ಜನರನ್ನು ಮೆಚ್ಚಿಸಿದ ಚಕ್ರವ್ಯೂಹ ಪೌರಾಣಿಕ ನಾಟಕ
ಲೋಕದರ್ಶನ ವರದಿ
ಬಳ್ಳಾರಿ 03:ನಾಟಕ ಕಲೆಗಳನ್ನು ಎಲ್ಲರೂ ಪ್ರೋತ್ಸಾಹಿಸಬೇಕೆಂದು ಅಭಯಾಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಎ.ಸಿ.ವೆಂಕಟಸ್ವಾಮಿ ತಿಳಿಸಿದರು. ಶನಿವಾರ ರಾತ್ರಿ ತುಂಗ ಗಂಗಾ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಪ್ರಾಯೋಜಿತ ಕಾರ್ಯಕ್ರಮದಡಿ ವಿದ್ಯಾನಗರದ ಅಭಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಚಕ್ರವ್ಯೂಹ ಪೌರಾಣಿಕ ನಾಟಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಅವರು ಮಾತನಾಡಿದರು. ನಂದ ಶಾಲೆಯ ಅಧ್ಯಕ್ಷರಾದ ವಿ.ಗಾಂಧಿ ಮಾತನಾಡಿ ಕಿರುತೆರೆ, ಚಲನಚಿತ್ರಗಳ ಮಧ್ಯೆಯೂ ನಾಟಕಗಳನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಮಾಜಿ ಮಹಾಪೌರರಾದ ವೆಂಕಟರಮಣ ಮಾತನಾಡಿ ಇಂತಹ ಕಲೆಗಳ ಪ್ರದರ್ಶನಕ್ಕೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ ಎಂದು ನುಡಿದರು. ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಬೋಯಪಾಟಿ ವಿಷ್ಣುವರ್ಧನ್ ಮಾತನಾಡುತ್ತಾ, ಇಂತಹ ಪೌರಾಣಿಕ ನಾಟಕಗಳನ್ನು ಪ್ರದಶರ್ಿಸುವುದರ ಮೂಲಕ ಯುವ ಪೀಳಿಗೆಗೆ ಭಾರತದ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ವೇದಿಕೆಯಲ್ಲಿರುವ ಗಣ್ಯಮಾನ್ಯರಿಗೆ ಸನ್ಮಾನಿಸಲಾಯಿತು. ವೆಂಕಟಸ್ವಾಮಿ ಅವರಿಗೆ ಸಮಾಜ ಸೇವಾರತ್ನ, ಡಾ. ಶ್ರೀನಾಥ್ ಅವರಿಗೆ ವೈದ್ಯರತ್ನ, ಹಳ್ಳದ ಬಸಪ್ಪನವರಿಗೆ ಕಳಾರತ್ನ, ರಂಗಾರೆಡ್ಡಿ ಅವರಿಗೆ ವಾದ್ಯರತ್ನ ಬಿರುದು ನೀಡಿ ಸತ್ಕರಿಸಲಾಯಿತು. ನಂತರ ಪ್ರದಶರ್ಿಸಿದ ಚಕ್ರವ್ಯೂಹ ಪೌರಾಣಿಕ ನಾಟಕ ಮನಮನಸೂರೆಗೊಂಡಿತು. ಕಾರ್ಯಕ್ರಮದಲ್ಲಿ ನಾಟಕ ನಿದರ್ೆಶಕರಾದ ಬಸಪ್ಪ, ಬಸವರಾಜಸ್ವಾಮಿ, ನಾಗಭೂಷಣ, ಪರಶುರಾಮ, ನಾಗರಾಜ, ಶ್ರೀನಾಥ್, ರಾಮಬ್ರಹ್ಮಂ, ವೆಂಕೋಬಾಚಾರ್, ಜಿ.ಆರ್.ವೆಂಕಟೇಶುಲು, ಕುಮಾರಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.