ಸಂಗೀತ ಎಂಥ ಕಠೋರ ಮನುಷ್ಯನನ್ನು ಮೃದುಗೊಳಿಸುತ್ತದೆ: ತರ್ಲಗಟ್ಟ
ಧಾರವಾಡ 18: ಸಂಗೀತ ಎಂಥ ಕಠೋರ ಮನಸ್ಸುಳ್ಳ ಮನುಷ್ಯನನ್ನು ಮೃದುಗೊಳಿಸುತ್ತದೆ. ಅದು ಯಾವಾಗಲೂ ಶಾಂತಿಯನ್ನು ಸೂಸುತ್ತಲೇ ನೆಮ್ಮದಿಯ ಸಮಾಜ ಇರುವಂತೆ ಹಂಬಲಿಸುತ್ತದೆ. ಸಂಗೀತಲೋಕದಲ್ಲಿ ಸಾಧನೆಗೈದವರು ಸಮಾಜದ ಅಭಿವೃದ್ಧಿಗೆ ನಿಜವಾದ ಕೊಡುಗೆಯನ್ನು ನೀಡಿದವರು ಎಂದು ಕನರ್ಾಟಕ ವಿಶ್ವವಿದ್ಯಾಲಯ ಲಲಿತ ಕಲಾ ಮತ್ತು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಲ್ಲಿಕಾಜರ್ುನ್ ಎಸ್. ತರ್ಲಗಟ್ಟ ಹೇಳಿದರು.
ಅವರು ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿ ಹಮ್ಮಿಕೊಂಡಿದ್ದ ಪಂ. ರವಿ ಕೂಡ್ಲಿಗಿಯವರ 4ನೇ ಪುಣ್ಯಸ್ಮರಣೆಯ ಅಂಗವಾಗಿ ಭಾವಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಜಗತ್ತೇ ಸಂಗೀತಮಯವಾಗಿರುವಾಗ ಪ್ರತಿಯೊಬ್ಬನೂ ಲಯಬದ್ಧವಾಗಿ ಜೀವನದ ಪ್ರತಿ ಹಂತದಲ್ಲಿ ನಡೆದುಕೊಳ್ಳುತ್ತಾನೆ. ಮನುಷ್ಯನ ಜೀವನದಲ್ಲಿ ಲಯ ತಪ್ಪಿದರೆ ಅವನು ದಾರಿತಪ್ಪಿದನು ಎಂದೆನಿಸಿಕೊಳ್ಳುವನು. ಸಂಗೀತ ಕ್ಷೇತ್ರದಲ್ಲಿ ಇಂದಿನ ಕಾಲಘಟ್ಟಕ್ಕೆ ಪೂರಕವಾಗಿ ಅಧ್ಯಯನ ಕೃತಿಗಳು ಪ್ರಕಟವಾಗುವುದು ವಿರಳ. ಆದರೆ ಡಾ. ಎ.ಎಲ್. ದೇಸಾಯಿ ತಬಲಾ ವಾದ್ಯ ನುಡಿಸುವ ಸಂಬಂಧವಾಗಿ ಸಂಶೋಧನಾತ್ಮಕ ಲೇಖನಗಳನ್ನು ಬರೆದು ಅವುಗಳನ್ನು ಪುಸ್ತಕರೂಪದಲ್ಲಿ ನೀಡುವ ಮೂಲಕ ಸಂಗೀತ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು. ದೇಸಾಯಿವರ ಮೂರನೇ ಕೃತಿ `ತಾಲ ತರಂಗ' ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಇನ್ನೊಬ್ಬ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕಲಾವಿದರಿಗೆ ಸಾಹಿತ್ಯ ಪರಿಷತ್ತು ಮುಕ್ತವಾಗಿ ಸಹಾಯ-ಸಹಕಾರ ನೀಡುತ್ತಾ ಬಂದಿದೆ. ದಿವಂಗತ ರವಿ ಕೂಡ್ಲಗಿಯವರು ನಮ್ಮ ಮಧ್ಯ ಇರದಿದ್ದರೂ ಹತ್ತಾರು ಸಮರ್ಥ ಪ್ರತಿಭಾವಂತ ಶಿಷ್ಯರನ್ನು ಈ ನೆಲಕ್ಕೆ ಬಿಟ್ಟು ಹೋಗಿದ್ದಾರೆ. ಕೂಡ್ಲಗಿಯವರು ಕಷ್ಟದ ಜೀವನದಲ್ಲಿಯೇ ಜೀವನೋಲ್ಲಾಸವನ್ನು ಹೊಂದಿದ್ದರು. ಅವರ ಈಡಿ ಕುಟುಂಬ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಯಾರು ಮರೆಯಲಾರದಂತಹದ್ದು. ಅವರ ಸ್ಮರಣೆ ಮಾಡುವ ಮೂಲಕ ಅವರ ಸಂಗೀತಕ್ಕೆ ನೀಡಿದ ಕೊಡುಗೆಯನ್ನು ಸಮಾಜಕ್ಕೆ ತಿಳಿಸಿಕೊಡುವ ಕಾರ್ಯ ಆಗಲಿ ಎಂದರು.
ವೇದಿಕೆ ಮೇಲಿದ್ದ ಕೆ.ಎಸ್. ಕೌಜಲಗಿ ಮಾತನಾಡಿ ಸಂಗೀತ ಹಲವು ಸ್ಥರದಲ್ಲಿ ಮನುಷ್ಯನಿಗೆ ಪ್ರೇರಕವಾಗಿ ಕಾರ್ಯಮಾಡುತ್ತದೆ. ಅದು ಅಗಾಧ ಶಕ್ತಿ ಹೊಂದಿರುತ್ತದೆ. ಸಂಗೀತ ಏನೆಲ್ಲಾ ಸೃಷ್ಟಿಮಾಡಬಲ್ಲದು ಎಂಬುದನ್ನು ಕೇಳಿದ್ದೇವೆ. ಸಂಗೀತ ಭಿಕ್ಷುಕನಿಗೂ ಬದುಕನ್ನು ನೀಡುತ್ತದೆ ಎಂದರು.
ಈರಣ್ಣ ಪತ್ತಾರ ರವಿ ಕೂಡ್ಲಗಿಯವರನ್ನು ಸ್ಮರಿಸಿಕೊಂಡು ಅವರ ಪ್ರತಿಭೆಯನ್ನು ಪರಿಚಯಿಸಿದರು. ಜ್ಯೋತಿ ಕೂಡ್ಲಿಗಿ ಮಾತನಾಡಿದರು. ಅಲ್ಲದೇ ತಮ್ಮ ಶಿಷ್ಯರೊಂದಿಗೆ ಹಾಡುಗಾರಿಕೆ ನಡೆಸುಜಿಟ್ಟು ಡಾ. ಎ.ಎಲ್. ದೇಸಾಯಿವರ ಹಾಡುಗಳನ್ನು ಹಾಡಿದರು. ಹಾಗೆಯೇ ರವಿ ಕೂಡ್ಲಿಗಿಯವರ ಶಿಷ್ಯರಾದ ದಯಾನಂದ ಸುತಾರ, ರಮೇಶ ರಾಠೋಡ, ಪ್ರಶಾಂತ ಹಾರೋಗೇರಿ ತಬಲಾ ತ್ರಯೋ ಜುಗಲಬಂದಿ ನುಡಿಸಿದರು. ಹಾಗೆಯೇ ದ್ವಂದ್ವ ತಬಲಾ ವಾದನವನ್ನು ಬಾಲಪ್ರತಿಭೆಗಳಾದ ಸೋಹಂ ತಮನಕರ ಹಾಗೂ ನಿಖಿಲೇಶ್ ರಾವ್ ನಡಿಸಿದರು.
ತಬಲಾ ಸಾಥನ್ನು ಅಲ್ಲಮಪ್ರಭು ಕಡಕೋಳ, ಭೀಮಾಶಂಕರ ಬಿದನೂರ ಗುರುಬಸವ ಮಹಾಮನೆ, ಹಾಗೂ ಹಾಮರ್ೊನಿಯಂ ಸಾಥನ್ನು ಮಂಜುನಾಥ ಭಜಂತ್ರಿ, ಬಸು ಹಿರೇಮಠ ನೀಡಿದರು.