ವಕೀಲರ ರಕ್ಷಣೆ ಕಾಯ್ದೆ ಮಸೂದೆ ಜಾರಿಗೆ ಒತ್ತಾಯ
ಲೋಕದರ್ಶನ ವರದಿ
ಹೂವಿನಹಡಗಲಿ : ವಕೀಲರ ಮೇಲೆ ನಿರಂತರ ಹಲ್ಲೆ ನಡೆಯುತ್ತಿವೆ .ವಕೀಲರು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಕೂಡಲೇ ಸಕರ್ಾರ ವಕೀಲರ ಸಂರಕ್ಷಣಾ ಕಾಯ್ದೆಯನ್ನು ತಕ್ಷಣ ಜಾರಿಗೆ ಆಗ್ರಹಿಸಿ ತಾಲೂಕು ವಕೀಲರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಸುಧಾಕರ ಸಿ.ಶ್ಯಾನಭೋಗ ಮಾತನಾಡಿ ರಾಜ್ಯದಲ್ಲಿ ವಕೀಲರ ವಿರುದ್ಧ ಸಾರ್ವಜನಿಕರು ಹಾಗೂ ಪೊಲೀಸರು ನಿರಂತರ ಸಿಂಸೆ,ದಬ್ಬಾಳಿಕೆ, ನಡೆಯುತ್ತಿದ್ದು, ವಕೀಲರು ತಮ್ಮ ವೃತ್ತಿಯನ್ನು ನಿರ್ಭೀತಿಯಿಂದ ನಡೆಸಲು ವಿನಾ ಕಾರಣ ವಕೀಲರ ಮೇಲೆ ಹಲ್ಲೆ ,ದೌರ್ಜನ್ಯ ನಡೆಯುತ್ತಿದ್ದು ಕೂಡಲೇ ವಕೀಲರ ಸಂರಕ್ಷಣಾ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಎಂ.ಗಂಗಾಧರ, ಕಾರ್ಯದಶರ್ಿ ಕರ್ಜಗಿ ಕೊಟ್ರೇಶ, ಖಜಾಂಚಿ, ಷಣ್ಮುಖನಗೌಡ, ಜಿ.ಗುರುಬಸವರಾಜ, ಎಸ್.ಎಚ್.ಛಬ್ಬಿ ಇದ್ದರು.