ವಾಯುಪಡೆಯ ಸಾಹಸಕ್ಕೆ ಬಿಜೆಪಿಯಿಂದ ವಿಜಯೋತ್ಸವ
ಬಳ್ಳಾರಿ 27: ಪಾಕಿಸ್ತಾನದಲ್ಲಿನ ಉಗ್ರರ ನೆಲವನ್ನು ದ್ವಂಸಮಾಡಿದ ಭಾರತೀಯ ವಾಯುಪಡೆಯ ಸಾಹಸವನ್ನು ಶ್ಲಾಘಿಸಿ ಬಿಜೆಪಿ ಮುಖಂಡರು ಮಂಗಳವಾರ ರಾತ್ರಿ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ರಾಷ್ಟ್ರದ್ವಜ ಇಡಿದು ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು. ನೆರೆದ ಜನತೆಗೆ ಸಿಹಿ ತಿನ್ನಿಸಿ ಭಾರತಮಾತಾ ಕಿ ಜೈ ಎಂದು ಘೋಷಣೆ ಕೂಗಿ ಹರ್ಷವ್ಯೆಕ್ತ ಪಡಿಸಿದರು. ಇದರಲ್ಲಿ ಭಾಗವಹಿಸಿದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಉಗ್ರರನ್ನು ಬೆಂಬಲಿಸಿದ ಪಾಕಿಸ್ತಾನಕ್ಕೆ ಭಾರತೀಯ ಯೋದರು ತಕ್ಕಪಾಟ ಕಲಿಸಿದ್ದಾರೆ ಇನ್ನಾದರೂ ಪಾಕಿಸ್ತಾನ ಒಳ್ಳೆಯ ಪಾಟ ಕಲಿಯಬೇಕು.
ಪ್ರಧಾನಿ ನರೇಂದ್ರಮೋದಿ ಅವರು ಸರಿಯಾದ ಸಮಯದಲ್ಲಿ ಸರಿಯಾದ ನಿಧರ್ಾರವನ್ನು ಕೈಗೊಂಡಿದ್ದಾರೆ. ಸಿ.ಆರ್.ಪಿ.ಎಫ್. ಯೋದರ ಹತ್ಯಗೆ ಸೇಡು ತಿರಿಸಿಕೊಳ್ಳುವ ಮೂಲಕ ದೇಶಭಕ್ತಿಯನ್ನು ಸಾಬೀತು ಪಡಿಸಿದ್ದಾರೆ ಎಂದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ವಿದಾನಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ, ಮುಖಂಡರುಗಳಾದ ಗುರುಲಿಂಗನಗೌಡ, ರಾಮಲಿಂಗಪ್ಪ, ಬಿ.ಶಿವಕುಮಾರ ಯರಿಸ್ವಾಮಿ, ಪಾಟಿಲ್, ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಅಶೋಕ, ಸೇರಿದಂತೆ ನೂರಾರು ಜನ ಕಾರ್ಯಕರ್ತರು, ಸಾರ್ವಜನಿಕರು ಈ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.