ತಾಳಿಕೋಟಿ

ಪರಿಸರ ನಾಶ ನಮ್ಮ ಬದುಕು ನಾಶ: ಗಡೇದ

ಪರಿಸರ ನಾಶ ನಮ್ಮ ಬದುಕು ನಾಶ: ಗಡೇದ

ತಾಳಿಕೋಟೆ07: ಭೂಮಿಯಲ್ಲಿ ನಾವು ಸುರಕ್ಷಿತವಾಗಿ ಬದುಕಲು ಮರ ಗಿಡಗಳನ್ನು ಬೆಳಸುವುದು ಅನಿವಾರ್ಯವಾಗಿದೆ. ಪರಿಸರ ನಾಶ ನಮ್ಮ ಬದುಕು ನಾಶ ಎಂದುಕೊಳ್ಳುವವರೆಗೆ ಪರಿಸರ ನಾಶ ನಿಲ್ಲುವದಿಲ್ಲ ಎಂದು ಹಸಿರು ಸಂಪದ ಬಳಗದ ಸಂಚಾಲಕಾರದ ಶರಣಬಸಪ್ಪ ಗಡೇದ ಹೇಳಿದರು.

ಅವರು ಪಟ್ಟಣದ ವೀ.ವಿ. ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎನ್ಸಿಸಿ., ಎನ್ಎಸ್ಎಸ್. ಇಕೋಕ್ಲಬ್, ವಾಯ್ಆರ್ಸಿ, ಇಎಲ್ಸಿ. ಮತ್ತು ಸಸ್ಯಶಾಸ್ತ್ರ ವಿಭಾಗದ ದಿಂದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಒಬ್ಬ ಮನಷ್ಯ ಹತ್ತುಗಿಡಗಳನ್ನು ಬೆಳೆಸುವ ತನಖ ಪರಿಸರ ಅಸಮತೋಲನ ನಿಲ್ಲುವದಿಲ್ಲ. ಒಬ್ಬ ಹಸಿರು ಪ್ರೇಮಿಯಾಗಿ, ಪರಿಸರವಾದಿಯಾಗಿ ಹಸಿರನ್ನು ಬೆಳೆಸಲು ಯುವಕರಿಗೆ ಕರೆ ನೀಡಿದರು.

ಪ್ರಾಚಾರ್ಯ ಆರ್.ವಿ.ಜಾಲವಾದಿ ಮಾತನಾಡಿ, ಪರಿಸರದೊಂದಿಗೆ  ಮಾನವನ ಅವಿನಾಭಾವ ಸಂಬಂಧವಿದೆ. ಎಲ್ಲ ಜೀವ ಸಂಕುಲಗಳೊಂದಿಗೆ ಸಮತೋಲನದ ಬದುಕು ಕಟ್ಟಿಕೊಳ್ಳದಿದ್ದರೆ ಭೂಮಿಯ ನಾಶ ಖಂಡಿತ. ಹೀಗಾಗಿ ಯುವ ವಿದ್ಯಾಥರ್ಿ ಮಿತ್ರರು ಹಸಿರಿನ ಪೋಷಣೆ, ಸಂರಕ್ಷಣೆ, ಸುಂದರ ಪರಿಸರ, ಸ್ವಚ್ಛ ಪರಿಸರ ಆರೋಗ್ಯಯುತ ಬದುಕಿಗೆ ನಾಂದಿಯಾಗುತ್ತದೆ ಎಂದರು.

ಮಹಾವಿದ್ಯಾಲಯದ ಎನ್ಸಿಸಿ ಅಧಿಕಾರಿ ಆರ್.ವಿ.ಮಿಸ್ಕಿನ, ಎನ್.ಎಸ್.ಎಸ್ ಅಧಿಕಾರಿಗಳಾದ ರಮೇಶ ಜಾಧವ, ವಾಯ್.ಆರ್.ಸಿ. ಘಟಕಾಧಿಕಾರಿಗಳಾದ ಡಾ.ಎ.ಎ.ಅಬ್ಬಾರ, ಸಸ್ಯಶಾಸ್ತ್ರ ವಿಭಾಗದ ಪ್ರಿಯಾಂಕ ಬಿದರಕುಂದಿ ವೇದಿಕೆಮೇಲಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು ಸವಿಂತಾಜಲಿ ನಾಡಗೌಡರ ನಿರೂಪಸಿದರು. ಲಲಿತಾ ಗೌಡರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಆರ್.ವಿ.ಮಿಸ್ಕಿನ ಮಾತನಾಡಿದರು. ರಮೇಶ ಜಾಧವ ವಂದಿಸಿದರು.


ಸುದ್ದಿ ಓದಿ