ಹೊರಟ್ಟಿಗೆ ಈ ಭಾರಿ ಸೋಲು ಖಚಿತ: ಸೋಮಣ್ಣ
ಲೋಕದರ್ಶನ ವರದಿ
ಶಿಗ್ಗಾವಿ 12: ಶಿಕ್ಷಕರು ತಿರಸ್ಕಾರ ಮಾಡಿದ ಪಕ್ಷಕ್ಕೆ ಸೇರಿಕೊಂಡಿರುವ ಹೊರಟ್ಟಿ ಅವರಿಗೆ ಈ ಭಾರಿ ಸೋಲು ಖಚಿತ, ಇದರಿಂದ ಹಾನಗಲ್ ಕ್ಷೇತ್ರದಂತೆ ಶಿಕ್ಷಕರ ಮತಕ್ಷೇತ್ರದಲ್ಲಿಯೂ ಸಿಎಂಗೆ ಮತ್ತೊಮ್ಮೆ ಮುಗಭಂಗವಾಗುವದರಲ್ಲಿ ಸಂಸಯವಿಲ್ಲ ಎಂದು ಮಾಜಿ ವಿಪ ಸದಸ್ಯ ಸೋಮಣ್ಣ ಬೇವಿನಮರದ ಭವಿಷ್ಯ ನುಡಿದರು.
ಪಟ್ಟಣದ ಪತ್ರಕರ್ತರ ಕಾಯರ್ಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊರಟ್ಟಿ ಭ್ರಷ್ಟಾಚಾರದ ಬಂಡ ಸರ್ಕಾರ ಬಿಜೆಪಿಗೆ ಸೇರಿ ಭ್ರಷ್ಟಾಚಾರಿಗಳಾಗಿದ್ದಾರೆ, ಈಗಾಗಲೇ ವಿವಿಧ ಚುನಾವಣೆಗಳಾದ ಹಾನಗಲ್, ಬಂಕಾಪೂರ ಚುನಾವಣೆಯಲ್ಲಿ ಬಿಜೆಪಿಯವರನ್ನು ಜನತೆ ತಿರಸ್ಕಾರ ಮಾಡಿದ್ದಾರೆ, ಶಿಕ್ಷಕರ ಮತ ಕ್ಷೇತ್ರದಲ್ಲಿಯೂ ತಿರಸ್ಕಾರ ಮಾಡುತ್ತಾರೆ, ನಮ್ಮ ಕಾಂಗ್ರೇಸ್ ಅಭ್ಯಥರ್ಿ ಬಸವರಾಜ ಗುರಿಕಾರ ಅವರು ರಾಜ್ಯಮಟ್ಟದ ಶಿಕ್ಷಕರ ಕೆಲಸ ಮಾಡಿದ್ದಾರೆ ಎಂದರು.
ಗುರಿಕಾರ ಅವರ ಬಗ್ಗೆ ಶಿಕ್ಷಕರಲ್ಲಿ ಬಹಳ ಒಲವಿದೆ, ಗೆಲವು ಖಚಿತವಾಗಿದ್ದು ಹೊರಟ್ಟಯವರು ಜೆಡಿಎಸ್ ಅಭ್ಯಥರ್ಿ ಶ್ರೀಶೈಲ್ ಗಡದಿನ್ನಿಯವರನ್ನು ಹಿಂದೆ ಸರಿಸಲಿ ಅವರ ಹ್ಯಾಂಡಬಿಲ್ ಓದಲಿ ಎಂದ ಸೋಮಣ್ಣ ಬಿಜೆಪಿಯವರು ಲಿಂಬಿಕಾಯಿಯವರಿಗೆ ಮೋಸ ಮಾಡಿ ಹೊರಟ್ಟಿಯವರಿಗೆ ಟಿಕೆಟ್ ನೀಡಿ, ನಿಷ್ಟಾವಂತ ಅಭ್ಯಥರ್ಿಯ ಬಾಯಿ ಮುಚ್ಚಿಸಿದ್ದಾರೆ, ಬಿಜೆಪಿ ಸುಳ್ಳು ಹೇಳುವದರಲ್ಲಿ ನಿಸ್ಸಿಮರು, ಇಲ್ಲಿ ಯಡಿಯುರಪ್ಪ, ಬೊಮ್ಮಾಯಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅಭ್ಯಥರ್ಿ ಗೆದ್ದರೆ ಅವರ ಮೊದಲ ಹೋರಾಟವೇ ರಾಜ್ಯದ ಶಿಕ್ಷಕರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸುವುದೇ ಮೊದಲ ಹೆಜ್ಜೆ ಎಂದರು, 58 ವರ್ಷ ನಿವೃತ್ತಿ ವೇತನ 60 ವರ್ಷವರೆಗೆ ಮಾಡಿದ್ದಾರೆ, ಶಿಕ್ಷಕರ ಮನೆ ಬಾಡಿಗೆ ಹೆಚ್ಚಿಸಿದ್ದಾರೆ, ಹತ್ತು ಹಲವಾರು ಕೆಲಸಗಳಿಗಾಗಿ ಶಿಕ್ಷಕರಿಗಾಗಿ ಶಿಕ್ಷಣಕ್ಕೋಷ್ಕರ ಶಿಕ್ಷಣಕ್ಕಾಗಿ ದುಡಿಯುತ್ತಿದ್ದಾರೆ, ದೈಹಿಕ, ಸಂಗೀತ, ಚಿತ್ರಕಲಾ ವೃತ್ತಿ ಶಿಕ್ಷಕರಿಗೆ ಬಡ್ತಿ ವೇತನ ಕೋಡಿಸಿದ್ದಾರೆ, ಹೊರಟ್ಟಿಯವರು 42 ವರ್ಷ ಸೇವೆ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ ಆದರೆ ಶಿಕ್ಷಕರ ಸಮಸ್ಯೆಗಳು ಹಾಗೆಯೇ ಇವೆ ಎಂದರು.
ಗುರಿಕಾರ ಅವರು ಶಿಕ್ಷಕರ ಸದನ ಕಟ್ಟಿಸಿದ್ದಾರೆ, ಶಿಕ್ಷಕರಿಗೆ ವಾಷರ್ಿಕ ಬಡ್ತಿಯಲ್ಲಿ ಸಮಾನ ವೇತನ ಕೋಡಿಸಿದ್ದಾರೆ, ಐದನೆ ವೇತನ ಪ್ರೌಢ ಮತ್ತು ಪ್ರಾಥಮಿಕಕ್ಕೆ ಬರುವಂತೆ ಮಾಡಿದ್ದಾರೆ, ಕೋಟಿಗಟ್ಟಲೇ ಅನುಧಾನ ಬಿಡುಗಡೆ ಮಾಡಿಸಿದ್ದಾರೆ, ಸಿದ್ದರಾಮಯ್ಯನವರು ಸಿಎಂ ಇದ್ದಾಗ ಗುರುಭವನಗಳನ್ನು ಶಿಕ್ಷಕರ ತಾಬಾ ಮಾಡಿದ ಕೀತರ್ಿ ಗುರಿಕಾರ ಅವರಿಗೆ ಸಲ್ಲಿಸುತ್ತದೆ, ಈ ಎಲ್ಲ ಕಾರ್ಯಗಳನ್ನು ಶಿಕ್ಷಕರು ಗಮನಿಸಿದ್ದಾರೆ, ಗುರಿಕಾರ ಅವರ ಗೆಲುವು ಖಚಿತ, ಹೊರಟ್ಟಿಯವರ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದರು.
ಎಂ ಎನ್ ವೆಂಕೋಜಿ, ಗುರುನಗೌಡ ಪಾಟೀಲ, ಸುದೀರ ಲಮಾಣಿ, ರಾಜು ಕಮ್ಮಾರ, ಮಾಲತೇಶ ಸಾಲಿ, ಸಿ ಜಿ ಮಾನೋಜಿ, ವಿ ವಿ ಪಾಟೀಲ, ಚನ್ನು ದೇಸಾಯಿ ಸೇರಿದಂತೆ ಕಾಂಗ್ರೇಸ್ ಮುಖಂಡರು ಇದ್ದರು