ಗಣಿನಾಡಿನಲ್ಲಿ ಭಾರತ ಬಂದ್ಗೆ ಮೊದಲನೇ ದಿನ ಮಿಶ್ರ ಪ್ರತಿಕ್ರಿಯೆ

ಗಣಿನಾಡಿನಲ್ಲಿ ಭಾರತ ಬಂದ್ಗೆ ಮೊದಲನೇ ದಿನ ಮಿಶ್ರ ಪ್ರತಿಕ್ರಿಯೆ

 ಬಳ್ಳಾರಿ 08:ಕಾಮರ್ಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಎರಡು ದಿನಗಳ ಭಾರತ ಬಂದ್ಗೆ ಮೊದಲನೇ ದಿನ ಮಿಶ್ರ ಪ್ರತಿಕ್ರಿಯೆ ಸಾರ್ವಜನಿಕರಿಂದ ಮೂಡಿ ಬಂದಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಧ್ಯಂತ ಭಾಗಂಶ ಯಶಸ್ವಿಯಾಗಿದೆ. ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು. ಸರಕಾರಿ ಬಸ್ಗಳು ಮತ್ತು ಖಾಸಗಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿರುವುದರಿಮದ ಬ್ಯಾಂಕ ವಹಿವಾಟು ಮತ್ತು ಸಿನಿಮಾ ಪ್ರದರ್ಶನ ರದ್ದಾಗಿದ್ದವು. ಆದರೆ ಪೆಟ್ರೊಲ್ಬಂಕ್ ಹಲವಾರು ವಿವಿದ ಬಗೆಯ ಹೋಟೆಲ್ಗಳು, ಅಂಗಡಿಗಳು, ಎಂದಿನಂತೆ ವ್ಯೆವಹಾರದಲ್ಲಿ ತೊಡಗಿದ್ದರು. ಜೊತೆಗೆ ರೈಲ್ವೇ ನಿಲ್ದಾಣದಲ್ಲಿ ರೈಲುಗಳ ಸಂಚಾರ ಎಂದಿನಂತಿದ್ದು. ಬೈಕ್, ಕಾರು, ಜಿಪು, ಆಟೊ, ಎಂದಿನಂತೆ ಸಂಚರಿಸುತ್ತಿದ್ದವು. ಕೆಲವು ಕಛೇರಿಗಳಲ್ಲಿ ಸಿಬ್ಬಂಧಿ ಹಾಜರಾತಿ ಕಡಿಮೆಯಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದ ವರಿದಿಯಾಗಿಲ್ಲ. ಹಿಗಾಗಿ ಗಡಗಿ ಚನ್ನಪ್ಪ ವೃತ್ತ ಮತ್ತು ಹೆಚ್.ಆರ್ ಗವಿಯಪ್ಪ ವೃತ್ತದಲ್ಲಿ ಸಂಘಟನಾಕಾರರು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯೆಕ್ತ ಪಡಿಸಿದ ಸನ್ನಿವೇಶಗಳು ನಡೆದಿವೆ. ಜನರಲ್ಲಿ ಪ್ರತಿಭಟನೆಗಾಗಿ ಬಂದ್ ಎನ್ನುವ ಮಾತು ಕೇಳಿಬಂತು. ವಿವದ ಕಾಮರ್ಿಕ ಸಂಘಟನೆಯ ಮುಖಂಡರು, ಕಾರ್ಯಕರ್ತರು, ರಸ್ತೆಗಳಲ್ಲಿ ಬೈಕ್ರ್ಯಾಲಿಯ ಮುಖಾಂತರ ಕೇಂದ್ರದ ವಿರುದ್ದ ಹಲವು ಪ್ರಮೂಖ ರಸ್ತೆಗಳಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು. ಎಲ್ಲಾ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕಗಳ ನೌಕರರು ಮುಷ್ಕರ ನಡೆಸಿದ್ದರಿಂದ ಮುಷ್ಕರದಲ್ಲಿ ಇದ್ದು ಕಾರ್ಯ ನಿರ್ವಹಿಸಲಿಲ್ಲ. ಬೆಳಿಗ್ಗೆ ಯಿಂದಲು ಅಂಗಡಿ ಹೋಟೆಲ್ಗಳು ತೆರೆದಿದ್ದರೂ ಗ್ರಾಹಕರಿಲ್ಲದೇ ವ್ಯಾಪಾರ ಅಲ್ಪಮಟ್ಟಿಗೆ ನಡೆದಿದೆ ಎಂದರು. ನಗರದ ಹಲವಾರು ಬಡಾವಣೆಗಳಲ್ಲಿ ಈ ಬಂದ್ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನಡೆದಿಲ್ಲ. ಕಾಪರ್ೊರೆಟ್ ಬಂಡವಾಳ ಹೂಡೆಕೆದಾರರ ಪರವಾದ ಕಾಮರ್ಿಕ ಕಾನೂನುಗಳ ತಿದ್ದುಪಡಿ ರದ್ದುಪಡಿಸಿ ಸಾರಿಗೆ ಕ್ಷೇತ್ರದ ಖಾಸಗಿಕರಣ ಕೈಬಿಡಬೇಕು. ಅಗತ್ಯ ವಸ್ತುಗಳ ಬೆಲೆ ಎರಿಕೆ ತಡೆಗಟ್ಟಿ ಎಲ್ಲಾ ಕಾಮರ್ಿಕರಿಗೂ ಮಾಸಿಕ 18 ಸಾವಿರ ರೂ ವೇತನ ನಿಗದಿಪಡಿಸಿ ಗುತ್ತಿಗೆ ಕಾಮರ್ಿಕ ಪದ್ದತಿಯನ್ನು ತೆಗೆಯಬೇಕು. ಅಸಂಘಟಿತ ಕಾಮರ್ಿಕರಿಗೆ ಸಾಮಾಜಿಕ ಭದ್ರತೆ ನಿದಿ ಸ್ಥಾಪಿಸಿ ಆಶಾ ಅಂಗನವಾಡಿ ಬಿಸಿಊಟ ನೌಕರರನ್ನು ಖಾಯಂ ಮಾಡಿ ಕಾಮರ್ಿಕ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಗೊಳಿಸಬೇಕು. ಎಲ್ಲಾ ನಿವೃತ್ತಿ ಕಾಮರ್ಿಕರಿಗೆ ಕನಿಷ್ಟ 6 ಸಾವಿರ ಪಿಂಚಣಿ ನೀಡಬೇಕು. ರೈಲ್ವೇ ವಿಮೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ವಿದೇಶಿಗರ ನೇರ ಬಂಡವಾಳ ಮಾಡಬಾರದು. ಅಜರ್ಿ ಸಲ್ಲಿಸಿದ 45 ದಿನದೊಳಗೆ ಕಾಮರ್ಿಕ ಸಂಘಟನೆಯನ್ನು ನೊಂದಣಿ ಮಾಡಬೇಕು. ಕೆಲಸ ಕಳೆದುಕೊಂಡ ಗಣಿ ಕಾಮರ್ಿಕರಿಗೆ ಉದ್ಯೋಗ, ಸಾಮಾಜಿಕ ಭದ್ರತೆ ನೀಡಿ ಎನ್.ಎಂ.ಡಿಸಿ ಖಾಸಗಿಕರಣ ಹುನ್ನಾರನ್ನು ಕೈಬಿಡಬೇಕು, ಹಿಗೆ ಹಲವಾರು ಬೇಡಿಕೆಯೊಂದಿಗೆ ಪ್ರತಿವೃತ್ತದಲ್ಲೂ ಬಾಷಣದ ಮೂಲಕ ಸಂಘಟನಾಕಾರರಿಗೆ ಮನವರಿಕೆ ಮಾಡಿದರು. ಈ ಬಂದ್ ಪ್ರತಿಕ್ರಿಯೆಗೆ ಸಿ.ಐಟಿಯು, ಎಐಟಿಯುಸಿ, ಐಎನ್.ಟಿಯುಸಿ, ಎಐಡಿಎಸ್ಓ, ನಜವಾದಿ ಮಹಿಳಾಸಂಘಟನೆ, ಆರ್ ಕೆ ಎಸ್, ರೈತಸಂಘಟನೆಗಳು, ಕೃಷಿ ಕೂಲಿಗಾರರ ಸಂಘ, ಅಖಿಲಾ ಭಾರತ ಕಿಸಾನ್ ಸಭಾ, ಕನರ್ಾಟಕ ಜನ ಶಕ್ತಿ ಸಂಘಟನೆ, ಈಶಾನ್ಯ ಕನರ್ಾಟಕ ಸಾರಿಗೆ ಕಾಮರ್ಿಕ ಸಂಘಟನೆ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಹಾಗೂ ಅಧಿಕಾರಿಗಳ ಸಂಘ, ಜೀವವಿಮಾ ನೌಕರರ ಸಂಘ ಸೇರಿದಂತೆ 14ಕ್ಕೂ ಹೆಚ್ಚು ಈ ಬಂದ್ ಗೆ ಬೆಂಬಲಿಸಿದ್ದವು. ಈ ಪ್ರತಿಭಟನೆಯಲ್ಲಿ ಕಾಮರ್ಿಕ ಸಂಘಟನೆಯ ಮುಖಂಡರಾದ ಕೆ.ಸತ್ಯಬಾಬು, ಟಿ.ಜಿ ವಿಠ್ಠಲ್, ನಾಗಬೂಷನ ರಾವ್, ದೇವದಾಸ್, ಆದಿಮೂತರ್ಿ, ಸೋಮಶೇಖರಗೌಡ, ಚಾಗನೂರು ಮಲ್ಲಿಕಾಜರ್ುನ ರೆಡ್ಡಿ, ಎಂ.ಆರ್ ಇಸ್ಮಾಯಿಲ್, ಎಐವೈಎಫ್ನ ಅಧ್ಯಕ್ಷ ಕಟ್ಟೆಬಸಪ್ಪ, ಸೇರಿದಂತೆ ಹಲವಾರ ಸಂಘಟನೆಯ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಸುದ್ದಿ ಓದಿ