ಲಿಂ.ಆನಂದ ಮಾಮನಿಯವರ ಪ್ರಥಮ ಪುಣ್ಯಸ್ಮರಣೆ
ಸವದತ್ತಿ 25: ಆನಂದ ಮಾಮನಿಯವರು ಜೀವಿತಾವಧಿಯಲ್ಲಿ ಧಾಮರ್ಿಕ ಪರಂಪರೆಯ ಹಾದಿಯಲ್ಲಿ ಸಾಗುವದರ ಜೊತೆಗೆ ಮತಕ್ಷೇತ್ರದ ಅನೇಕ ಮಠ ಮಂದಿರಗಳನ್ನು ಅಭಿವೃದ್ಧಿಪಡಿಸಿ ಜನರಲ್ಲಿ ಶಾಂತಿಯ ಸಂದೇಶವನ್ನು ಸಾರಿದಂತ ಧೀಮಂತ ವ್ಯಕ್ತಿಯಾಗಿದ್ದರು ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಯಡ್ರಾಂವಿ ರಸ್ತೆಯ ಮಾಮನಿಯವರ ಚಂದ್ರಮಾ ಫಾರ್ಮಹೌಸ್ನಲ್ಲಿ ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಲಿಂ.ಆನಂದ ಮಾಮನಿಯವರ ಪ್ರಥಮ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಮಾಮನಿಯವರ ಮನೆತನಕ್ಕೆ ವಿಶೇಷ ಸ್ಥಾನಮಾನವಿದ್ದು, ಸಿ.ಎಮ್.ಮಾಮನಿಯವರಿಂದ ಹಿಡಿದು ರಾಜಣ್ಣ ಮಾಮನಿ ಹಾಗೂ ಆನಂದ ಮಾಮನಿಯವರು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅಪಾರವಾಗಿವೆ ಎಂದರು. ಒಂದೊಂದು ಹಳ್ಳಿಯಲ್ಲಿ ಹತ್ತಕ್ಕೂ ಹೆಚ್ಚು ದೇವಸ್ಥಾನಗಳ ಅಭಿವೃದ್ದಿಯನ್ನು ಮಾಡಿದ ಕೀತರ್ಿ ಆನಂದ ಮಾಮನಿಯವರಿಗೆ ಸಲ್ಲುತ್ತದೆ ಎಂದರು. ನೇರ ನುಡಿ ಸ್ವಭಾವದ ಆನಂದ ಮಾಮನಿಯವರು ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಯರಗಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಮುನವಳ್ಳಿಯನ್ನು ಪುರಸಭೆಯನ್ನಾಗಿ ಪರಿವತರ್ಿಸಿ ಅಭಿವೃದ್ದಿಗೆ ಪ್ರೇರಣೆಯಾಗಿದ್ದಾರೆ ಎಂದರು.
ವಿರುಪಾಕ್ಷ ಮಾಮನಿಯವರು ಮಾತನಾಡಿ, ಆನಂದ ಮಾಮನಿಯವರು 15 ವರ್ಷದ ರಾಜಕೀಯ ಜೀವನದಲ್ಲಿ ಅಪಾರ ಪ್ರಮಾಣದಲ್ಲಿ ಜನಮನ್ನಣೆಯನ್ನು ಪಡೆದುಕೊಂಡಿದ್ದು, ಅವರು ಮಾಡಿದಂತ ಮಹಾನ್ ಕಾರ್ಯಗಳು ಮಾಮನಿ ಮನೆತನಕ್ಕೆ ಹೆಚ್ಚಿನ ಕೀತರ್ಿ ತಂದಿವೆ ಎಂದರು. ಬರುವಂತ ದಿನಗಳಲ್ಲಿ ಆನಂದ ಮಾಮನಿಯವರು ಹಾಕಿಕೊಟ್ಟಂತ ದಾರಿಯಲ್ಲಿ ಮತಕ್ಷೇತ್ರದ ಎಲ್ಲ ಜನರೊಂದಿಗೆ ಮಾಮನಿ ಮನೆತನದ ಪರವಾಗಿ ಎಲ್ಲರೊಂದಿಗೆ ಬೆರೆತು ತಮ್ಮ ಸೇವೆಗೆ ಸದಾ ಸಿದ್ದನಿರುತ್ತೇನೆ ಎಂದರು.
ಗೊರವನಕೊಳ್ಳದ ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ಬೆಟಸೂರಮಠದ ಶ್ರೀ ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಆನಂದ ಮಾಮನಿಯವರು ತಮ್ಮ ಅಧಿಕಾರದವಧಿಯಲ್ಲಿ ಸರಳತೆಯ ಜೀವನದೊಂದಿಗೆ ರಾಜಕೀಯ ಜೊತೆಗೆ ಆಧ್ಯಾತ್ಮವನ್ನು ಪರಿಪಾಲನೆ ಮಾಡಿಕೊಂಡು ಬಂದಿದ್ದರು ಎಂದರು.
ಮಹಾಂತೇಶ ಕವಟಗಿಮಠ, ಜಗದೀಶ ಶಿಂತ್ರಿ, ಬಸಯ್ಯ ಹಿರೇಮಠ, ನಿಂಗಪ್ಪ ಮೀಶಿ, ಗಂಗಮ್ಮತಾಯಿ ಮಾಮನಿ, ರತ್ನಾ ಮಾಮನಿ, ರೇಖಾ ಮಾಮನಿ, ಚೇತನಾ ಮಾಮನಿ, ಚಿನ್ಮಯ ಮಾಮನಿ, ಅನ್ನಪೂರ್ಣ ವಿನೋದ ಮಂಗಳವೇಡೆ, ಜಗದೀಶ ಕೌಜಗೇರಿ, ಸಿದ್ದಯ್ಯ ವಡಿಯರ, ಈರಣ್ಣ ಚಂದರಗಿ, ಬಾಬಣ್ಣ ಕಾಳಿ, ಎ.ಐ.ಶಿರಸಂಗಿ, ರಮೇಶ ಗೋಮಾಡಿ, ವಿಜಯ ಅಮಠೆ, ಪುಂಡಲೀಕ ಮೇಟಿ ಹಾಗೂ ಇತರರು ಉಪಸ್ಥಿತರಿದ್ದರು.
ಸಿ.ವೈ.ಸಂಬಯ್ಯನಮಠ ನಿರೂಪಿಸಿ ವಂದಿಸಿದರು