ಜಿಲ್ಲೆ ಪ್ಲಾಸ್ಟಿಕ್ ಮುಕ್ತ ಮಾಡಲು ಚಿಂತನೆ: ತುಷಾರಮಣಿ

ಜಿಲ್ಲೆ ಪ್ಲಾಸ್ಟಿಕ್ ಮುಕ್ತ ಮಾಡಲು ಚಿಂತನೆ: ತುಷಾರಮಣಿ

ಬಳ್ಳಾರಿ 01: ನಗರವನ್ನು ಜಾಲಿಗಿಡದಿಂದ ಪ್ಲಾಸ್ಟಿಕ್ ಮುಕ್ತ ಸುಂದರ ನಗರವನ್ನಾಗಿ ಮಾಡಲು ನನ್ನ ಪ್ರಮೂಖ ಆದ್ಯತೆ ಎಂದು ಪಾಲಿಕೆಯ ನೂತನ ಆಯುಕ್ತೆ ಎಂ.ವಿ.ತುಷಾರಮಣಿ ತಿಳಿಸಿದರು. ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಬಳ್ಳಾರಿಗೆ ಬಂದ ತಕ್ಷಣ ನನ್ನ ಕಣ್ಣಿಗೆ ಕಂಡದ್ದು ರಸ್ತೆಗಳ ಪಕ್ಕಗಳಲ್ಲಿ ಮತ್ತು ಖಾಲಿ ನಿವೇಷನಗಳಲ್ಲಿನ ಬೆಳೆದು ನಿಂತಿರುವ ಜಾಲಿಗಿಡಗಳು ನೋಡಿ ಬಹಳ ಆಶ್ಚರ್ಯವಾಯಿತು. ಸುಂದರ ನಗರವನ್ನಾಗಿ ಮಾಡಬೇಕೆಂದರೆ ಮೊದಲು ಇಂತವುದಕ್ಕೆ ಆಸ್ಪದ ಇರಬಾರದು. ಅದಕ್ಕಾಗಿ ಈ ಕುರಿತು ಈಗಾಗಲೇ ಸಂಸದ ಉಗ್ರಪ್ಪ ಅವರ ಜೊತೆ ಮಾತುಕತೆ ಮಾಡಿದ್ದು ಜಾಲಿಗಿಡಗಳ ತೆರುವಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಿದ್ದೇನೆ ಎಂದು ಹೇಳಿದರು. ಖಾಲಿ ನಿವೇಷನಗಳಲ್ಲಿ ಜಾಲಿಗಿಡಗಳನ್ನು ತೆರುವುಗೊಳಿಸಲು ನಿವೇಷನದ ಮಾಲಿಕರಿಗೆ ಸೂಚಿಸಿದ್ದೇನೆ ಎಂದರು. 

ಪ್ಲಾಸ್ಟಿಕ್ ಮುಕ್ತ ಬಳ್ಳಾರಿ: 

ಮಖ್ಯವಾಗಿ ಈಗಾಗಲೇ ಸುಪ್ರಿಂಕೋಟರ್್ ನಿಧರ್ೇಶನದಂತೆ ಪ್ಲಾಸ್ಟಿಕ್ ಕೈಚೀಲ, ಕಪ್ಪು, ತಟ್ಟೆ, ತರ್ಮಾಕೊಲ್  ನಿಂದ ತಯಾರಾದ ಕಪ್ಪು ಮತ್ತು ಇತರ ಸಾಮಗ್ರಿಗಳನ್ನು ಬಳಕೆ ನಿಷೇದ ಮಾಡಿದೆ. ಆದರೂ ನಗರದಲ್ಲಿ ಯಥೆಚ್ಚವಾಗಿ ಬಳಕೆಯಾಗುತ್ತಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಪರಿಕರಗಳನ್ನು ಮಾರಟ ಮತ್ತು ಬಳಕೆ ಮಾಡುವವರ ಮೇಲೆ ದಾಳಿ ನಡೆಸಿ ಅತ್ಯದಿಕ ದಂಡವನ್ನು ವಿದಿಸಿ ಲೈಸನ್ಸ್ ರದ್ದು ಮಾಡುಲಿದೆ. ಇದಕ್ಕೆ ಯಾರೇ ಅಡ್ಡಿಬಂದರು ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಜಾಗೃತಿ ಮಾಡಲಿದ್ದೇನೆ ಎಂದರು. ಯಾವಾಗಿನಿಂದ ಈ ದಾಳಿ ನಡೆಯುತ್ತದೆ ಎಂದು ಕೇಳಿದ ಪ್ರಶ್ನೆಗೆ ನಾನು ದಾಳಿ ಮಾಡುವುದನ್ನು ಪತ್ರಿಕೆಗಳ ಮುಂದೆ ತಿಳಿಸದೇ ದಾಳಿ ಮಾಡಿದ ಮೇಲೆ ನಿಮ್ಮನ್ನು ಅಲ್ಲಿಗೆ ಕರೆಸುತ್ತೇನೆ ಎಂದು ವಿವರಿಸಿದರು. 

ಒಂದು ಆಸ್ತಿಗೆ ಒಂದು ಪೈಲ್:

ಒಂದು ಆಸ್ತಿಗೆ ಒಂದು ಪೈಲ್ ಇರಬೇಕು. ಆದರೆ ಇಲ್ಲಿ ಒಂದೇ ಪುಸ್ತಕದಲ್ಲಿ ಅನೇಕ ಆಸ್ತಿಗಳು ದಾಖಲು ಇರುವುದರಿಂದ ಜನರಿಗೂ ಮತ್ತು ಆಡಳಿತಕ್ಕೆ ತಕ್ಷಣ ಮಾಹಿತಿ ಲಭ್ಯವಾಗುತ್ತಿಲ್ಲ. ಅದಕ್ಕಾಗಿ ಒಂದು ಆಸ್ತಿಗೆ ಒಂದು ಪೈಲ್ ಮಾಡುವ ವ್ಯೆವೆಸ್ಥೆ ಇದೆ. ಅಂತೆಯೇ ನಗರದಲ್ಲಿ ನೀರಿನ ಸರಬರಾಜಿನ ಬಗ್ಗೆ ವ್ಯವೆಸ್ಥೆಯಲ್ಲಿ ಸ್ವಲ್ಪ ಅಡೆ ತಡೆಗಳು ಇರುವುದು ತಿಳಿದು ಬಂದಿದ್ದು ಅದನ್ನು ಸರಿಯಾದ ರೀತಿಯಲ್ಲಿ ನಿವರ್ಾಹಣೆ ಮಾಡಲು ಒಂದು ಸಭೆಯನ್ನು ಕರೆಯಲಿದ್ದೇನೆ ಎಂದರು. ಎಲ್ಲರ ಸಹಕಾರ ಅಗತ್ಯವಿದ್ದರೆ ಪ್ಲಾಸ್ಟಿಕ್ ಮುಕ್ತ ಬಳ್ಳಾರಿಯನ್ನು ಮಾಡಲು ನನ್ನ ಮುಖ್ಯ ಆದ್ಯತೆಯಾಗಿದೆ. ನಾನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕಮಂಗಳೂರಿನಲ್ಲಿಯೂ ಬಳ್ಳಾರಿ ತರಹವೇ ಇದ್ದ ಪ್ಲಾಸ್ಟಿಕ್ ಬಳಕೆಯನ್ನು ಈಗ ಸಂಪೂರ್ಣ ನಿಷೇದ ಮಾಡಿದ್ದೇನೆ ಎಂದು ವಿವರಿಸಿದರು.


ಸುದ್ದಿ ಓದಿ