ಶಾಮನೂರು ಶಿವಶಂಕರ್ಪ ನಿಧನಕ್ಕೆ ನುಡಿ ನಮನ
ಕಂಪ್ಲಿ 15 : ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಮಹಾಂತರ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟೀಯ ಅಧ್ಯಕ್ಷ ಮತ್ತು ಶಾಸಕ ಮಾಜಿ ಸಚಿವ ಡಾವಣಗೇರ ಶಾಮನೂರು ಶಿವಶಂಕರ್ಪ ನಿಧನಕ್ಕೆ ನುಡಿ ನಮನ ಸಲ್ಲಿಸಲಾಯಿತು ಈಸಂದರ್ಭದಲ್ಲಿ ವಾಮದೇವ ಶಿವಚಾರ್ಯ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ತಮ್ಮದೇ ಆದ ಕೊಡುಗೆ ನೀಡುವುದರ ಜೊತೆಗೆ ರಾಜಕಾರಣದಲ್ಲಿ ಅಜಾತ ಶತ್ರು ಎನಿಸಿ ಕೊಂಡರು ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನಗಳಿಗೆ ಹೆಚ್ಚಿನ ಅಧ್ಯತೆ ನೀಡಿದರು ಮಠ ಮಾನ್ಯಗಳಿಗೆ ತಮ್ಮದೇ ಅದ ಅಪಾರ ಕೊಡುಗೆ ಇದೆ ಎಂದರು ಮಸ್ಕಿಯ ರುದ್ರಮುನಿ ಸ್ವಾಮಿ ಸಮಾಜದ ಮುಖಂಡರಾದ ಎಚ್ ಎಮ್ ಮಂಜುನಾಥ ಸ್ವಾಮಿ ಬೇರಿಗಿ ಮಹೇಶಗೌಡ ಜಡಿಮೂರ್ತಿ ಶರಣಬಸವನ ಗೌಡ ಬಸವರಾಜ ಚನ್ನಪಟ್ಟಣ ಬಸವನಗೌಡ ಶಿಕ್ಷಕ ಎಸ್ ರಾಮಪ್ಪ .ಬಸಯ್ಯಸ್ವಾಮಿ ವೀರೇಶಪ್ಪ ಲೋಕೇಶ ಸೇರಿದಂತೆ ಅನೇಕರಿದ್ದರು