ಮೊದಲ ಮ್ಯಾರಾಥಾನ ಯಶಸ್ವಿ: ಜನಾಕರ್ಷಿಸಿದ ಓಟದ ಸ್ಪರ್ಧೆ
ಸ್ಪರ್ಧಾಳುಗಳಿಂದ ಏಳು ಕಿ.ಮೀ.ಓಟ *ವಿಜೇತರಿಗೆ ನಗದು, ಮೆಡಲ್ ಬಹುಮಾನ
ಬೈಲಹೊಂಗಲ 28: ಮಾ ಭಾರತಿ ಸೇವಾ ಪೌಂಡೇಶನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ನಡೆದ ಓಟದ ಸ್ಪರ್ಧೆ (ಮ್ಯಾರಾಥಾನ್) ಭಾನುವಾರ ಜನಾಕರ್ಷಣೀಯವಾಗಿತ್ತು
ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಬೆಳಗಿನ ಜಾವ ಸೇರಿದ 600 ಕ್ಕೂ ಹೆಚ್ಚು ಸ್ಪರ್ಧಾಳುಗಳು ಹುರುಪು, ಹುಮ್ಮಸ್ಸಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಾಳುಗಳು ಆಟದ ಮೈದಾನದಿಂದ ಇಂಚಲ ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಗ್ರಾಮೀಣ ಆಯುರ್ವೇದಿಕ ಮಹಾವಿದ್ಯಾಲಯವರೆಗೆ ಏಳು ಕಿ.ಮೀ.ಓಡಿ ಬೆವರು ಹರಿಸಿದರು.
ಪ್ರತಿ ಸ್ಪರ್ಧೆಗಳು ಆಕರ್ಷಕವಾಗಿ ಓಡಿ ತಮ್ಮ ಪ್ರತಿಮೆ ತೋರಿದರು. ಬೆಳಗಾವಿ, ಧಾರವಾಡ, ಗೋವಾ, ಮಹಾರಾಷ್ಟ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆ, ತಾಲ್ಲೂಕಿನ ಯುವಕ, ಯುವತಿಯರು, ಪುರುಷರು, ಹಿರಿಯರು, ಕಿರಿಯರು ಭಾಗವಹಿಸಿದ್ದರು. ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸ್ಪರ್ಧೆಯಲ್ಲಿ ಓಡಿದರು. ಸ್ಥಳೀಯ ವಿಕಲಚೇತನ ಯುವಕ ಚೇತನ ಬಾರಿಗಿಡದ ಸ್ಪರ್ಧೆಸಿ ಓಡಿ ಎಲ್ಲರ ಗಮನ ಸೆಳೆದರು.
ಯುವ ಮುಖಂಡ ಸುನೀಲ ಮರಕುಂಬಿ ನೇತೃತ್ವದಲ್ಲಿ ನಡೆದ ಓಟದ ಸ್ಪರ್ಧೆಗೆ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ನಟ ಶಿವರಂಜನ ಬೋಳನ್ನವರ, ಉದ್ಯೆಮಿ ವಿಜಯ ಮೆಟಗುಡ್ಡ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ, ಕಿರಣ್ ಖೋತ್, ನಾನಾಸಾಹೇಬ ಪಾಟೀಲ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಸಂಘಟಕರಾದ ಡಾ.ಮಂಜುನಾಥ ಮುದಕನಗೌಡರ, ಶಿವಾನಂದ ಬಡ್ಡಿಮನಿ, ಗುರು ಮೆಟಗುಡ್ಡ, ಪ್ರಫುಲ್ ಪಾಟೀಲ, ಮಹಾಂತೇಶ ಹೊಸಮನಿ, ನಾಗರಾಜ ಮರಕುಂಬಿ, ಸುಭಾಸ ತುರಮರಿ, ಸಂತೋಷ ಹಡಪದ, ಸುನೀಲ ತುಳಜನ್ನವರ, ರಾಜು ಬಡ್ಲಿ, ಗೌತಮ ಇಂಚಲ, ಸುರಜ್ ಮತ್ತಿಕೊಪ್ಪ, ಚಂದನ್ ಕೌಜಲಗಿ, ಪ್ರಪುಲ್ ಉಳ್ಳಾಗಡ್ಡಿ, ರೋಹನ್ ಕಲಕುಟಕರ, ವಿನಯ ಬೋಳನ್ನವರ, ಅನೇಕರು ಸ್ಪರ್ಧೆ ಯಶಸ್ವಿಗೆ ಶ್ರಮಿಸಿದರು.
ಝೂಮ್ಮಾ ಡಾನ್ಸರ್ ಮಹೇಶ ಸ್ಪರ್ಧಾಳುಗಳಿಗೆ ಓಟದ ಕುರಿತು ನೃತ್ಯ ಮಾಡಿಸಿ ಉತ್ತೇಜನ ನೀಡಿದರು. ದೈಹಿಕ ಶಿಕ್ಷಕ ಬಸವರಾಜ ಭರಮನ್ನವರ ನಿರೂಪಿಸಿದರು.
ವಿಜೇತರು: ಪುರುಷರ ವಿಭಾಗದಲ್ಲಿ ಅಥಣಿಯ ಶಿವಾನಂದ ನಾಯ್ಕ ಪ್ರಥಮ, ಮುರಗೋಡದ ರಾಜು ಪಿರಂಗನ್ನವರ ದ್ವಿತೀಯ, ಧಾರವಾಡದ ಮಣಿಕಂಠ ಮಡಿವಾಳರ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಮೇಕಲಮರ್ಡಿಯ ಶಿಲ್ಪಾ ಹೊಸಮನಿ ಪ್ರಥಮ, ಕೀರ್ತಿ ಹೊಸಮನಿ ದ್ವಿತೀಯ, ಆಕಾಂಕ್ಷಾ ಗಣಿಬೈಲಕರ್ ತೃತೀಯ ಸ್ಥಾನ ಪಡೆದರು.ಬೈಲಹೊಂಗಲ ಎಂಸ್ಸೆಸ್ಸೆಆರ್ ಪ್ರೌಢಶಾಲೆ ಮೈದಾನದಲ್ಲಿ ಮಾ ಭಾರತಿ ಸೇವಾ ಪೌಂಡೇಶನ್ ವತಿಯಿಂದ ಭಾನುವಾರ ನಡೆದ ಓಟದ ಸ್ಪರ್ಧೆಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮೇಜರ ಸಿದ್ಧಲಿಂಗಯ್ಯ ಹಿರೇಮಠ, ಉದ್ಯೆಮಿ ವಿಜಯ ಮೆಟಗುಡ್ಡ, ಸುನೀಲ ಮರಕುಂಬಿ, ಅನೇಕರು ಇದ್ದರು