ಪ್ರಧಾನಿ ಕಂಡ ಕನಸು ಭಗ್ನಮಾಡಿದ ಮಹಾನಗರ ಪಾಲಿಕೆ

ಪ್ರಧಾನಿ ಕಂಡ ಕನಸು ಭಗ್ನಮಾಡಿದ ಮಹಾನಗರ ಪಾಲಿಕೆ

ಲೋಕದರ್ಶನ ವರದಿ

ಬಳ್ಳಾರಿ 24:ನಗರದ ಜನವಿಡಿ ಪ್ರದೇಶದಲ್ಲಿರುವ ವಡ್ಡರಬಂಡೆ ಪ್ರದೇಶದಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳಲ್ಲಿ ನಾಗರಿಕರು, ಮಹಿಳೆಯರು, ಪುರುಷರು, ಬಾಗಿಲು ಇಲ್ಲದೇ ಇರುವ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ದೇಶವನ್ನು ಸ್ವಚ್ಚಭಾರತ ಮಾಡಲು ಹಾಗೂ ಶೌಚಾಲಯ ನಿಮರ್ಾಣಕ್ಕಾಗಿ ಒಂದು ಒಳ್ಳೆಯ ಕನಸನ್ನು ಕಂಡಿದ್ದರು. ಆದರೆ ಅದಕ್ಕೆ ತದ್-ವಿರುದ್ದವಾಗಿ ನಗರದಲ್ಲಿ ಹಲವಾರು ಶೌಚಾಲಯಗಳು ಬಾಗಿಲುಗಳು ಇಲ್ಲದೇ ದುನರ್ಾಥದಿಂದ ತುಂಬಿದ್ದು. ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇಲ್ಲದಂತಾಗಿದೆ. ಇದನ್ನು ಅಲ್ಲಿಯ ಕೆಲವು ಮುಖಂಡರುಗಳು ಈಗಿನ ರಾಜಕೀಯ ಪರಿಸ್ಥಿತಿ ಇಂದ ನೋಡಿದರೂ ನೋಡದವರ ಹಾಗೆ ಮೂಗಿಗೆ ಬಟ್ಟೆಯನ್ನು ಇಟ್ಟುಕೊಂಡು ಹೋಗುವ ಪರಿಸ್ಥಿತಿ ಕಂಡುಬಂದಿತು. ಆದರು ಯಾರೊಬ್ಬರು ಸಾರ್ವಜನಿಕರಾಗಲಿ ಇಲ್ಲಿಯವರೆಗೆ ದೂರು ನಿಡಿಲ್ಲ. ಮಹಾನಗರ ಪಾಲಿಕೆಯ ವಾಡರ್ಿನ ಸದಸ್ಯರು, ತಮ್ಮ ವಾಡರ್ಿನಲ್ಲಿ ಇರುವ ಸಮಸ್ಯಗಳನ್ನು ಅವರಾಗಿಯೇ ಗುರುತಿಸಿಕೊಂಡು ಸರಿಪಡಿಸಬೇಕಿತ್ತು. ಆದರೂ ಇಲ್ಲಿಯವರೆಗೆ ವಾಡರ್ಿನ ಸದಸ್ಯರು, ಅತ್ತಕಡೆ ಗಮನ ಹರಿಸಿಲ್ಲ. ಮಹಾನಗರ ಪಾಲಿಕೆಯೂ ಗಮನ ಹರಿಸಿಲ್ಲ. ಈಗಲಾದರೂ ಮಹಾನಗರ ಪಾಲಿಕೆ ಅಧಿಕಾರಿಗಳಾಗಲೀ, ವಾಡರ್ಿನ ಸದಸ್ಯರಾಗಲೀ, ಭೇಟಿ ನೀಡಿ ಸಾರ್ವಜನಿಕ ಶೌಚಾಲಯಗಳ ಬಗ್ಗೆ ಹೆಚ್ಚಿನ ಆಧ್ಯತೆ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕೆಲವು ನೊಂದ ನಾಗರಿಕರು ತಿಳಿಸಿದರು.


ಸುದ್ದಿ ಓದಿ