ಉದ್ಯಮಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ- ಜಾರಿ ಮಾಡಬೇಕು : ಲಕ್ಷ್ಮಣ ಹಂದ್ರಾಳ
ವಿಜಯಪುರ 05 : ಸಿಐಟಿಯು ರಾಜ್ಯ ಸಮಿತಿಯ ಕರೆಯ ಮೇರೆಗೆ ಕಾರ್ಮಿಕ ಇಲಾಖೆಯ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಉಮಾಶ್ರೀ ಕೋಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಿಐಟಿಯು ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಿಐಟಿಯು ನ ಜಿಲ್ಲಾ ಸಂಚಾಲಕರಾದ ಲಕ್ಷ್ಮಣ ಹಂದ್ರಾಳರವರು ಮಾತನಾಡಿ ಉದ್ಯಮಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ಕರಡು ಅದಿಸೂಚನೆಯನ್ನ್ ಪ್ರಕಟಿಸಿದೆ. ಇದರಲ್ಲಿ ಕಾರ್ಮಿಕ ಸಂಘಟನೆಗಳು ಮಾಲೀಕರ ಸಂಘಟನೆಗಳು ಅಕ್ಷೇಪಣೆಗಳನ್ನು ಸಲಹೆಗಳನ್ನು ನೀಡಿರುತ್ತಾರೆ, ಇದರ ಭಾಗವಾಗಿ ಎರಡು ಸುತ್ತು ಚರ್ಚೆ ನಡೆದಿರುತ್ತದೆ, ಅದೇ ರೀತಿ ಕನಿಷ್ಠ ಕೂಲಿಯನ್ನು ಜಾರಿಗೆ ಮಾಡಬೇಕೆಂದರು.
ಸಹ ಸಂಚಾಲಕರಾದ ಸುರೇಶ್ ಜಿಬಿಯವರು ಮಾತನಾಡಿ ಕನಿಷ್ಠ ವೇತನ ಪರಿಷ್ಕರಣೆಯಾಗಿರುವುದಿಲ್ಲ, ಕಾರ್ಮಿಕರ ಬೇಡಿಕೆಯ ಸಲುವಾಗಿ ದೇಶಾದ್ಯಂತ ಹೋರಾಟ ಮಾಡುತ್ತಾರೆ, ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಸರ್ಕಾರಗಳು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತೇವೆ, ಇವುಗಳನ್ನು ಜಾರಿಯಾಗದಂತೆ ತಡೆಯಬೇಕೆಂದರು.
ಕಟ್ಟಡ ಕಾರ್ಮಿಕ ಸಂಘಟನೆಯ ಸಂಚಾಲಕರಾದ ಈರಣ್ಣ ಬೆಳ್ಳುಂಡಗಿ ಮಾತನಾಡಿ ಕಟ್ಟಡ ಕಾರ್ಮಿಕ ಕಾನೂನು 1996 ಹಾಗೂ ಸೇಸ್ ಕಾನೂನುಗಳನ್ನು ಮರು ಸ್ಥಾಪಿಸಿ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಬೇಕು, ದೇಶದಲ್ಲಿ ಏಳು ಕೋಟಿಗಿಂತ ಅಧಿಕ ಕಟ್ಟಡ ಕಾರ್ಮಿಕರಿದ್ದಾರೆ, ನಾಲ್ಕು ಲೇಬರ್ ಕೋಡ್ ಗಳಿಂದ ಬಿಒಸಿಡಬ್ಲ್ಯೂ ಅಡಿಯಲ್ಲಿ ಕಾರ್ಮಿಕರು ಪಡೆಯುತ್ತಿದ್ದ ರಕ್ಷಣೆ ಹಾಗೂ ಸೌಲಭ್ಯಗಳ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರಲಿವೆ. ಎಲ್ಲ ಸಂಘಟಿತ ಅಸಂಘಟಿತ ಕಾರ್ಮಿಕರಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಿನ ಇವತ್ತಿನ ಗ್ರಾಹಕ ಬೆಲೆ ಸೂಚ್ಯಂಕ, ಮನೆ ಬಾಡಿಗೆ ಹಾಗೂ ಇತರೆ ಖರ್ಚುಗಳ ಆಧಾರದಲ್ಲಿ ರಾಜ್ಯದ ಕಾರ್ಮಿಕ ಸಂಘಟನೆಗಳು ನೀಡಿರುವ ಸಲಹೆಗಳನ್ನು ಪರಿಗಣಿಸಬೇಕೆಂದರು.
ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಾಲ್ ಅಹಮದ್ ಶೇಕ್ ಮಾತನಾಡಿ ಕಾರ್ಮಿಕರು ಸ್ವಾವಲಂಬಿಯಾಗಬೇಕೆಂದರೆ ಕನಿಷ್ಠ ವೇತನ ಜಾರಿ ಆಗಬೇಕು, ಕಾರ್ಮಿಕರೆಲ್ಲರೂ ಒಕ್ಕಟ್ಟಿನಿಂದ ಹೋರಾಟ ಮಾಡಬೇಕೆಂದರು, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುಮಂಗಲ ಆನಂದ್ ಶೆಟ್ಟಿ ಮಾತನಾಡಿ ದಿನಾಂಕ 18/02/2026 ರ ರಿಟ್ ಅರ್ಜಿ ಸಂಖ್ಯೆ 3784/2026 ರ ಪ್ರಕರಣದಲ್ಲಿ ತೀರ್ಪನನು ನೀಡಿದೆ ಇದರ ಆಧಾರದಲ್ಲಿ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಕೂಡಲೇ ಘೋಷಣೆ ಮಾಡಿ ಕಾರ್ಮಿಕರ ಹಿತ ಕಾಪಾಡಬೇಕೆಂದರು.
ಕಟ್ಟಡ ಕಾರ್ಮಿಕರ ಸಹ ಸಂಚಾಲಕರಾದ ಸಿದ್ದು ಅಂಗಡಿ, ಸಂಗಪ್ಪ ಕಪಾಲಿ, ಸುರೇಖಾ ವಾಗ್ಮೊರೆ ಮಹಾನಂದ ಚೌಹಾಣ್, ಸೈನಜ್ ಮುಲ್ಲಾ, ರೇಣುಕಾ ಸುಣಗಾರ್, ಮಹಾದೇವಿ ಸಾಶೆಟ್ಟಿ, ಮೋದಿನ್ ಸಾಬ್ ಮಮದಾಪುರ್, ಪರಶುರಾಮ್ ಬೆನಕಟ್ಟಿ, ಶಿವಾನಂದ ಅಣಿಮಿ ಮುಂತಾದವರು ಭಾಗವಹಿಸಿದ್ದರು.