ಕಾರವಾರ

ಫೆ.3 ಕ್ಕೆ ಉಳವಿ ರಥೋತ್ಸವ ; 2000 ಚಕ್ಕಡಿ ಬರಬಹುದು ಎಂಬ ನೀರೀಕ್ಷೆ : ಸಂಜಯ್ ಕಿತ್ತೂರುಸರಾಯಿ ಮುಕ್ತ ಹಾಗೂ ಪ್ಲಾಸ್ಟಿಕ್‌ ಮುಕ್ತ ಜಾತ್ರೆ ಮಾಡಲು ಪ್ರಯತ್ನ

ಫೆ.3 ಕ್ಕೆ  ಉಳವಿ ರಥೋತ್ಸವ ; 2000 ಚಕ್ಕಡಿ ಬರಬಹುದು ಎಂಬ ನೀರೀಕ್ಷೆ : ಸಂಜಯ್ ಕಿತ್ತೂರುಸರಾಯಿ ಮುಕ್ತ ಹಾಗೂ ಪ್ಲಾಸ್ಟಿಕ್‌ ಮುಕ್ತ  ಜಾತ್ರೆ ಮಾಡಲು ಪ್ರಯತ್ನ
Ulavi Rathotsava on Feb. 3; Expectation that 2000 Chakkadis may come: Sanjay Kittursarai is trying

            ಕಾರವಾರ 23 : ಜ.25 ರಂದು  ಷಟಸ್ಥಲ ಧ್ವಜಾರೋಹಣ ದೊಂದಿಗೆ  ಉಳವಿ ಜಾತ್ರೆ ಆರಂಭವಾಗಲಿದೆ. ಸಂಜೆ ವಿಶೇಷ ಸೀಮಾ ಪೂಜೆ ಇರಲಿದೆ ಎಂದು ಉಳವಿ ಚನ್ನಬಸವೇಶ್ವರ ಟ್ರಸ್ಟನ ಅಧ್ಯಕ್ಷ ಸಂಜಯ್ ಕಿತ್ತೂರು ಹೇಳಿದರು .ಕಾರವಾರ ಪತ್ರಿಕಾಭವನದಲ್ಲಿ  ಶುಕ್ರವಾರ ಉಳವಿ ಚನ್ನಬಸವೇಶ್ವರ ಟ್ರಸ್ಟನ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜಾತ್ರೆಯ ವಿವರ ನೀಡಿದರು. ಫೆ.3 ಕ್ಕೆ  ಉಳವಿ ರಥೋತ್ಸವ ಮಾಘಮಾಸದ ಶುಭಘಳಿಗೆಯಲ್ಲಿ  ನಡೆಯಲಿದೆ.   2000 ಚಕ್ಕಡಿಗಳು ಜಾತ್ರೆಗೆ  ಬರಬಹುದು ಎಂಬ ನೀರೀಕ್ಷೆಯಿದೆ. ಭಕ್ತರಿಗೆ ಕುಡಿಯುವ ನೀರು ಸೇರಿದಂತೆ  ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

            ಉಳವಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ, ಭಕ್ತರಿಗೆ ವಸತಿ ವ್ಯವಸ್ಥೆ ಇದೆ. ಉಳವಿ ಬೀದಿಗಳಲ್ಲಿ ಹೆಚ್ಚಿನ  ಬೆಳಕು ವ್ಯವಸ್ಥೆ ಕಲ್ಪಿಸಲು  ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್  , ಪರಿಷತ್ ಸದಸ್ಯರ  ಅನುದಾನ ದಿಂದ 3 ಲಕ್ಷ ರೂ. ನೆರವು ನೀಡಿದ್ದಾರೆ. ಹಿರಿಯ ಶಾಸಕ ಆರಿ​‍್ವ. ದೇಶಪಾಂಡೆ ಅವರು ಉಳವಿಗೆ ಬರುವ ಎಲ್ಲಾ  ರಸ್ತೆ ಮಾರ್ಗ  ರಿಪೇರಿಗೆ ಅನುದಾನ ನೀಡಿ, ರಸ್ತೆಗಳನ್ನು ಸುಸಜ್ಜಿತ  ಮಾಡಿಸಿದ್ದಾರೆ.  ಇದಕ್ಕಾಗಿ ಉಳವಿ ಟ್ರಸ್ಟ್‌ ಋಣಿಯಾಗಿದೆ ಎಂದರು. ಜಾತ್ರೆಯ ನಿಮಿತ್ತ , ಉಳವಿ ರಥ ಸಾಗುವ ದಾರಿಯಲ್ಲಿ ಎಲ್‌. ಇ. ಡಿ . ಸ್ಕ್ರೀನ್, ಹಾಕಲಾಗುತ್ತಿದೆ.

           ಈ ಸಲ 100 ಸಿ. ಸಿ. ಟಿವಿ ಕ್ಯಾಮರಾ  ಅಳವಡಿಸಲಾಗುತ್ತಿದೆ ಅಲ್ಲದೆ ಮೈಕ್ ನಲ್ಲಿ ಸ್ವಚ್ಚತೆ ಬಗ್ಗೆ  ಅನೌನ್ಸ ಮಾಡಲಾಗುತ್ತಿದ್ದು,  ಜಿಲ್ಲಾಡಳಿತದ ಸೂಚನೆ ಪಾಲಿಸಲಾಗುತ್ತಿದೆ ಎಂದರು. ಸರಾಯಿ ಮುಕ್ತ   ಜಾತ್ರೆ ಮಾಡಲು ಪ್ರಯತ್ನ :ಉಳವಿ ಟ್ರಸ್ಟನ ಹಿರಿಯ ಸದಸ್ಯ ವಿರೇಶ್ ಕಂಬಳಿ ಮಾತನಾಡಿ ಸರಾಯಿ ಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತ  ಜಾತ್ರೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು. ಈ ಬಗ್ಗೆ ಜಾಗ್ರತೆ ಮೂಡಿಸುತ್ತಿದ್ದೇವೆ. ಸ್ಥಳೀಯರು ಮತ್ತು  ಬೆಳಗಾವಿ , ಬೈಲಹೊಂಗಲದಿಂದ  ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ  ಬರುತ್ತಾರೆ.   ಬೆಳಗಾವಿ, ಧಾರವಾಡ, ಗೋಕರ್ಣ,  ಬೈಲಹೊಂಗಲ ದಿಂದ ಬಸ್ ವ್ಯವಸ್ಥೆ ಇರಲಿದೆ ಎಂದರು. ಎತ್ತುಗಳಿಗೆ ಹಿಂಸೆ ನೀಡದಂತೆ ಮನವಿ ಮಾಡಲಾಗಿದೆ. ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ  ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಂಕರಯ್ಯ ಕಲ್ಮಠ , ಸಿದ್ದನಗೌಡ ಪಾಟೀಲ್ ,ಉಳವಿ  ಗ್ರಾ.ಪಂ .ಅಧ್ಯಕ್ಷ ಮಂಜುನಾಥ ಮೊಕಾಶಿ ಉಪಸ್ಥಿತರಿದ್ದರು. 


ಸುದ್ದಿ ಓದಿ