ಕ್ರಿಸ್ತರ ಸಂದೇಶ, ಬಸವಣ್ಣನವರ ವಚನಗಳ ಸಾರ ಒಂದೇ: ಕೆ.ಬಿ.ಸಿದ್ದಲಿಂಗಪ್ಪ

ಕ್ರಿಸ್ತರ ಸಂದೇಶ, ಬಸವಣ್ಣನವರ ವಚನಗಳ ಸಾರ ಒಂದೇ: ಕೆ.ಬಿ.ಸಿದ್ದಲಿಂಗಪ್ಪ

ಬಳ್ಳಾರಿ 27:ಪ್ರವಾದಿ ಯೇಸು ಕ್ರಿಸ್ತರು ಬೆಟ್ಟದ ಮೇಲೆ ಮಾಡಿದ ಉಪದೇಶಗಳು ಅಷ್ಠಭಾಗ್ಯಗಳೆಂದು ಹೆಸರಾಗಿವೆ. ಇಡೀ ಕ್ರೈಸ್ತ ಧರ್ಮದ ಸಾರವು ಬೆಟ್ಟದ ಮೇಲಿನ ಪ್ರಸಂಗ ಮತ್ತು ಅಂತಿಮ ಶಿಲುಬೆಯ ಮೇಲಿನ ಬೆಟ್ಟದ ಪ್ರಸಂಗ, ಈ ಎರಡರಲ್ಲಿ ಅಡಕವಾಗಿದೆ. ಅಂತೆಯೇ ಬಸವಣ್ಣನವರ ಸಪ್ತ ಸೂತ್ರದಂತಿರುವ `ಕಲಬೇಡ ಕೊಲಬೇಡ'  ಎಂಬ ವಚನವು ವ್ಯಕ್ತಿ ಮತ್ತು ಸಮಷ್ಠಿಯ ಸೌಖ್ಯಕ್ಕೆ ಕಾರಣವಾಗುವಂತೆ ರಚನೆಯಾಗಿದ್ದು, ಧರ್ಮದ ಸಾರವನ್ನು ಒಳಗೊಂಡಿದೆ ಎಂದು ನಿವೃತ್ತ ಕಲಾ ಶಿಕ್ಷಕರಾದ ಕೆ.ಬಿ.ಸಿದ್ದಲಿಂಗಪ್ಪ ಅವರು ತಿಳಿಸಿದರು. ಅವರು ಬಳ್ಳಾರಿ ನಗರದ ನೆಹರು ಕಾಲೋನಿಯ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಲಿ|| ಅಚ್ಚಪ್ಪ ಸೋಮಪ್ಪ, ಹಂಪಮ್ಮ ದತ್ತಿ ಮತ್ತು ಲಿ|| ಅಂಗಡಿ ನಾಗಪ್ಪ ದತ್ತಿಯ  222ನೇ ಮಹಾಮನೆ ವಿಶೇಷ ಕ್ರೈಸ್ತ ಜಯಂತಿ ಕಾರ್ಯಕ್ರಮದಲ್ಲಿ ``ಬಸವ ವಚನ ಮತ್ತು ಕ್ರಿಸ್ತನ ಪರ್ವತ ಪ್ರಸಂಗ'' ವಿಷಯ ಕುರಿತು ಮಾತನಾಡುತ್ತಾ, ಪ್ರವಾದಿಗಳಿಬ್ಬರ ವಚನಗಳು ಕ್ಷಮೆ, ಪ್ರೇಮ, ಸೇವೆ, ತ್ಯಾಗ, ಸಮರ್ಪಣೆಗಳನ್ನು ಸಮಾಜ ಮುಖಿಯಾಗಿ ಸಾಧಿಸಲು ಹೇಳಿವೆ. ಭಕ್ತ ಮತ್ತು ದೇವರ ಮಧ್ಯೆ ಪುರೋಹಿತರಿಲ್ಲದ ನೇರ ಸಂಪರ್ಕವನ್ನು, ಸಮಾಜದಲ್ಲಿ ತುಳಿತಕ್ಕೊಳಗಾದ ದೀನದಲಿತರ ಏಳ್ಗೆಯಲ್ಲಿ ಪರಮಾತ್ಮನನ್ನು ಕಾಣುವ ಮಾರ್ಗವನ್ನು ಬೋಧಿಸಿದರು. ಮಾತ್ರವಲ್ಲ ತಾವು ಜೀವನದಲ್ಲಿ ಸಾಧಿಸಿ ನಿದರ್ಶನರಾದರು. ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕುರುಗೋಡು ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಉಮಾಪತಿ ಗೌಡ ವಹಿಸಿದ್ದರು. ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ  ಅಧ್ಯಕ್ಷರಾದ ಮಲ್ಲಿಕಾಜರ್ುನ ಅವರು ಅಧ್ಯಕ್ಷತೆ ವಹಿಸಿದ್ದರು. ವಿ.ಸಿ.ಜಿನಗಾ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಕೆ.ಇ.ಬಿ. ರುದ್ರಪ್ಪನವರು ನೆರವೇರಿಸಿದರು. ನಿವೃತ್ತ ಉಪನ್ಯಾಸಕರಾದ ರುದ್ರಪ್ಪರವರು ಶರಣ ಸಮರ್ಪಣೆ ಮಾಡಿದರು. ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮದ ನಿರ್ವಹಣೆಯನ್ನು ಡಯಟ್ನ ನಿವೃತ್ತ ಉಪನ್ಯಾಸಕರಾದ ರುದ್ರಮುನಿ ಅವರು ನಡೆಸಿಕೊಟ್ಟರು.


ಸುದ್ದಿ ಓದಿ