ಮಕ್ಕಳಿಗೆ ಅಕ್ಷರ ಕಲಿಸುವುದರಲ್ಲಿರುವ ತೃಪ್ತಿ ಬೇರೆಲ್ಲೂ ಸಿಗದು: ಭೋವಿ
ಲೋಕದರ್ಶನ ವರದಿ
ಯರಗಟ್ಟಿ 10: ಮಕ್ಕಳಿಗೆ ಅಕ್ಷರ ಕಲಿಸುವುದರಲ್ಲಿ ಇರುವ ತೃಪ್ತಿ ಬೇರಲ್ಲೂ ಸಿಗುವುದಿಲ್ಲ. ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದು ಎಂದು ಮುಖ್ಯ ಶಿಕ್ಷಕ ಡಿ. ಡಿ. ಭೋವಿ ಹೇಳಿದರು.
ಸಮೀಪದ ಶ್ರೀರಂಗಪೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾ ಭವನದಲ್ಲಿ ಶನಿವಾರ ತಲ್ಲೂರ ಕ್ಲಸ್ಟರ ವತಿಯಿಂದ ಹಮ್ಮಿಕೊಂಡಿದ್ದ ವಯೋನಿವೃತ್ತಿ ಮುಖ್ಯ ಶಿಕ್ಷಕ ಎಮ್.ಎಸ್.ಹರಿಜನ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಮಕ್ಕಳ ಶಿಕ್ಷಣದ ಕಡೆಗೆ ಪಾಲಕರು ಹೆಚ್ಚು ಒತ್ತು ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಮ್ .ಎಸ್. ಹರಿಜನ, ಶಿಕ್ಷಕರ ಮಾತುಗಳು ವಿದ್ಯಾಥರ್ಿಗಳಿಗೆ ವೇದವಾಕ್ಯವಾಗಿವೆ. ಹೀಗಾಗಿ ಶಿಕ್ಷಕರು ಆಧ್ಯಾತ್ಮಿಕ ಮನೋಭಾವ ದಿಂದ ವಿದ್ಯಾಥರ್ಿಗಳಿಗೆ ಪಾಠ ಮಾಡಿದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೂಮ್ಮುತ್ತಾರೆ ಎಂದರು.
ಯರಗಟ್ಟಿ ಕ್ಲಸ್ಟರದಿಂದ ತಲ್ಲೂರ ಕ್ಲಸ್ಟರನ ಆಲದಕಟ್ಟಿ ಪ್ರಾಥಮಿಕ ಶಾಲೆಗೆ ದೈಹಿಕ ಶಿಕ್ಷಕರಾಗಿ ಆಗಮಿಸಿದ ಪಿ.ಡಿ.ಶಿವಪೂಜಿ ಅವರನ್ನು ಸನ್ಮಾನಿಸಲಾಯಿತು.
ಸಿಆರ್ಪಿ ಗುರುದೇವಿ ಮಲಕನ್ನವರ ಅಧ್ಯಕ್ಷತೆ ವಹಿಸಿದ್ದರು, ಕೆಎಸ್ಪಿಟಿಎ ಸವದತ್ತಿ ನಿರ್ದೇಶಕ ಎಸ್.ಎನ್.ಪಾಶ್ವಾಪೂರ, ಮುಖ್ಯ ಶಿಕ್ಷಕ ಎಸ.ಎಸ್.ಅಣ್ಣಿಗೇರಿ, ಎಸ್.ಬಿ.ಜಂಗಿ, ಎನ್.ಎಫ್.ಪಾವಡೆಪ್ಪನವರ, ವಿ.ಎಸ್.ಬೀರಾದರಪಾಟೀಲ, ವಾಯ್.ಪಿ.ಉಪ್ಪಾರ, ಪಿ.ಜಿ.ಸುಣಗಾರ, ಎಚ್.ವಾಯ್.ಮಾದರ, ಎಸ್.ಎಚ್.ಪಚ್ಚಿನವರ, ಸಿ.ಆರ್.ಕಮ್ಮಾರ, ಪಿ.ಎಸ್.ವಿಜಪೂರ, ಎಸ್.ಎಮ್.ಹಂಜಿ, ಎಸ್.ಎಮ್.ಮಾಳೈನವರ ಸೇರಿದಂತೆ ಕ್ಲಸ್ಟರಿನ ಶಿಕ್ಷಕರು ಇದ್ದರು. ಶಿಕ್ಷಕ ಆನಂದ ಲಕ್ಕನ್ನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು