ತಾಳಿಕೋಟಿ

ಸೆ.8ರಂದು ತಿರುಮಲ ತಿಮ್ಮಪ್ಪಯ್ಯ ಜಾತ್ರಾ ಮಹೋತ್ಸವ, ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಸಮಾರಂಭ

ಸೆ.8ರಂದು  ತಿರುಮಲ ತಿಮ್ಮಪ್ಪಯ್ಯ ಜಾತ್ರಾ ಮಹೋತ್ಸವ, ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಸಮಾರಂಭ

ತಾಳಿಕೋಟಿ: ಸಮೀಪದ ಪೀರಾಪುರ ಗ್ರಾಮದಲ್ಲಿ ತಿರುಮಲ ತಿಮ್ಮಪ್ಪಯ್ಯ ಜಾತ್ರಾಮಹೋತ್ಸವ ಹಾಗೂ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಜಯಂತ್ಯೋತ್ಸವ ಸಮಾರಂಭ ಸೆ.08 ರಂದು ನಡೆಯಲಿದೆ.

ಅಂದು ಮುಂ: 10-30ಗಂಟೆಗೆ ಪೀರಾಪೂರದ ತಿರುಮಲ ತಿಮ್ಮಪ್ಪಯ್ಯ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಜಯಂತ್ಯೋತ್ಸವ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಸರೂರ-ಅಗತೀರ್ಥ ಹಾಲುಮತ ಗುರುಪೀಠದ ಪ.ಪೂ. ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಸಾನಿಧ್ಯವನ್ನು ನಾವದಗಿ ಬ್ರಹ್ಮನ್ಮಠದ ಪೂಜ್ಯ ರಾಜೇಂದ್ರ ಒಡೆಯರ ದೇವರು, ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗದೇವರು ವಹಿಸುವರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್ ಆರ್ ಪಾಟೀಲ ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಪಿ ಎಚ್ ಪೂಜಾರ, ಕೆಪಿಸಿಸಿ ಸದಸ್ಯ ಬಿ. ಎಸ್. ಪಾಟೀಲ(ಯಾಳಗಿ) ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡ ಸುಭಾಸ ಛಾಯಾಗೋಳ, ಜೆಡಿಎಸ್ ಧುರೀಣ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಜಿ.ಪಂ.ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿ.ಪಂ. ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ನೇತ್ರತಜ್ನ ಡಾ. ಪ್ರಭುಗೌಡ ಲಿಂಗದಳ್ಳಿ, ಎಬಿಡಿ ಫೌಂಡೇಶನ್ ಅಧ್ಯಕ್ಷ ಆನಂದಗೌಡ ದೊಡಮನಿ, ಭೈರಿ ಫೌಂಡೇಶನ್ ಅಧ್ಯಕ್ಷ ಡಾ. ನಂದಕುಮಾರ ಬೈರಿ, ಹೂ.ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಬಾಳಾಸಾಹೇಬಗೌಡ ಪಾಟೀಲ, ದೇ. ಹಿಪ್ಪರಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಶೀರಸೇಠ ಬೇಪಾರಿ ಆಗಮಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾದ ಸೇವೆಸಲ್ಲಿಸಿರುವ ಮಹನೀಯರಿಗೆ ವಿಶೇಷ ಸನ್ಮಾನ ಜರುಗಲಿದ್ದು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕ ಸುರೇಶ ಬಾಬುಗೌಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ