ಹೂವಿನ ಹಡಗಲಿ

ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ

ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ


ಹೂವಿನಹಡಗಲಿ 3:    ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ. ಎದೆಗೆ ಬಿದ್ದ ಅಕ್ಷರವಾಗಬೇಕಾಗಿದೆ. ಸಹಿಷ್ಣುತೆಯ ಬೆಳಕು ಬೀರಬೇಕಿದೆ ಎಂಬ ಕವನವಾಚಿಸುವುದರ ಮೂಲಕ ಕವಿ,ರಂಗ ನಿರ್ದೇಶಕ ಅಜಯ್ .ಚ ಹುಗಲೂರು ರಾಜ್ಯೋತ್ಸವ   ಕವಿಗೋಷ್ಠಿಗೆ ಚಾಲನೆ ನೀಡಿದರು. ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ’ರಾಜ್ಯೋತ್ಸವ’ ಕವಿಗೋಷ್ಠಿಯಲ್ಲಿ ಕವನ ವಾಚಿಸುವುದರ ಮೂಲಕ ವರ್ತಮಾನದ ಕನ್ನಡದ ಮನಸ್ಸುಗಳು ಸಾಗಬೇಕಿರುವ ಮಾರ್ಗವನ್ನು ಸೂಚಿಸಿದರು. ಕವಿಗೋಷ್ಠಿಯಲ್ಲಿ  ಟಿ.ಎಂ.ನಾಗಭೂಷಣ ’ಅವ್ವ’, ಎಂ.ಎಂ.ಗೌರಮ್ಮ ’ತಾಯಿ ಭುವನೇಶ್ವರಿ’, ಸಹದೇವಪ್ಪ ನಿಗದಿ ’ಕಟ್ಟೋಣ ಸಾಮರಸ್ಯದ ನಾಡು’,ನಾಗರಾಜ್ ಮಲ್ಕಿ ಒಡೆಯರ್ ’ಕನ್ನಡನಾಡು’, ಎಲ್‌.ಖಾದರ್ ಬಾಷಾ ’ವಿಶ್ವಪಥವಾಗಲಿ ಕನ್ನಡ’,ಡಾ.ಅನಿಲ್ ಕುಮಾರ್ ’ಸಾಮಾನ್ಯ ಕನ್ನಡಿಗ’, ಎಚ್‌.ಎಮ್‌. ಕೊಟ್ರಯ್ಯ ’ಅಭಿಮಾನವಿರಲಿ’, ಹೆಚ್‌.ಗಿರಿರಾಜ ’ಅಭಿಮಾನದ ಭೈರ​‍್ಪ’, ಸಿ.ಎನ್‌. ಸೋಮೇಶಪ್ಪ ’ಕನ್ನಡ ಕವಿ ಪರಂಪರೆ’ ಯು.ರೇಣುಕಾ ’ಬಂಧನ’ಹಾಗೂ ಎ.ಅಶೋಕ ’ಉತ್ಸವ- ರಾಜ್ಯೋತ್ಸವ’ ಕವನಗಳನ್ನು ವಾಚಿಸಿ ಕನ್ನಡ ನಾಡು ನುಡಿ ಹಿರಿಮೆ, ಗರಿಮೆಗಳನ್ನ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸಿ  ಸಹೃದಯರಲ್ಲಿ ಅಭಿಮಾನದ ಭಾವ ಸ್ಪುರಿಸಿದರು. 


ಸುದ್ದಿ ಓದಿ