ಇಂದು ಕೇಂದ್ರ ಬರಅಧ್ಯಯನ ತಂಡ ಬಳ್ಳಾರಿಗೆ ಭೇಟಿ 222569 ಹೆಕ್ಟೇರ್ ಕೃಷಿ ಪ್ರದೇಶ, 153ಕೋಟಿ ರೂ.ಬೆಳೆಹಾನಿ: ಡಿಸಿ
ಬಳ್ಳಾರಿ17: ಈಗಾಗಲೇ ಬಳ್ಳಾರಿ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, 222569 ಹೆಕ್ಟೇರ್ ಕೃಷಿ ಪ್ರದೇಶ, 6 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಒಟ್ಟು 153 ಕೋಟಿ ರೂ. ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಈ ಕುರಿತು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ಜಿಲ್ಲೆಯಲ್ಲಿ ಹಾನಿಯಾಗಿರುವ ಬೆಳೆ ಪ್ರದೇಶ ಮತ್ತು ಎಷ್ಟು ಕೋಟಿ ರೂ.ಮೊತ್ತದ ಬೆಳೆಹಾನಿಯಾಗಿದೆ ಎಂಬುದರ ಸವಿವರನ್ನು ನ.18ರಂದು ಬಳ್ಳಾರಿಗೆ ಆಗಮಿಸಲಿರುವ ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಲ್ಲಿಸಲಾಗುವುದು ಎಂದರು.
ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.ಜಿಲ್ಲೆಯಲ್ಲಿ 50 ಹಳ್ಳಿಗಳಲ್ಲಿ 61 ಬೊರವೆಲ್ಗಳನ್ನು ಬಾಡಿಗೆಗೆ ಪಡೆದುಕೊಂಡು ಕುಡಿಯುವ ನೀರು ಒದಗಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಟಾಸ್ಕ್ಪೋಸರ್್ನಲ್ಲಿ ಹಣ ಲಭ್ಯವಿದ್ದು, ನೀರಿನ ಸಮಸ್ಯೆ ಬಾಧಿಸದಂತೆ ಕ್ರಮವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ಕೃಷಿ ಜಂಟಿ ನಿದರ್ೇಶಕ ಅಮಿತಾಬ್ ಗೌತಮ್ ನೇತೃತ್ವದ ಅಧಿಕಾರಿಗಳ ಕೇಂದ್ರ ಬರ ಅಧ್ಯಯನ ತಂಡ ಬಳ್ಳಾರಿ ಜಿಲ್ಲೆಗೆ ನ.18ರಂದು ಭೇಟಿ ನೀಡಲಿದ್ದು, ವಿವಿಧೆಡೆ ಭೇಟಿ ನೀಡಿ ಬರದಿಂದ ಹಾನಿಗೀಡಾಗಿರುವ ಪ್ರದೇಶಗಳ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು
ಕೇಂದ್ರ ಬರ ಅಧ್ಯಯನ ತಂಡಕ್ಕೆ ನ.18ರಂದು ಬೆಳಗ್ಗೆ 8.30ಕ್ಕೆ ಸರಕಾರಿ ಪ್ರವಾಸಿ ಮಂದಿರದಲ್ಲಿ ನಮ್ಮ ಜಿಲ್ಲೆಯಲ್ಲಿ ಬರದಿಂದ ಹಾನಿಯಾಗಿರುವ ಬೆಳೆ ಪ್ರದೇಶ ಮತ್ತು ಎಷ್ಟು ಹಣ ಅಗತ್ಯತೆ ಇದೆ ಎಂಬುದು ಸೇರಿದಂತೆ ಬರದಿಂದ ಜಿಲ್ಲೆಯ 7 ತಾಲೂಕುಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಎಂದರು.
ಮೊದಲಿಗೆ ಬಳ್ಳಾರಿಯಿಂದ ಅಪ್ಪೇನಹಳ್ಳಿಯಲ್ಲಿನ ಉದ್ಯೋಗ ಖಾತರಿ ಅಡಿ ಕೈಗೊಂಡಿರುವ ಕೆಲಸ ವೀಕ್ಷಣೆ ಹಾಗೂ ಕಾಮರ್ಿಕರೊಂದಿಗೆ ಚಚರ್ಿಸಲಿದ್ದಾರೆ. ನಂತರ ತಂಡದ ಸದಸ್ಯರು ಮಹಾದೇವಪುರಕ್ಕೆ ತೆರಳಿ ಬರದಿಂದ ಹಾನಿಯಾಗಿರುವ ವಿವಿಧ ಬೆಳೆಗಳ ಪರಿಶೀಲನೆ ಮತ್ತು ರೈತರೊಂದಿಗೆ ಚಚರ್ೆ ನಡೆಸಲಿದ್ದಾರೆ.
ನಂತರ ಕೂಡ್ಲಿಗಿ ತೆರಳಿ,ಅಲ್ಲಿಂದ ಭಟ್ಟನಹಳ್ಳಿಗೆ ತೆರಳಿ ಹಾನಿಗೀಡಾದ ಬೆಳೆಗಳ ವೀಕ್ಷಣೆ ಮತ್ತು ರೈತರೊಂದಿಗೆ ಚಚರ್ೆ ನಡೆಸಲಿದ್ದಾರೆ. ನಂತರ ಅಲಬೂರಗೆ ತೆರಳಿ ಅಲ್ಲಿಯೂ ಹಾನಿಗೀಡಾದ ಬೆಳೆಗಳ ಪರಿಶೀಲಿಸಿದ್ದಾರೆ. ನಂತರ ಅವರು ಹರಪನಳ್ಳಿಗೆ ತೆರಳಲಿದ್ದಾರೆ ಎಂದು ಅವರು ವಿವರಿಸಿದರು.
ಮೇವು ಹೊರಜಿಲ್ಲೆಗೆ ಹೋಗದಂತೆ ತಡೆಯಲು ಚೆಕ್ಪೋಸ್ಟಗಳ ಸ್ಥಾಪನೆ: ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮವಹಿಸಲಾಗುತ್ತಿದ್ದು, ನಮ್ಮಲ್ಲಿನ ಮೇವು ಹೊರಜಿಲ್ಲೆಗಳಿಗೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಚೆಕ್ಪೋಸ್ಟ್ಗಳು ಸ್ಥಾಪಿಸಲು ಸೂಚನೆ ನೀಡಲಾಗಿದೆ ಎಂದು ಡಿಸಿ ರಾಮ್ ಪ್ರಸಾತ್ ಅವರು ವಿವರಿಸಿದರು.
ಕಳೆದ ವರ್ಷ 1 ಸಾವಿರ ಟನ್ ಮೇವನ್ನು ರೈತರು ದಾನವಾಗಿ ನೀಡಿರುವುದನ್ನು ಸ್ಮರಿಸಿದ ಡಿಸಿ ಅವರು, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದೆ ಬಂದು ಮೇವನ್ನು ದಾನವಾಗಿ ನೀಡಿ ಎಂದು ಅವರು ಮನವಿ ಮಾಡಿದರು.
ಮೇವು ದಾನವಾಗಿ ನೀಡದಿದ್ದಲ್ಲಿ ಜಿಲ್ಲಾಡಳಿತ 1 ಮೆಟ್ರಿಕ್ ಟನ್ಗೆ 6 ಸಾವಿರ ರೂ.ಗಳಂತೆ ಖರೀದಿಸಲು ಸಿದ್ಧವಿದೆ ಎಂದರು.
ಭತ್ತ,ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಖರೀದಿ ಕೇಂದ್ರ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ವರದಿ ಬಂದ ನಂತರ ಕ್ರಮವಹಿಸಲಾಗುವುದು ಎಂದರು.