ವಿಮ್ಸ್ ನಸರ್ಿಂಗ್ ಅಧೀಕ್ಷರ ವಜಾಗೊಳಿಸಲು ಆಗ್ರಹಿಸಿ ಕ.ರಾ.ವೇ ಯಿಂದ ಪ್ರತಿಭಟನೆ

ವಿಮ್ಸ್ ನಸರ್ಿಂಗ್ ಅಧೀಕ್ಷರ ವಜಾಗೊಳಿಸಲು ಆಗ್ರಹಿಸಿ ಕ.ರಾ.ವೇ ಯಿಂದ ಪ್ರತಿಭಟನೆ

ಬಳ್ಳಾರಿ 14:ವಿಮ್ಸ್ ಆಸ್ಪತ್ರೆಯ ನಸರ್ಿಂಗ್ ಅಧೀಕ್ಷರಾದ ಸಂಪತ್ ಕುಮಾರ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಕ.ರಾ.ವೇ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮುವಾರ ವಿಮ್ಸ್ ಆಸ್ಪತ್ರಯ ಎದರು ಪ್ರತಿಭಟನೆ ನಡೆಸಿದರು. ಇತ್ತಿಚೆಗೆ ನಸರ್ಿಂಗ್ ಅಧೀಕ್ಷಕರ ಕಛೇರಿಯಲ್ಲಿ ನಡೆದ ಗೊಂದಲ ಹಾಗೂ ಕಳೆದ ಹಲವು ವರ್ಷಗಳಿಂದ ನಸರ್ಿಂಗ್ ಅಧೀಕ್ಷಕರಾದ ಸಂಪತ್ಕುಮಾರ ಅವರು ಸ್ಟಾಫ್ ನಸರ್್ಗಳ ಮೇಲೆ ದೌರ್ಜನ್ಯವೆಸಗುತ್ತಾ ಬಂದಿದ್ದು. ಅಲ್ಲದೇ ತಾವು ಹೇಳಿದಂತೆ ಕೇಳುವ ನಸರ್್ಗಳಿಗೆ ಹಾಜರಾತಿ ಮತ್ತು ಸಂಬಂಧಪಟ್ಟ ವಾರ್ಡಗಳಿಗೆ ಸಿಪ್ಟ್ ಆಗಲಿ, ರಜೆ ಆಗಲಿ ದೊರೆಯುತ್ತವೆ. ಒಂದುವೇಳೆ ಅವರು ಹೇಳಿದಂತೆ ಕೇಳದೇ ಹೋದಲ್ಲಿ ಹಾಜರಾತಿ ದೊರೆಯುದಿಲ್ಲ. ರಜೆಯು ದೊರೆಯುದಿಲ್ಲ, ಇಂತಹ ಪರಿಸ್ಥಿತಿ ಅಧೀಕ್ಷಕರಿಂದ ಎದುರಾಗಿದೆ ಎಂದು ಪ್ರತಿಭನಾಕಾರರು ಆರೋಪಿಸಿದರು. ಕೂಡಲೇ ಅಧೀಕ್ಷಕರಾದ ಸಂಪತ್ಕುಮಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಲ್ಲದೇ ಇತ್ತೀಚೆಗೆ ವಿಮ್ಸ್ನಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಲೈಂಗಿಕ ಕಿರುಕುಳದಿಂದ ನೊಂದಿರುವ ಮಹಿಳೆಯರಿಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ವಿಮ್ಸ್ ನಿಧರ್ೇಶಕರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ಸೇನಾ ಜಿಲ್ಲಾಧ್ಯಕ್ಷ ಪ್ರಸಾದ, ಜಿಲ್ಲಾ ಯುವ ಘಟನಕದ ಅಧ್ಯಕ್ಷ ಶ್ರೀನಿವಾಸ, ತಾಲೂಕು ಅಧ್ಯಕ್ಷ ಉಮರ್ ಫಾರುಕ್, ಗಂಗಣ್ನ, ಜಾನಿ, ಪಿರಾ, ದುರುಗೇಶ, ಮಹೇಶ, ಯರ್ರಿಸ್ವಾಮಿ, ರಮೇಶ, ಶಿವು, ಕಿತರ್ಿ, ಪ್ರವಿಣ, ಚಿರಂಜೀವಿ, ಹೊನ್ನುರುಸ್ವಾಮಿ, ಶಂಕರ ಸೇರಿದಂತೆ ಹಲವಾರು ಕ.ರಾ.ವೇ ಸಂಘಟನಾಕಾರರು ಭಾಗವಹಿಸಿದ್ದರು.

 

ಸುದ್ದಿ ಓದಿ