ಮೋಹನರೆಡ್ಡಿ, ಉಮಾಶಂಕರ್, ವೀರುಪಾಕ್ಷಗೌಡ, ಜಾಳಿಹಾಳ ಶರಣಪ್ಪ, ಸಂಗನಕಲ್ಲು ಹೇಮಂತರಾಜ, ಕೇಣಿಬಸಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.


ಸುದ್ದಿ ಓದಿ