ಶತಾಯುಷಿ ಲಗಮಮ್ಮ ಕೇಶಾಪುರ್ಗೆ ಸನ್ಮಾನ
ರಾಣೆಬೆನ್ನೂರು 03: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ 2022ನೇ ಸಾಲಿನ ನಾಡಹಬ್ಬ ಕಾರ್ಯಕ್ರಮಗಳು ಶನಿವಾರದಿಂದ ಆರಂಭಗೊಂಡಿವೆ. ನಾಡು-ನುಡಿ-ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ನಾಡಹಬ್ಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಯಕಯೋಗಿ, ಅವಿರತ ಶ್ರಮಿಕ ವರ್ಗದ ಲಗಮಮ್ಮ ಮಲಕಪ್ಪ ಕೇಶಾಪುರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣ ಕ್ಕೆ ಕಾರಣಕರ್ತ ವಾಸಣ್ಣಯ ಕುಸುಗೂರ್ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಆರುಣ ಕುಮಾರ್ ಪೂಜಾರ್, ವೀರೇಶ ಜಂಬಿಗಿ, ಎ.ಬಿ.ರತ್ನಮ್ಮ, ಎಂ ಎಚ್ ಪಾಟೀಲ, ಎಂ ಎಸ್ ಅರಕೇರಿ, ಡಾ. ಕೆ ಎಚ್ ಮುಕ್ಕಣ್ಣನವರ್, ಭಾರತಿ ಅಳವಂಡಿ, ಡಾ. ಬಸವರಾಜ ಕೇಲಗಾರ, ಬಿ.ಎಸ್. ಸಣ್ಣಗೌಡ್ರ್, ಜಟ್ಟೆಪ್ಪ ಕರೇಗೌಡ್ರ, ಜಿ.ಜಿ. ಹೊಟ್ಟೆಗೌಡ್ರ ಡಾ. ಕಾಂತೇಶ್ ಅಂಬಿಗೇರ್, ಬಿ. ಪಿ. ಶಿಡೇನೂರ್,ಆರ್.ಎಸ್.ನಂದಿಹಳ್ಳಿ, ಜಗದೀಶ್ ಮಳಿಮಠ ಕೆ. ವಿ.ಶ್ರೀನಿವಾಸ್, ಸೇರಿದಂತೆ ಮತ್ತಿತರ ಗಣ್ಯರು, ಸಮಿತಿಯ ಪದಾಧಿಕಾರಿಗಳು, ಉಪಸ್ಥಿತರಿದ್ದರು